Article Bollywood Gossips %e0%b2%a6%e0%b3%81%e0%b2%ac%e0%b2%be%e0%b2%b0%e0%b2%bf %e0%b2%a8%e0%b2%9f%e0%b2%bf %e0%b2%95%e0%b2%a4%e0%b3%8d%e0%b2%b0%e0%b2%bf%e0%b2%a8%e0%b2%be %e0%b2%95%e0%b3%88%e0%b2%ab%e0%b3%8d 108091300031_1.htm

Daily Horoscope

Select Your Language

Notifications

webdunia
webdunia
webdunia
webdunia

ದುಬಾರಿ ನಟಿ ಕತ್ರಿನಾ ಕೈಫ್

ಕತ್ರಿನಾ ಕೈಫ್
IFM
ಬಾಲಿವುಡ್‌ನಲ್ಲಿ ಒಂದರ ಬೆನ್ನಿಗೆ ಇನ್ನೊಂದರಂತೆ ಹಿಟ್ ಚಿತ್ರಗಳನ್ನು ನೀಡುತ್ತಿರುವ ಕತ್ರಿನಾ ಕೈಫ್ ನಿರ್ಮಾಪಕರ ನೆಚ್ಚಿನ ಆಯ್ಕೆಯಾಗಿದ್ದಾರೆ. ಕತ್ರಿನಾಳನ್ನು ತಮ್ಮ ಚಿತ್ರದ ಭಾಗವಾಗಿಸಿಕೊಳ್ಳಲು ಅವರು ಅದೆಷ್ಟು ಮೊತ್ತವನ್ನು ಬೇಕಾದರೂ ತೆರಲು ಸಹ ಸಿದ್ಧವಾಗಿದ್ದಾರೆ.

ಬಾಲಿವುಡ್‌ನಲ್ಲಿ ಕ್ವೀನ್ ಪಟ್ಟಕ್ಕೇರುತ್ತಿರುವ ಈ ನಟಿ 'ಬ್ಲೂ' ಎಂಬ ಹೆಸರಿನ ಚಿತ್ರದಲ್ಲಿ ಐಟಂ ಸಾಂಗ್ ಒಂದನ್ನು ಮಾಡುವುದಕ್ಕಾಗಿ 1.5 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಶ್ರೀ ಅಷ್ಟವಿನಾಯಕ ನಿರ್ಮಾಣ ಸಂಸ್ಥೆಯಿಂದ ನಿರ್ಮಿತವಾಗುತ್ತಿರುವ ಬ್ಲೂ ಚಿತ್ರದ ಒಟ್ಟು ಬಜೆಟ್ 100 ಕೋಟಿ. ಸಂಜಯ್ ದತ್, ಲಾರ ದತ್ತಾ ಮತ್ತು ಅಕ್ಷಯ್ ಕುಮಾರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಹತ್ತು ದಿನಗಳ ಕಾಲ ಸಾಂಗ್‍‌‌ನ ಚಿತ್ರೀಕರಣಕ್ಕೆ ಸಿದ್ಧರಾಗುತ್ತಿರುವ ಕತ್ರೀನಾ ಇದನ್ನು ಐಟಂಸಾಂಗ್ ಎಂದು ಕರೆಯಲು ಇಷ್ಟಪಡುವುದಿಲ್ಲವಂತೆ ಬದಲಾಗಿ ಬ್ಲೂ ಚಿತ್ರದಲ್ಲಿ ತಾವು ವಿಶಿಷ್ಟವಾದದ್ದನ್ನು ಮಾಡುತ್ತಿರುವುದಾಗಿ ಅವರ ಅಭಿಪ್ರಾಯವಂತೆ.

Share this Story:

Follow Webdunia kannada