Article Bollywood Gossips %e0%b2%a6%e0%b3%8d%e0%b2%b0%e0%b3%8c%e0%b2%aa%e0%b2%a6%e0%b2%bf %e0%b2%aa%e0%b2%be%e0%b2%a4%e0%b3%8d%e0%b2%b0 %e0%b2%a8%e0%b2%a8%e0%b2%97%e0%b3%86 %e0%b2%a4%e0%b3%81%e0%b2%82%e0%b2%ac%e0%b2%be %e0%b2%87%e0%b2%b7%e0%b3%8d%e0%b2%9f %e0%b2%ac%e0%b2%bf%e0%b2%aa%e0%b2%be%e0%b2%b6%e0%b2%be %e0%b2%ac%e0%b2%b8%e0%b3%81 110111000039_1.htm

Daily Horoscope

Select Your Language

Notifications

webdunia
webdunia
webdunia
webdunia

ದ್ರೌಪದಿ ಪಾತ್ರ ನನಗೆ ತುಂಬಾ ಇಷ್ಟ: ಬಿಪಾಶಾ ಬಸು

ಮನೋರಂಜನೆ ಸುದ್ದಿ
IFM
ಗ್ಲಾಮರಸ್ ದೃಶ್ಯಗಳಲ್ಲಿ ನಟಿಸಿ ಯುವಕರ ಹೃದಯಗಳಿಗೆ ಕಿಚ್ಚೆಬ್ಬಿಸಿದ್ದ ಬಾಲಿವುಡ್ ಮಾದಕ ತಾರೆ ಬಿಪಾಶಾ ಬಸು, ಇದೀಗ ಪೌರಾಣಿಕ ಪಾತ್ರಗಳತ್ತ ತಮ್ಮ ಚಿತ್ತವನ್ನು ಹರಿಸಿದ್ದು, ದ್ರೌಪದಿ ಪಾತ್ರ ಮಾಡುವ ಬಯಕೆಯಿದೆ ಎಂದು ನುಲಿದಿದ್ದಾರೆ.

ದ್ರೌಪದಿ ಪಾತ್ರವನ್ನು ಮಾಡುವುದು ನನಗೆ ಇಷ್ಟದ ಸಂಗತಿ,ನನಗೆ ಈಗಾಗಲೇ ಆಫರ್ ಬಂದಿದೆ. ಆದರೆ, ಇಲ್ಲಿಯವರೆಗೆ ಯಾವುದೇ ರೀತಿಯ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಪೌರಾಣಿಕ ಪಾತ್ರದಲ್ಲಿ ನಾನು ತುಂಬಾ ಚೆನ್ನಾಗಿ ನಟಿಸುತ್ತೇನೆ ಎನ್ನುವ ವಿಶ್ವಾಸವಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
webdunia
IFM


ಮರ್ಯಾದಾ ಹತ್ಯೆ ಕಥಾ ಹಂದರವನ್ನು ಹೊಂದಿದ್ದ 'ಅಕ್ರೋಶ್' ಚಿತ್ರದಲ್ಲಿ ನಟಿಸಿ, ವಿಭಿನ್ನ ಪಾತ್ರಗಳಿಗೂ ತಾವು ಸೈ ಎಂದು ಬಿಪಾಶಾ ತೋರಿಸಿಕೊಟ್ಟಿದ್ದರು.

ಪೌರಾಣಿಕ ಮಹಾಭಾರತದಲ್ಲಿ, ದ್ರುಪದ್ ರಾಜನ ಮಗಳಾದ ದ್ರೌಪದಿ, ಐವರು ಪಾಂಡವ ಸಹೋದರರಿಗೆ ಪತ್ನಿಯಾಗಿದ್ದಳು.ಗ್ಲಾಮರಸ್ ನಟಿ ಬಿಪಾಷಾ ಪೌರಾಣಿಕ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ.

Share this Story:

Follow Webdunia kannada