ದೀಪಿಕಾ ಎವರ್ಗ್ರೀನ್: ಶಾರೂಖ್ ಹೇಳಿಕೆ
Publish Date: Mon, 17 Jun 2013 (18:02 IST)
Updated Date: Mon, 17 Jun 2013 (18:02 IST)
ದೀಪಿಕಾ ಓರ್ವ ಅದ್ಭುತ ನಟಿ. ಪ್ರತಿ ಸಿನೆಮಾದಲ್ಲೂ ಆಕೆ ಯಶಸ್ಸಿನ ಮೆಟ್ಟಿಲು ಏರುತ್ತಿದ್ದಾಳೆ ಎಂದಿದ್ದಾರೆ. ಶಾರೂಖ್ ಖಾನ್. ಮುಂಬೈನಲ್ಲಿ ಚೆನ್ನೈ ಎಕ್ಸ್ಪ್ರೆಸ್ ಪೂರ್ವಭಾವಿ ವೀಕ್ಷಣೆ ಸಂದರ್ಭದಲ್ಲಿ ಶಾರೂಖ್ ಮಾಧ್ಯಮಮಿತ್ರರ ಬಳಿ ಈ ಮಾತು ಹೇಳಿದ್ದಾರೆ.ದೀಪಿಕಾ ಅವರೊಂದಿಗೆ ಇನ್ನೊಂದು ಬಾರಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಿದೆ ಎಂದಿದ್ದಾರೆ ಶಾರೂಖ್. ಓಂ ಶಾಂತಿ ಓಂ ಚಿತ್ರದಲ್ಲಿ ಅವರೊಂದಿಗೆ ನಟಿಸಿದ ಅನುಭವ ಇನ್ನೂ ಖುಷಿ ನೀಡುತ್ತಿದೆ ಎಂದೂ ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದೀಪಿಕಾ ಹಳೇ ಚಿತ್ರದ ಅನುಭವದಂತೆಯೇ ಇದೂ ವಿಶೇಷವಾಗಿರಲಿ ಎಂದಿದ್ದಾರೆ.ಚೆನ್ನೈ ಎಕ್ಸ್ಪ್ರೆಸ್ ಚಿತ್ರದಲ್ಲಿ ದೀಪಿಕಾ ತಮಿಳು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಅರ್ಬನ್ ರೊಮ್ಯಾಂಟಿಕ್ ಚಿತ್ರವಾಗಿದ್ದು ಮೊದಲ ಬಾರಿಗೆ ತಮಿಳು ಹುಡುಗಿಯ ಪಾತ್ರ ಸಿಕ್ಕಿದೆ. ತಮಿಳಿನ ಉಚ್ಚಾರ, ಹಾವಭಾವ ಎಲ್ಲವೂ ಹೊಸತು. ಅದೊಂದು ಸವಾಲಿನ ಚಿತ್ರವಾಗಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ ಖುಷಿಯಿದೆ ಎಂದಿದ್ದಾರೆ. ಶಾರೂಖ್ಖಾನ್ಗೆ ಚೆನ್ನೈ ಎಕ್ಸ್ಪ್ರೆಸ್ನಲ್ಲಿ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದು ಅವರ ಬಗ್ಗೆ ಶಾರೂಖ್ ಮೆಚ್ಚುಗೆಯ ಮಾತನ್ನಾಡಿರುವುದು ದೀಪಿಕಾಗೆ ಬಹಳ ಖುಷಿ ನೀಡಿದೆಯಂತೆ.