Article Bollywood Gossips %e0%b2%a7%e0%b2%95%e0%b3%8d %e0%b2%a7%e0%b2%95%e0%b3%8d %e0%b2%b9%e0%b3%81%e0%b2%a1%e0%b3%81%e0%b2%97%e0%b2%bf%e0%b2%97%e0%b3%86 %e0%b2%95%e0%b2%be%e0%b2%a1%e0%b2%bf%e0%b2%a6 %e0%b2%b8%e0%b2%b0%e0%b3%8b%e0%b2%9c%e0%b3%8d %e0%b2%a8%e0%b3%86%e0%b2%a8%e0%b2%aa%e0%b3%81 107112800005_1.htm

Daily Horoscope

Select Your Language

Notifications

webdunia
webdunia
webdunia
webdunia

ಧಕ್ ಧಕ್ ಹುಡುಗಿಗೆ ಕಾಡಿದ ಸರೋಜ್ ನೆನಪು

ಮಾಧುರಿ ದೀಕ್ಷಿತ್
IFM
ಆಜಾ ನಾಚ್‌ ಲೇ ಚಿತ್ರದ ಮೂಲಕ ಬಾಲಿವುಡ್ ಚಿತ್ರಜಗತ್ತಿಗೆ ಪುನರಾಗಮನ ಘೋಷಿಸುತ್ತಿರುವ ನಟಿ ಮಾಧುರಿ ದೀಕ್ಷಿತ್, ನನ್ನ ಪುನರಾಗಮನದ ಚಿತ್ರದ ನೃತ್ಯ ನಿರ್ದೇಶನ ಸರೋಜ್ ಖಾನ್ ಮಾಡಿದ್ದರೆ ಸರಿಯಾಗುತ್ತಿತ್ತು. ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಅವರಿಲ್ಲದ್ದು ಅಭಾಸವಾದಂತಾಗುತ್ತಿತ್ತು ಎನ್ನುವ ಅಭಿಪ್ರಾಯ ಮಂಡಿಸಿದ್ದಾರೆ.

ನೃತ್ಯದ ಬಲದಿಂದಲೇ ಬಾಲಿವುಡ್ ಆಳಿದ ಧಕ್ ಧಕ್ ಹುಡುಗಿಗೆ ಸರೋಜ್ ಖಾನ್ ಅವರ ನೃತ್ಯ ನಿರ್ದೇಶನದ ಎಂದರೆ ಅಚ್ಚುಮೆಚ್ಚು, ಸರೋಜ್ ನನ್ನ ಗುರು ಅವಳಿಲ್ಲದೇ ನಾನು ಬಾಲಿವುಡ್‌ನಲ್ಲಿ ಹೆಸರು ಮಾಡಲು ಸಾಧ್ಯವೇ ಇರುತ್ತಿರಲಿಲ್ಲ ಎಂದು ಗುರು ಸರೋಜ್ ಅವರನ್ನು ಮನಸಾರೆ ನೆನೆಸಿಕೊಂಡಿದ್ದಾರೆ. ಶುಕ್ರವಾರ ಬಿಡುಗಡೆಯಾಗಲಿರುವ ಆಜಾ ನಾಚ್‌‍ ಲೇ ಚಿತ್ರದ ಪ್ರಿಮಿಯರ್ ಷೋಗೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಅಂದು ಮತ್ತು ಇಂದು ಬಾಲಿವುಡ್‌ನಲ್ಲಿ ನನ್ನ ಹೆಸರು ಮತ್ತು ಪ್ರತಿಭೆಯ ಅನಾವರಣಕ್ಕೆ ಸರೋಜ್ ಕಾರಣ. ನನ್ನ ಹೆಸರು, ಖ್ಯಾತಿ ಬಾಲಿವುಡ್‌ನಲ್ಲಿ ಇರುವವರೆಗೆ ಸರೋಜ್ ಹೆಸರು ಕೂಡ ಬಾಲಿವುಡ್‌ನಲ್ಲಿ ಇರಲೇಬೇಕು.


ಆಜಾ ನಾಚ್‌ ಲೇಯ ನೃತ್ಯ ನಿರ್ದೇಶನವನ್ನು ವೈಭವಿ ಮರ್ಚಂಟ್ ಮಾಡಿದ್ದು, ಮಾಧುರಿ ದೀಕ್ಷಿತ್ ಅಭಿನಯದ ಕಜರಾರೆಗೆ ಅವರೇ ನೃತ್ಯ ಸಂಯೋಜನೆ ಮಾಡಿದ್ದಾರೆ. ಆಜಾ ನಾಚ್‌ ಲೇಯ ನೃತ್ಯ ನಿರ್ದೇಶನದ ಜವಾಬ್ದಾರಿಯನ್ನು ಸರೋಜ್‌ಗೆ ವಹಿಸಲಾಗಿದೆ ಎಂದು ಮೊದಲು ವದಂತಿಗಳು ಇದ್ದವು.
webdunia
PTI

ತೇಜಾಬ್‌ನ ಏಕ್ ದೋ ತೀನ್ ಲಡಕಿಯ ಮಾತಿನಲ್ಲಿ ಹೇಳಬೇಕಾದರೆ ವೈಭವಿ ಈ ಚಿತ್ರದಲ್ಲಿ ಕಠಿಣ ಪರಿಶ್ರಮ ಹಾಕಿರುವುದು ಎದ್ದು ಕಾಣುತ್ತಿದೆ. ನನ್ನ ನೃತ್ಯಗಳನ್ನು ಸಂಯೋಜಿಸುವ ಮುನ್ನ ನನ್ನ ಅಭಿನಯದ ಸಾಕಷ್ಟು ಚಿತ್ರ ನೋಡಿ, ನಿರ್ದೇಶನಕ್ಕೆ ಕೈಹಾಕಿರುವುದು ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ನನಗೆ ಅನಿಸಿದ ಮಟ್ಟಿಗೆ ವೈಭವಿ ಅವರು, ತೇಜಾಬ್‌ನಿಂದ ಸೈಲಾಬ್ ವರೆಗಿನ ನನ್ನ ಅಭಿನಯದ ಚಿತ್ರ ನೋಡಿರಬಹುದು. ಈ ಎಲ್ಲ ಚಿತ್ರಗಳನ್ನು ನೋಡಿದ ನಂತರ ನಿರೀಕ್ಷೆಗೆ ಮೀರಿ ಕೆಲಸ ಮಾಡಬೇಕಾದ ಅನಿವಾರ್ಯತೆಯನ್ನು ಮನಗಂಡಿದ್ದಾರೆ. ಆದ್ದರಿಂದಲೇ ಸಾಕಷ್ಟು ಪರಿಶ್ರಮ ವಹಿಸಿದ್ದು ಚಿತ್ರದುದ್ದಕ್ಕೂ ಎದ್ದು ಕಾಣುತ್ತಿದೆ.

ಬಾಲಿವುಡ್‌ ಚಿತ್ರ ಜಗತ್ತಿನ ಓರ್ವ ಅದ್ಬುತ ನೃತ್ಯ ಕಲಾವಿದೆ ಎಂದು ಹೆಸರು ಪಡೆದ ಮಾಧುರಿ ದೀಕ್ಷಿತ್ ಅವರು ಸಂಜೀವ್ ಲೀಲಾ ಬನ್ಸಾಲಿಯ ದೇವದಾಸ್ ಚಿತ್ರದಲ್ಲಿ ಐದು ವರ್ಷಗಳ ಹಿಂದೆ ಚಂದ್ರಮುಖಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Share this Story:

Follow Webdunia kannada