Article Bollywood Gossips %e0%b2%a7%e0%b2%a8%e0%b3%8d%e2%80%8c %e0%b2%a7%e0%b2%a8%e0%b2%be%e0%b2%a7%e0%b2%a8%e0%b3%8d %e0%b2%97%e0%b3%8b%e0%b2%b2%e0%b3%8d 107080200013_1.htm

Select Your Language

Notifications

webdunia
webdunia
webdunia
webdunia

ಧನ್‌ ಧನಾಧನ್ ಗೋಲ್

ಬಾಲಿವುಡ್
ಬಾಲಿವುಡ್‌ನಲ್ಲಿ ಕ್ರೀಡಾ ಕಥಾನಕದ ಚಿತ್ರವೊಂದು ಸಿದ್ಧವಾಗಿರುವುದು ಎಲ್ಲರಿಗೂ ಗೊತ್ತು. ಶಾರೂಕ್‌ ನಾಯಕನಾಗಿರುವ ಚಕ್ ದೇ ಇಂಡಿಯಾ. ಇದು ಆಗಸ್ಟ್10ರಂದು ತೆರೆಕಾಣಲಿದ್ದು, ಇದೀಗ ಇನ್ನೊಂದು ಚಿತ್ರ ಇದೇ ಜಾಡಿನಲ್ಲಿದೆ.

ಗೋಲ್ ಹೆಸರಿನಲ್ಲಿ ಯುಟಿವಿ ನಿರ್ಮಿಸುತ್ತಿರುವ ಪ್ರಸ್ತುತ ಚಿತ್ರದ ಹೆಸರಿನಲ್ಲಿ ಈಗ ಬದಲಾವಣೆ ಆಗಿದೆ. ಹೊಸ ಹೆಸರು 'ಧನ್‌ ಧನಾಧನ್ ಗೋಲ್'.

ಪ್ರಸ್ತುತ ಗೋಲ್ ಹೊಸ ಹೆಸರಿನೊಂದಿಗೆ ಆಗಸ್ಟ್‌ 10ರಂದು ತೆರೆ ಕಾಣುವ ಸಿದ್ಧತೆ ಇತ್ತು. ಆದರೆ ಇದು ಬದಲಾಗಿದೆ. ಏಕಕಾಲದಲ್ಲಿ ಕ್ರೀಡಾ ಕಥಾನಕದ ಎರಡು ಚಿತ್ರಗಳು ಪ್ರದರ್ಶನದಲ್ಲಿರುವುದು ಬೇಡ ಎಂಬ ಮನೋಭಾವ ಇದಕ್ಕೆ ಕಾರಣವಂತೆ.

ಏಕಕಾಲದಲ್ಲಿ ಚಿತ್ರ ಬಿಡುಗಡೆ ಮಾಡದಿರಲು ಇನ್ನೊಂದು ಕಾರಣವೆಂದರೆ ಶಾರೂಕ್- ಯಶ್‌ ರಾಜ್ ಅಮುಪಮ ಜೋಡಿಯ ಉತ್ತಮ ಚಿತ್ರಕ್ಕೆ ಹಾನಿಯಾಗದಿರಲಿ ಎಂಬ ಸದುದ್ದೇಶವಂತೆ.


ಗೋಲ್‌ ಚಿತ್ರವನ್ನು ಇನ್ನೊಂದು ದಿನಾಂಕದಂದು ತೆರೆಗಿಳಿಸುವ ಸಿದ್ಧತೆಯಲ್ಲಿ ಯುಟಿವಿ ತಂಡ ಪ್ರಯತ್ನ ನಡೆಸಿದೆ.

Share this Story:

Follow Webdunia kannada