ಧೋನಿ - ದೀಪಿಕಾ ಜತೆಯಾಟದ ರೂಮರ್
Publish Date: Thu, 25 Oct 2007 (11:37 IST)
Updated Date: Thu, 25 Oct 2007 (11:36 IST)
ಟ್ವೆಂಟಿ20 ಕ್ರಿಕೆಟ್ ಬಳಿಕ ಅಬ್ಬರದ ಪ್ರಚಾರ, ಪ್ರಸಿದ್ಧಿ ಕಾಣುತ್ತಿರುವ ಭಾರತೀಯ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರು ಇದೀಗ ಬಾಲಿವುಡ್‌ನಲ್ಲೂ ಸಿಕ್ಸರ್-ಬೌಂಡರಿಗಳಷ್ಟೇ ಅಬ್ಬರದಿಂದ ಕೇಳತೊಡಗುತ್ತಿದೆ.ಇದಕ್ಕೆ ಕಾರಣ ಬೇರೇನೂ ಅಲ್ಲ. ಧೋನಿ ಹೇಗಿದ್ದರೂ ಸ್ಟೈಲಿಶ್ ಬ್ಯಾಟ್ಸ್‌ಮನ್-ವಿಕೆಟ್ ಕೀಪರ್. ಹಾಗಾಗಿ ಬಾಲಿವುಡ್‌ನ ಸ್ಟೈಲಿಶ್ ಹುಡುಗಿಯರ ಜತೆಯಲ್ಲಿ ಅವರ ಹೆಸರು ಥಳುಕುಹಾಕಿಕೊಳ್ಳುತ್ತಿದೆ.ಬಾಲಿವುಡ್‌ನ ರೂಮರ್ ಮಿಲ್‌ಗಳಲ್ಲಿ ಕೇಳಿಬರುತ್ತಿರುವ ಇಂಥ ಯಾವುದೇ ಸುದ್ದಿಗಳಿಗೆ ಕೊರತೆ ಇಲ್ಲ.ಇತ್ತೀಚೆಗೆ ಮುಂಬಯಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯ ವೀಕ್ಷಿಸಲು ಓಂ ಶಾಂತಿ ಓಂ ಚಿತ್ರದ ನಾಯಕಿ, ಮಾಡೆಲ್ ದೀಪಿಕಾ ಪಡುಕೋಣೆ ಆಗಮಿಸಿದ್ದೇ ಈ ಗಾಸಿಪ್‌ಗೆ ಹೇತು.ಪ್ರೇಕ್ಷಕರ ಗ್ಯಾಲರಿಯಲ್ಲಿ ದೀಪಿಕಾ ಅವರು ಶಾರೂಕ್ ಜತೆ ಸೇರಿ ಟೀಂ ಇಂಡಿಯಾವನ್ನು ಪ್ರೋತ್ಸಾಹಿಸುತ್ತಿದ್ದರು.ಈ ಗಾಸಿಪ್‌ಗಳ ಕುರಿತಾಗಿ ದೀಪಿಕಾರನ್ನು ಪ್ರಶ್ನಿಸಿದರೆ, ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ, ನಾನೊಬ್ಬ ದೊಡ್ಡ ಕ್ರಿಕೆಟ್ ಫ್ಯಾನ್. ನಾನು ಇಡೀ ತಂಡವನ್ನು ಪ್ರೋತ್ಸಾಹಿಸುತ್ತಿದ್ದೆ ಮತ್ತು ಈಗಲೂ ಅಭಿನಂದಿಸುತ್ತೇನೆ ಎಂದಷ್ಟೇ ಉತ್ತರಿಸಿದ್ದಾರೆ.ಈ ದೀಪಿಕಾಳನ್ನು ಧೋನಿಯೇ ಸ್ವತಃ ಆಹ್ವಾನಿಸಿದ್ದರು ಎಂಬುದು ಒಂದು ಕಡೆ ಸುದ್ದಿಯಾಗುತ್ತಿದ್ದರೆ, ಇನ್ನೊಂದು ಕಡೆಯಿಂದ ಧೋನಿ ಹೆಸರು ಮಾಜಿ ವಿಶ್ವಸುಂದರಿ, ನಟಿ ಪ್ರಿಯಾಂಕಾ ಚೋಪ್ರಾ ಜತೆಗೂ ಕೇಳಿಬರುತ್ತಿದೆ.