ಧೂಮ್ ಮಚಾಲೆ3 ಸಚಿನ್ ಗೆ ಅರ್ಪಿತ !
Publish Date: Tue, 12 Nov 2013 (14:40 IST)
Updated Date: Tue, 12 Nov 2013 (14:40 IST)
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಸಕ್ರಿಯ ಕ್ರಿಕೆಟ್ ಆಟದಿಂದ ನಿವೃತ್ತರಾಗುತ್ತಿರುವ ಸನ್ನಿವೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಲು ಎಲ್ಲರೂ ಸಿದ್ಧರಾಗಿದ್ದಾರೆ. ಅದೇ ರೀತಿ ಬಾಲಿವುಡ್ ನಟ, ನಿರ್ದೇಶಕ ಅಮೀರ್ ಖಾನ್ ಸಹ ವಿಶೇಷ ರೀತಿಯಲ್ಲಿ ಸಚಿನ್ ಅವರಿಗೆ ಗೌರವ ಸೂಚಿಸಲು ಸಿದ್ಧ ಆಗಿದ್ದಾರೆ. ಜೊತೆ ಅವರ ‘ಧೂಂ 3’ ಚಿತ್ರದ ಪ್ರಚಾರಕ್ಕೂ ವಿಭಿನ್ನ ರೀತಿಯಲ್ಲಿ ಸಿದ್ಧತೆ ನಡೆಸಿದ್ದಾರೆ. ಅಂದರೆ ಧೂಮ್ 3 ಯ ಧೂಮ್ ಮಚಾಲೆ ಹಾಡನ್ನು ಈ ಸಮಯದಲ್ಲಿ ಸಚಿನ್ ಅವರಿಗೆ ಡೆಡಿಕೇಟ್ ಮಾಡಲು ನಿರ್ಧರಿಸಿದ್ದಾರಂತೆ. ಭಾರತ ಮಾತ್ರವಲ್ಲ ವಿಶ್ವ ಕಂಡ ಹೆಮ್ಮೆಯ ಆಟಗಾರ ಸಚಿನ್. ಅವರು ಎಲ್ಲರಿಗೂ ಸ್ಫೂರ್ತಿ ದೇವತೆ. ಅವರ ನಿವೃತ್ತಿಯಿಂದ ನಮಗೆಲ್ಲ ಬೇಸರ ಉಂಟಾಗಿದೆ. ಸಚಿನ್ಗೆ ಗೌರವ ತೋರುವುದು ನಮ್ಮ ಕರ್ತವ್ಯ ಎಂದು ಕಾರ್ಯಕ್ರಮ ಒಂದರಲ್ಲಿ ಅಮೀರ್ ಹೇಳಿದ್ದಾರೆ. ಸಚಿ ದಾಖಲೆಗಳ ವೀರ . ಆದ್ದರಿಂದ ಅವರ ನಿವೃತ್ತಿಯ ಸಂದರ್ಭದಲ್ಲಿ ನಾವು ಹೆಚ್ಚು ಪ್ರೀತಿಯಿಂದ ನಮ್ಮ ‘ಧೂಂ ಮಚಾಲೆ’ ಹಾಡನ್ನು ಜೀನಿಯಸ್ ಸಚಿನ್ಗೆ ಅರ್ಪಿಸುತ್ತಿದ್ದೇವೆ’’ ಎಂದು ಅಮೀರ್ ಹೇಳಿದ್ದಾರೆ. ಮುಂಬೈನಲ್ಲಿ ಸಚಿನ್ ತಮ್ಮ ಕೊನೆಯ ಟೆಸ್ಟ್ ಆಡುವ ಮುನ್ನ ಈ ಹಾಡನ್ನು ಅರ್ಪಿಸಲಾಗುತ್ತದೆ.ಬಹು ನಿರೀಕ್ಷಿತ ಚಿತ್ರ ‘ಧೂಂ 3’ ಚಿತ್ರದಲ್ಲಿ ಅಮೀರ್ ಖಳನಾಯಕ. ಅಭಿಷೇಕ್ ಬಚ್ಚನ್, ಕತ್ರಿನಾ ಕೈಫ್ ಮತ್ತು ಉದಯ್ ಚೋಪ್ರಾ ಮುಖ್ಯ ಪಾತ್ರಗಳಲ್ಲಿ ಕಾಣಸಿಗುತ್ತಿದ್ದಾರೆ.