Publish Date: Wed, 12 Sep 2007 (18:27 IST)
Updated Date: Wed, 12 Sep 2007 (18:24 IST)
ಎವರ್‌ಗ್ರೀನ್ ಹೀರೊ ದೇವಾನಂದ್ ಅವರ ಆತ್ಮಚರಿತ್ರೆ "ರೊಮಾನ್ಸಿಂಗ್ ವಿತ್ ಲೈಫ್" ಪೆಂಗ್ವಿನ್ ಇಂಟರ್‌ನ್ಯಾಷನಲ್ ಪ್ರಕಟಿಸುತ್ತಿದೆ. ದೇವಾನಂದ್ ಅವರ 85ರ ಜನ್ಮದಿನದಂದು ಪ್ರಧಾನಿ ಮನಮೋಹನ ಸಿಂಗ್ ನವದೆಹಲಿಯಲ್ಲಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಸೋನಿಯಾ ಗಾಂಧಿ ಕೂಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮುಂಬೈನಲ್ಲಿ ಮರುದಿನ ಪುಸ್ತಕ ಬಿಡುಗಡೆಯಾಗಲಿದೆ. ತಮ್ಮ ಆತ್ಮಚರಿತ್ರೆಯಲ್ಲಿ ಮುಂಬೈನ ತಮ್ಮ 62 ವರ್ಷಗಳ ಜೀವನಗಾಥೆಯನ್ನು ದೇವ್ ಸಾಬ್ ಬರೆದಿದ್ದಾರೆ. ಅವರ ಜೀವನೋತ್ಸಾಹ ಮತ್ತು ಹುರುಪು ಸರಿಸಾಟಿಯಿಲ್ಲದ್ದು.
ಅವರ "ನವಕೇತನ" ಅನೇಕ ನವನಟಿಯರಿಗೆ ವೇದಿಕೆಯಾಗಿದೆ. ಇಳಿವಯಸ್ಸಿನಲ್ಲೂ ಕ್ರಿಯಾಶೀಲರಾಗಿದ್ದು, ವಯಸ್ಸಾದ ಕೂಡಲೇ ಸೃಜನಶೀಲತೆ ನಶಿಸುವುದಿಲ್ಲ ಎಂದು ನಂಬಿದ್ದಾರೆ.
ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಅತಿಥಿಗಳ ಪಟ್ಟಿ ಕೊನೆಯಿಲ್ಲದ್ದಾಗಿದೆ. 465 ಪುಟಗಳ ಪುಸ್ತಕ ವಿವಿಧ ಸಂದರ್ಭಗಳಲ್ಲಿ ತೆಗೆದ ನಟನ 50 ವಿಶೇಷ ಚಿತ್ರಗಳನ್ನು ಹೊಂದಿದೆ.