Article Bollywood Gossips %e0%b2%a6%e0%b3%80%e0%b2%aa%e0%b2%bf%e0%b2%95%e0%b2%be %e0%b2%aa%e0%b2%a1%e0%b3%81%e0%b2%95%e0%b3%8b%e0%b2%a3%e0%b3%86%e0%b2%af %e0%b2%b8%e0%b3%8d%e0%b2%aa%e0%b3%8b%e0%b2%b0%e0%b3%8d%e0%b2%9f%e0%b3%8d%e0%b2%b8%e0%b3%8d %e0%b2%a8%e0%b2%82%e0%b2%9f%e0%b3%81 109022700072_1.htm

Daily Horoscope

Select Your Language

Notifications

webdunia
webdunia
webdunia
webdunia

ದೀಪಿಕಾ ಪಡುಕೋಣೆಯ ಸ್ಪೋರ್ಟ್ಸ್ ನಂಟು

ದೀಪಿಕಾ ಪಡುಕೋಣೆ
IFM
ದೀಪಿಕಾ ಪಡುಕೋಣೆ ಎಂಬ ಕರುನಾಡ ಸುಂದರಿ ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಂತೆಯೇ ಕ್ರಿಕೆಟ್ ಅಂಗಳದ ಧೋನಿ, ಯುವರಾಜ್ ಹೆಸರುಗಳೆಲ್ಲ ಆಕೆಯ ಸುತ್ತ ಸುತ್ತಲು ಹೊರಟಿದ್ದವು. ಈಗೆಲ್ಲಾ ಏನಿದ್ದರೂ ಆ ಜಾಗಕ್ಕೆ ರಣಬೀರ್ ಹೆಸರು ಅಚ್ಚಾಗಿದೆ. ಅದೆಲ್ಲಾ ಹಳೆಯ ಕಥೆ ಬಿಡಿ ಎಂದರೆ, ಈಗ ಮತ್ತೆ ಸ್ವತಃ ದೀಪಿಕಾ ತನಗೂ ಸ್ಪೋರ್ಟ್ಸ್‌ಗೂ ಜನ್ಮಜನ್ಮದ ಅನುಬಂಧ ಎನ್ನುತ್ತಿದ್ದಾರಂತೆ. ಇದಕ್ಕೆ ಕಾರಣ ಯಾರು ಅಂತ ನೀವು ಇನ್ಯಾವುದೋ ಕ್ರಿಕೆಟ್ ತಾರೆಯ ಲಿಂಕ್ ಕೊಟ್ಟರೆ ನಿಮ್ಮ ಲೆಕ್ಕಾಚಾರ ಖಂಡಿತ ಉಲ್ಟಾ ಹೊಡೆಯುತ್ತದೆ.

ಅಂದಹಾಗೆ ಈಗ ದೀಪಿಕಾ ಅಪ್ಪ ಪ್ರಕಾಶ್ ಪಡುಕೋಣೆ (ಬ್ಯಾಂಡ್ಮಿಂಟನ್ ಚಾಂಪಿಯನ್) ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಆಟಗಾರರ ಸಹಾಯಕ್ಕೆಂದೇ ಒಂದು ಸಂಸ್ಥೆ ಕಟ್ಟಲಿದ್ದಾರಂತೆ. ಅದಕ್ಕೆ ದೀಪಿಕಾ ಕೂಡಾ ಸಹಾಯ ಮಾಡುತ್ತಾರಂತೆ. ಕೇವಲ ಆರ್ಥಿಕವಾಗಿ ಮಾತ್ರವಲ್ಲ. ತನ್ನ ಅಳಿದುಳಿದ ಸಮಯದಲ್ಲಿ ತಾನೂ ಅಪ್ಪನಿಗೆ ಹೆಗಲು ಕೊಟ್ಟು ಆ ಸಂಸ್ಥೆಗಾಗಿ ದುಡಿಯಬೇಕೆಂದು ತೀರ್ಮಾನ ಮಾಡಿದ್ದಾರಂತೆ. ಸ್ಪೋರ್ಟ್ಸ್ ಅಂದರೆ ದೀಪಿಕಾಗೆ ಪಂಚಪ್ರಾಣ. ಆಕೆಗೆ ಸ್ಪೋರ್ಟ್ಸ್ ಸಿನಿಮಾದಲ್ಲಿ ನಟಿಸಲು ಬಹಳ ಆಸಕ್ತಿ. ಆದರೆ ಅಂತಹ ಸಿನಿಮಾದಲ್ಲಿ ನಟಿಸಲು ಈವರೆಗೆ ಯಾರೂ ಆಕೆಯನ್ನು ಕರೆದಿಲ್ಲ ಎಂಬುದೇ ಆಕೆಗಿರುವ ಏಕೈಕ ಬೇಸರ.

ಇದೆಲ್ಲ ಒತ್ತಟ್ಟಿಗಿರಲಿ. ಇತ್ತೀಚೆಗಿನ ಚಾಂದಿನಿ ಚೌಕ್ ಟು ಚೀನಾ ಚಿತ್ರದಲ್ಲಿನ ಆಕ್ಷನ್ ಇಮೇಜ್ ಆಕೆಗೆ ಇಂತಿಯಾಝ್ ಅಲಿ ಅವರ ಸಮಕಾಲೀನ ಚಿತ್ರವೊಂದರಲ್ಲಿ (ಲವ್ ಆಜ್ ಕಲ್) ಸೈಫ್ ಅಲಿ ಖಾನ್ ಜತೆಗೆ ನಾಯಕಿಯಾಗುವ ಅವಕಾಶ ಕೂಡಿ ಬಂತು. `ಈ ಚಿತ್ರದಲ್ಲಿನ ಸಮಕಾಲೀನ ಸಂಬಂಧಗಳು ಜೀವನಕ್ಕೆ ತುಂಬ ಹತ್ತಿರವಾದುವು. ಆದರೆ ಇಂತಹ ಚಿತ್ರಗಳು ತೀರಾ ಅಪರೂಪದವು' ಅಂತ ದೀಪಿಕಾ ಚಿತ್ರಕ್ಕೆ ಸರ್ಟಿಫಿಕೇಟ್ ಕೊಡುತ್ತಾರೆ.

ದೀಪಿಕಾ `ಫೀಮೇಲ್ ಅಕ್ಷಯ್ ಕುಮಾರ್' ಆಗಿದ್ದು

webdunia
IFM
ಚಾಂದಿನಿ ಚೌಕ್‌ ಟು ಚೀನಾದ ನಟನೆಯಿಂದಾಗಿ 'ಫೀಮೇಲ್ ಅಕ್ಷಯ್ ಕುಮಾರ್' ಎಂಬ ಅನ್ವರ್ಥನಾಮವೂ ಈಗ ದೀಪಿಕಾಗಿದೆ. ಪತ್ರಕರ್ತರೊಬ್ಬರು ನನ್ನಲ್ಲಿ ನೀವು ಫೀಮೇಲ್ ಅಕ್ಷಯ್ ಕುಮಾರ್ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತೀರಾ ಎಂದರು ನಾನು ನಕ್ಕುಬಿಟ್ಟೆ. ಈಗ ಹಾಗಾಗಿ ನನಗೆ ಫೀಮೇಲ್ ಅಕ್ಷಯ್ ಕುಮಾರ್ ಹೆಸರೂ ಅಂಟಿದೆ. ಸಾಜಿದ್ ಖಾನ್ ಅವರ ಹೌಸ್‌ಫುಲ್ ಸಿನಿಮಾದ ಮೂಲಕ ಈಗ ಮತ್ತೊಮ್ಮೆ ಫೀಮೇಲ್ ಅಕ್ಷಯ್ ಕುಮಾರ್ ಆಗುತ್ತಿದ್ದೇನೆ ಎಂದು ನಗುತ್ತಾರೆ ದೀಪಿಕಾ. ಅಥ್ಲೆಟಿಕ್ ಫ್ಯಾಮಿಲಿಯಿಂದ ಬಂದಿರುವುದರಿಂದ ಆಕ್ಷನ್ ಸಿನಿಮಾಗಳಲ್ಲಿ ಮಾಡುವುದೆಂದರೆ ತುಂಬಾ ದೀಪಿಕಾಗೆ ಇಷ್ಟವಂತೆ. ಹೀಗಾಗಿ ಚಾಂದಿನಿ ಚೌಕ್ ಟು ಚೀನಾ ಇಷ್ಟವಾಯಿತು. ಇನ್ನೊಂದು ಆಕ್ಷನ್ ಸಿನಿಮಾದಲ್ಲಿ ನಟಿಸಬೇಕೆಂಬ ಬಯಕೆಯೂ ಇದೆ ಎನ್ನುತ್ತಾರೆ ದೀಪಿಕಾ.

ಖಾಸಗಿ ಬದುಕು ಚುಪ್ ಚುಪ್...

ಅಂದಹಾಗೆ ಕರೀನಾರಂತೆ ದೀಪಿಕಾ ಕೂಡಾ ಈಗ ಖಾಸಗಿ ಬದುಕಿನ ಬಗ್ಗೆ ಹೆಚ್ಚು ಮಾತನಾಡಬಾರದು ಅಂತ ತೀರ್ಮಾನಿಸಿದ್ದಾರಂತೆ. `ರಣಬೀರ್ ಹಾಗೂ ನಾನು ಇಬ್ಬರೂ ತಮ್ಮ ಪ್ರೀತಿಯನ್ನು ಎಲ್ಲರೆದುರು ಒಪ್ಪಿಕೊಂಡಾಗ ಗಾಸಿಪ್‌ಗಳು ನಮ್ಮನ್ನು ಸುಮ್ಮನೆ ಪ್ರತ್ಯೇಕವಾಗಿಸಲು ನೋಡಿದವು. ಆದರೆ ನಾನು ನಮ್ಮ ಸಂಬಂಧದಲ್ಲಿ ಸಂತೋಷವಾಗಿದ್ದೇನೆ' ಎಂದು ತನ್ನ ಮೌನಕ್ಕೆ ಕಾರಣ ಹೇಳುತ್ತಾರೆ ದೀಪಿಕಾ.

`ರಣಬೀರ್ ತಾಯಿಗೆ ದೀಪಿಕಾ ಇಷ್ಟವಿಲ್ಲವಂತೆ!' ಎಂಬ ಗಾಸಿಪ್ಪನ್ನು ಒಪ್ಪಿಕೊಳ್ಳದ ದೀಪಿಕಾ, `ನಾನು ರಣಬೀರ್ ತಾಯಿಯನ್ನು ತುಂಬ ಸಾರಿ ನೋಡಿದ್ದೇನೆ, ಮಾತನಾಡಿದ್ದೇನೆ. ನನಗೆ ಅವರ ಬಳಿ ಗೌರವವಿದೆ. ನನಗೆ ಹಾಗೂ ರಣಬೀರ್‌ಗೆ ಇಬ್ಬರಿಗೂ ಇಬ್ಬರ ಮನೆಯಲ್ಲೂ ಚೆನ್ನಾಗಿ ಪರಿಚಯ ಹೊಂದಿದ್ದೇವೆ. ಆದರೆ, ಸದ್ಯಕ್ಕೆ ನಾವಿಬ್ಬರೂ ನಮ್ಮ ಕೆರಿಯರ್ ಬಗ್ಗೆ ಯೋಚಿಸುತ್ತಿದ್ದೇವೆ. ನನ್ನ ಕೆಲಸದ ಬಗ್ಗೆ ಎಂದಿಗೂ ನಾನು ರಣಬೀರ್ ಜತೆ ಮಾತನಾಡಿಕೊಳ್ಳುವುದಿಲ್ಲ. ನನ್ನ ನಿರ್ಧಾರಕ್ಕೆ ರಣಬೀರನ್ನು ಅವಲಂಬಿಸುವುದಿಲ್ಲ.' ಎಂದಷ್ಟೆ ಹೇಳಿ ಗಾಸಿಪ್ಪಿಗರ ಬಾಯಿ ಮುಚ್ಚಿಸುತ್ತಾರೆ.
webdunia
IFM

Share this Story:

Follow Webdunia kannada