Article Bollywood Gossips %e0%b2%a6%e0%b2%bf%e0%b2%b2%e0%b3%8d%e0%b2%b2%e0%b2%bf 6 %e0%b2%ac%e0%b2%b3%e0%b2%bf%e0%b2%95 %e0%b2%ac%e0%b2%be%e0%b2%82%e0%b2%ac%e0%b3%86 7 107110900021_1.htm

Select Your Language

Notifications

webdunia
webdunia
webdunia
webdunia

"ದಿಲ್ಲಿ 6" ಬಳಿಕ "ಬಾಂಬೆ 7"

ಬಂಟಿ ವಾಲಿಯ
IFM
ಇದು ವಿಚಿತ್ರವಾಗಿ ಕಾಣಿಸಬಹುದು. ಆದರೆ "ದಿಲ್ಲಿ 6"ಚಿತ್ರದ ಬಳಿಕ ಈಗ ಇನ್ನೊಂದು ಚಿತ್ರ "ಬಾಂಬೆ 7" ಬೆಳ್ಳಿತೆರೆಯ ಮೇಲೆ ವಿಜೃಂಭಿಸಲಿದ್ದು, ಬಂಟಿ ವಾಲಿಯ ಪ್ರೊಡಕ್ಷನ್ಸ್ ನಿರ್ಮಾಣ ಮಾಡಲಿದೆ. ಬಂಟಿ ವಾಲಿಯ ಪ್ರೊಡಕ್ಷನ್ಸ್ ಬಿಸಿನೆಸ್ ಮ್ಯಾನೇಜರ್ ಜತೆ ಮಾತನಾಡಿದಾಗ ತಾವು ಬಾಂಬೆ 7 ಚಿತ್ರ ತಯಾರಿಸುತ್ತಿರುವುದು ನಿಜವೆಂದು ದೃಢಪಡಿಸಿದರು.

ಜಾಹೀರಾತು ಚಿತ್ರ ನಿರ್ಮಾಪಕ ಕೀತು ಘೋಷ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆಂದು ಹೇಳಿದರು. ಲಾರಾ ದತ್ತ ಮತ್ತು ಸಚಿನ್ ತೆಂಡೂಲ್ಕರ್ ಜತೆ ಅವರು ಜಾಹೀರಾತು ಚಿತ್ರಗಳಲ್ಲಿ ಈ ಮುಂಚೆ ದುಡಿದಿದ್ದರು. ಚಿತ್ರದ ಬಗ್ಗೆ ಮಾತನಾಡಿದ ಅವರು, ಬಾಂಬೆ 7 ಥ್ರಿಲ್ಲರ್ ಮತ್ತು ಪ್ರೇಮಕಥೆಯಾಗಿದ್ದು, ಮುಂಬೈನ ಪಿನ್ ಕೋಡ್ 7 ಪ್ರದೇಶವಾದ ಮೊಹಮದ್ ಅಲಿ ಬೀದಿಯ ಆಧಾರದ ಮೇಲೆ ಕತೆ ಸೃಷ್ಟಿಸಲಾಗಿದೆ.

ಮೂರು ಮುಖ್ಯ ಪಾತ್ರಗಳ ಸುತ್ತ ಕತೆ ಸುತ್ತುತ್ತದೆ. ಪಾತ್ರವರ್ಗದ ಬಗ್ಗೆ ಅವರನ್ನು ಪ್ರಶ್ನಿಸಿದಾಗ , ಪಾತ್ರವರ್ಗದಲ್ಲಿರುವವರು ಹೊಸಬರಲ್ಲ. ಆದರೆ ಉದ್ಯಮದ ಅನುಭವಿ ನಟರು. ಒಬ್ಬರು ನಾಯಕಿ ಮತ್ತು ಇಬ್ಬರು ನಾಯಕಿಯರಿರುತ್ತಾರೆ. ಚಿತ್ರಕಥೆಯು ಮುಂಬೈ ಪ್ರದೇಶವನ್ನು ಆಧಾರವಾಗಿಟ್ಟುಕೊಳ್ಳುವುದರಿಂದ ಅದರಲ್ಲಿ ವಿದೇಶಿ ಸ್ಥಳಗಳ ಚಿತ್ರೀಕರಣ ಇರುವುದಿಲ್ಲ ಎಂದು ಅವರು ಹೇಳಿದರು.

ದಿಲ್ಲಿ 6 ಟೈಟಲ್‌ನಿಂದ ಸ್ಫೂರ್ತಿ ಪಡೆದು ಬಾಂಬೆ 6 ಹೆಸರು ಇಡಲಾಗಿದೆಯೇ ಎಂದು ಅವರನ್ನು ಪ್ರಶ್ನಿಸಿದಾಗ ಅವರು ಇಲ್ಲವೆಂದು ನುಡಿದರು. ತಾವು ಬಾಂಬೆ 7 ಟೈಟಲ್ ನೋಂದಣಿ ಮಾಡಿದ ಬಳಿಕವೇ ದಿಲ್ಲಿ 6 ಚಿತ್ರದ ಬಗ್ಗೆ ತಿಳಿಯಿತು. ದಿಲ್ಲಿ 6 ಟೈಟಲ್ ಹೆಸರು ನಮ್ಮನ್ನು ಚಕಿತಗೊಳಿಸಿತು ಎಂದು ಅವರು ಹೇಳಿದರು.

Share this Story:

Follow Webdunia kannada