Article Bollywood Gossips %e0%b2%a7%e0%b3%82%e0%b2%ae%e0%b3%8d %e0%b2%a8%e0%b2%82%e0%b2%a4%e0%b2%b0 %e0%b2%a6%e0%b3%8b%e0%b2%b8%e0%b3%8d%e0%b2%a4%e0%b2%be%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf %e0%b2%85%e0%b2%ad%e0%b2%bf%e0%b2%b7%e0%b3%87%e0%b2%95%e0%b3%8d %e0%b2%9c%e0%b2%be%e0%b2%a8%e0%b3%8d 108100400040_1.htm

Daily Horoscope

Select Your Language

Notifications

webdunia
webdunia
webdunia
webdunia

ಧೂಮ್ ನಂತರ ದೋಸ್ತಾನದಲ್ಲಿ ಅಭಿಷೇಕ್-ಜಾನ್

ಧೂಮ್ ದೋಸ್ತಾನ ಅಭಿಷೇಕ್ ಬಚ್ಚನ್ ಜಾನ್ ಅಬ್ರಾಹಾಂ
IFM
'ಧೂಮ್' ಚಿತ್ರದಲ್ಲಿ ವೇಗವಾಗಿ ಓಡುವ ಬೈಕ್ ಸವಾರಿ ಮಾಡುವ ಮೂಲಕ ಮಿಂಚಿದ ಅಭಿಷೇಕ್ ಬಚ್ಚನ್ ಮತ್ತು ಜಾನ್ ಅಬ್ರಾಹಾಂ 'ದೋಸ್ತಾನ' ಚಿತ್ರದಲ್ಲಿ ಮತ್ತೆ ಒಟ್ಟಾಗಿ ನಟಿಸಿದ್ದಾರೆ. ಕರಣ್ ಜೋಹರ್‌ರ ಧರ್ಮ ಪ್ರೋಡಕ್ಷನ್ಸ್‌ನಿಂದ ಹೊರಬರುತ್ತಿರುವ 'ದೋಸ್ತಾನ', ತ್ರಿಕೋನ ಪ್ರೇಮಕತೆ ಹೊಂದಿದೆ. ಇದರ ಜೊತೆ ಸುಂದರವಾದ ಬೀಚ್‌ನಲ್ಲಿ ನೀಳಸುಂದರಿ ಶಿಲ್ಪ ಜಾನ್ ಮತ್ತು ಅಭಿಯೊಂದಿಗೆ ಐಟಂ ಸಾಂಗ್‌ನಲ್ಲಿ ಕುಣಿದು ಕುಪ್ಪಳಿಸಿ ಚಿತ್ರವನ್ನು ರಂಗೇರಿಸಿದ್ದಾರೆ.

ಚಿತ್ರದಲ್ಲಿ ಜಾನ್ ಮತ್ತು ಅಭಿಷೇಕ್ ಪರಮಾಪ್ತ ಸ್ನೇಹಿತರು. ಅಭಿಷೇಕ್ ಪ್ರಿಯಾಂಕಳ ಪ್ರೇಮದಲ್ಲಿ ಬೀಳುತ್ತಾರೆ ಆದರೆ ಪ್ರಿಯಾಂಕ ಜಾನ್‌ರನ್ನು ಪ್ರೀತಿಸುತ್ತಾರೆ. ಜಾನ್‌ಗೆ ಈ ವಿಷಯ ತಿಳಿದಾಗ ಅವರು ಪ್ರಿಯಾಂಕ, ಅಭಿಷೇಕ್ ಬಳಿ ಹೋಗಬೇಕೆಂದು ಬಯಸಿ ತಾವು ಸಲಿಂಗಕಾಮಿ ಆಗಿರುವುದಾಗಿ ನಟಿಸುತ್ತಾರೆ. ಬಾಬಿ ಡಿಯೋಲ್‌ರ ಎಂಟ್ರಿಯಿಂದ ಈ ವಿಷಯ ಇನ್ನಷ್ಟು ಜಟಿಲಗೊಳ್ಳುತ್ತದೆ. ನಿಜವಾಗಿಯೂ ಸಲಿಂಗಕಾಮಿಯಾಗಿರುವ ಬಾಬಿ ಡಿಯೋಲ್ ಜಾನ್‌ರನ್ನು ಇಷ್ಟಪಡತೊಡಗುತ್ತಾರೆ!.

ಆದ್ದರಿಂದ ಬಾಬಿ ಡಿಯೋಲ್ ಸಹ ಚಿತ್ರದಲ್ಲಿ ಹೊಸದಾದ ಅವತಾರವೆತ್ತಿದ್ದಾರೆ. ಪ್ರಿಯಾಂಕ ಮತ್ತು ಜಾನ್‌ರ ಅಂಗ ಪ್ರದರ್ಶನದಿಂದ ಕೂಡಿದ ಚಿತ್ರದ ಪ್ರಮೊಗಳು ಈಗಾಗಲೇ ಕಣ್ಸೆಳೆಯುತ್ತಿವೆ.

ತರುಣ್ ಮಸುಕಾನಿ ಅವರಿಂದ ನಿರ್ದೇಶಿಸಲ್ಪಟ್ಟಿರುವ ದೋಸ್ತಾನ ನವಂಬರ್ 14ರಂದು ಬಿಡುಗಡೆಯಾಗಲಿದೆ.

Share this Story:

Follow Webdunia kannada