ನಟ ದಿಲೀಪ್ಕುಮಾರ್ಗೆ ಲಘು ಹೃದಯಾಘಾತ
Publish Date: Tue, 17 Sep 2013 (10:25 IST)
Updated Date: Tue, 17 Sep 2013 (10:24 IST)
ಬಾಲಿವುಡ್ನಲ್ಲಿ ಟ್ರಾಜಿಡಿ ಕಿಂಗ್ ಎಂದೇ ಕರೆಯಲ್ಪಡುವ ನಟ ದಿಲೀಪ್ ಕುಮಾರ್ ಅವರನ್ನು ಭಾನುವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಘು ಹೃದಯಾಘಾತಕ್ಕೊಳಗಾದ ಕಾರಣ ಚಿಕಿತ್ಸೆಗಾಗಿ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಬಾಂದ್ರಾ ಪಶ್ಚಿಮ ಪ್ರದೇಶದಲ್ಲಿರುವ ಲೀಲಾವತಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಅವರನ್ನು ತುರ್ತು ನಿಗಾ ಘಟಕದಲ್ಲಿ ಇಡಲಾಗಿದೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವಕ್ತಾರ ಡಾ.ನರೇಶ್ ತ್ರಿವೇದಿ ತಿಳಿಸಿದ್ದಾರೆ. ಭಾನುವಾರ ರಾತ್ರಿ 9 ಗಂಟೆ ಸಮಯದಲ್ಲಿ ಅವರಿಗೆ ಲಘು ಹೃದಯಾಘಾತವಾಗಿತ್ತು.ಬಾಲಿವುಡ್ನ ಪ್ರಸಿದ್ಧ ನಟರಾದ ದಿಲೀಪ್ ಕುಮಾರ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು. 1944ರಲ್ಲಿ ಜ್ವರ್ ಭಾಟಾ ಚಿತ್ರದ ಮೂಲಕ ತಮ್ಮ ಬೆಳ್ಳಿಪರದೆ ಯಾನವನ್ನು ಆರಂಭಿಸಿದ ದಿಲೀಪ್ ಆರು ದಶಕಗಳ ಕಾಲ ಬಾಲಿವುಡ್ ಚಿತ್ರರಂಗವನ್ನು ಆಳಿದರು. ಈವರೆಗೆ ಎಂಟು ಬಾರಿ ಫಿಲಂಫೇರ್ನಲ್ಲಿ ಅತ್ಯುತ್ತಮ ನಟನೆಗಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ದಿಲೀಪ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ.