ದೋನಿ ನಂತರ ಯುವರಾಜ್ ಮುಂದೇ ಏನು ?
Publish Date: Tue, 18 Dec 2007 (16:05 IST)
Updated Date: Tue, 18 Dec 2007 (16:05 IST)
ಮೊದಲು ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯೊಂದಿಗೆ ಈಗ ಟೀಮ್ ಇಂಡಿಯಾದ ಸಿಕ್ಸರ್ ಹೀರೋ ಯುವರಾಜ್‌ನೊಂದಿಗೆ ಓಂ ಶಾಂತಿ ಖ್ಯಾತಿಯ ದೀಪಿಕಾ ಪಡುಕೊಣೆ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಇದೇಲ್ಲಾ ಯಾಕ್ರಿ ಎಂದು ದೀಪಿಕಾರನ್ನು ಕೇಳಿದರೆ, ದೇವರಾಣೆ ಇದೇಲ್ಲ ನನಗೆ ಗೋತ್ತೆ ಇಲ್ಲ ಎಂದು ಹೇಳುತ್ತಿದ್ದಾಳೆ. ದಯವಿಟ್ಟು ಇಂಥ ವಿಚಾರ ಎತ್ತಬೇಡಿ ನನಗೆ ಏನೂ ಗೊತ್ತಿಲ್ಲ ಎಂದು ದೀಪಿಕಾ ಪಡುಕೊಣೆ ಹೇಳುತ್ತಿದ್ದಾರೆ.ಸ್ವಿಜರ್ಲ್ಯಾಂಡ್ ಮೂಲದ ಟಿಸ್ಸೊಟ್ ವಾಚ್ ಕಂಪನಿಯ ಬ್ರ್ಯಾಂಡ್ ಅಂಬಾಸಡರ್ ಎಂದು ನೇಮಕಗೊಂಡ ನಂತರ ಸುದ್ದಿಗಾರರೊಂದಿಗೆ ಹರಡಿರುವ ಗಾಸಿಪ್ ಕುರಿತು ಮಾತನಾಡುತ್ತಿದ್ದರು. ಯಾವುದೇ ಆಟ ಇರಲಿ ಅದು ನನಗೆ ಇಷ್ಟ. ಒಂದೇರಡು ಗಂಟೆ ಆಟದಲ್ಲಿ ಕಳೆಯುವುದರಿಂದ ಮಾನಸಿಕ ನೆಮ್ಮದಿಯಂತೂ ಸಿಕ್ಕೇ ಸಿಗುತ್ತದೆ. ಈಜುವುದು ನನಗೆ ಇಷ್ಟವಾದುದು. ಬಾಸ್ಕೆಟ್ ಬಾಲ್, ಟೆನಿಸ್, ಬ್ಯಾಡ್ಮಿಂಟನ್ ಆಡುತ್ತೆನೆ. ಮಾಜಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೊಣೆಯ ಪುತ್ರಿ ದೀಪಿಕಾ ಇವರೆಗೆ ಹಾಕಿ ಕೊಟ್ಟ ಹಾದಿಯಲ್ಲಿ ಸಾಗುತ್ತಿದ್ದೆನೆ. ಕೈಗೆ ತೆಗೆದುಕೊಂಡಿರುವ ಕೆಲಸವನ್ನು ಇಷ್ಟಪಟ್ಟು ಮಾಡುವುದರಿಂದ ಮಾನಸಿಕ ತೊಳಲಾಟ ಬರದು. ಶಾಹರುಖ್ ಖಾನ್ ನಾಯಕ ನಟರಾಗಿ ಅಭಿನಯಿಸಿದ ಓಂ ಶಾಂತಿ ಓಂ ಚಿತ್ರದೊಂದಿಗೆ ಬಾಲಿವುಡ್ ಜಗತ್ತಿಗೆ ಮಾಡೆಲ್ ಕ್ವೀನ್. ಇದೀಗ ಯಾವುದೇ ಒತ್ತಡ ಇಲ್ಲದೇ ಚಿತ್ರಗಳ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ಧೇಶನದ, ರಣ ಬೀರ್ ಕಪೂರ್ ನಾಯಕರಾಗಿ ಅಭಿನಯಿಸಲಿರುವ ಚಿತ್ರದಲ್ಲಿ ದೀಪಿಕಾಗೆ ನಾಯಕಿಯ ಪಾತ್ರ ದೊರೆತಿದೆ.