ದೋಲ್ ಕಿಸ್ಕಾ ಬಜೇಗಾದಲ್ಲಿ ತನುಶ್ರೀ
Publish Date: Thu, 20 Sep 2007 (16:09 IST)
Updated Date: Thu, 20 Sep 2007 (16:09 IST)
ದೋಲ್ -ಕಿಸ್ಕಾ ಬಜೆಗಾ ಚಲನಚಿತ್ರ ನಾಲ್ವರು ಸ್ನೇಹಿತರ ಜೀವನದ ಸುತ್ತ ಸುತ್ತುತ್ತದೆ. ತುಶಾರ್ ಕಪೂರ್, ಶರ್ಮನ್ ಜೋಷಿ, ರಾಜ್‌ಪಾಲ್ ಯಾದವ್ ಮತ್ತು ಕುನಾಲ್ ಕೆಮು ತಮ್ಮ ಬಾಲ್ಯದ ತುಂಟಾಟ ಮತ್ತು ಗೊತ್ತುಗುರಿಯಿಲ್ಲದ ಜೀವನಕ್ಕೆ ಅಂಟಿಕೊಂಡಿದ್ದರು.ಯಶಸ್ಸಿಗೆ ಶಾರ್ಟ್ ಕಟ್ ಹುಡುಕುತ್ತಿದ್ದ ಅವರಿಗೆ ಶ್ರೀಮಂತ ಯುವತಿಯನ್ನು ಮದುವೆಯಾಗುವುದು ಸುಲಭ ದಾರಿಯಾಗಿ ಕಾಣಿಸಿತು. ಇದರಿಂದ ತಮ್ಮ ಎಲ್ಲ ಯಾತನೆಗಳಿಗೆ ಬ್ರೇಕ್ ಬೀಳುತ್ತದೆಂದು ಭಾವಿಸಿದರು. ನೆರೆಮನೆಗೆ ಆಗಮಿಸಿದ ತನುಶ್ರೀ ಶ್ರೀಮಂತ ಮನೆತನದ ಹುಡುಗಿಯಾಗಿದ್ದಳು.ತನುಶ್ರೀಯನ್ನು ಒಲಿಸಿಕೊಂಡು ಆಕೆಯನ್ನು ವಿವಾಹವಾಗಲು ಬಯಸಿದರು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವ ಹಾಗೆ ನಾಲ್ವರು ಸ್ನೇಹಿತರು ಗೊಂದಲ, ಪೇಚಿಗೆ ಸಿಲುಕುತ್ತಾರೆ. ಚಿತ್ರ ವಿಚಿತ್ರ ತಿರುವುಗಳನ್ನು ಪಡೆದುಕೊಂಡು ಥ್ರಿಲ್, ಹತ್ಯೆ, ಸಸ್ಪೆನ್ಸ್ ಎಲ್ಲವೂ ಸೇರಿಕೊಳ್ಳುತ್ತದೆ.