ದಿವ್ಯಾ ಕೋಸ್ಲಾರಿಂದ ನೂತನ ಆಲ್ಬಂ ನಿರ್ದೇಶನ
Publish Date: Tue, 20 Nov 2007 (15:31 IST)
Updated Date: Tue, 20 Nov 2007 (15:31 IST)
ದಿವ್ಯಾ ಕೋಸಲ್ ಕುಮಾರ್ ಅವರಿಗೆ ಜೀವನವೆಂಬುದು ನಿಜವಾಗಿಯೂ ವೃತ್ತವಾಗಿ ಪರಿಣಮಿಸಿದೆ. 2004ರಲ್ಲಿ ಬಿಗ್‌ಬಿ, ಅಕ್ಷಯ್ ಕುಮಾರ್ ಮತ್ತು ಬಾಬಿ ಡಿಯೋಲ್ ಅವರ ಅಬ್ ತುಮ್ಹಾರೆ ವತನ್ ಸಾತಿಯೋನ್‌ನಲ್ಲಿ ಪ್ರವೇಶಿಸುವವರೆಗೆ, ದಿವ್ಯಾ ಫಾಲ್ಗುಣಿ ಪಾತಕ್, ಅಭಿಜೀತ್ ಮುಂತಾದವರ ಸಂಗೀತ ವಿಡಿಯೋಗಳಲ್ಲಿ ದಿವ್ಯಾ ಅವರು ಮಾಡೆಲಿಂಗ್ ಮಾಡಲು ಪ್ರಾರಂಭಿಸಿದ್ದರು. ತಮ್ಮ ಪ್ರಥಮ ಅಲ್ಬಂ ಬಿಡುಗಡೆಯಾದ ನಂತರ ಟೀ ಸೀರಿಸ್ ಮುಖ್ಯಸ್ಥ ಭೂಷಣಕುಮಾರ್ ಅವರೊಂದಿಗೆ ವಿವಾಹ ನಡೆಯಿತು. ಕೆಲ ದಿನಗಳ ವಿಶ್ರಾಮದ ನಂತರ ಸಿನಿಮಾಟೋಗ್ರಾಫಿ, ಎಡಿಟಿಂಗ್ ಮತ್ತು ನಿರ್ದೆಶನದಲ್ಲಿ ಎರಡು ವರ್ಷಗಳ ಕಾಲ ಸತತ ಪರಿಶ್ರಮವಹಿಸಿದ ನಂತರ ಹೊಸ ಅಲ್ಬಂ ಬಿಡುಗಡೆಗೆ ಸಿದ್ದತೆ ನಡೆಸಿದ್ದಾರೆ.ಕುಮಾರ್ ನಿಗಮ್ ಅವರ ಪಿರ್ ಬೀವಾಫೈಯ್ ಆಲ್ಬಂನ್ನು ನಿರ್ದೇಶನಗೊಳಿಸಿ ಎಲ್ಲರೂ ಬೆರಗುಗೊಳ್ಳುವಂತೆ ಮಾಡಿದರು. ಈಗ ಗಜಲ್ ಮಾಸ್ಟರ್ ಪಂಕಜ್ ಉದಾಸ್ ಅವರ ಆಲ್ಬಂನ್ನು ದಿವ್ಯಾ ಅವರು ನಿರ್ದೇಶಿಸಲಿದ್ದಾರೆ. ಇದರ ಚಿತ್ರೀಕರಣವನು ದೆಹಲಿಯಲ್ಲಿ ನಡೆಯುವ ಸಾಧ್ಯತೆಗಳಿವೆ.