Article Bollywood Gossips %e0%b2%a6%e0%b2%bf%e0%b2%b2%e0%b3%8d %e0%b2%ae%e0%b3%87 %e0%b2%ac%e0%b2%be%e0%b2%9c%e0%b2%bf %e0%b2%97%e0%b3%80%e0%b2%9f%e0%b2%be%e0%b2%b0%e0%b3%8d 108060300027_1.htm

Select Your Language

Notifications

webdunia
webdunia
webdunia
webdunia

ದಿಲ್ ಮೇ ಬಾಜಿ ಗೀಟಾರ್

ದಿಲ್
ಮುಂಬೈ :ದಿಲ್ ಮೇ ಬಾಜಿ ಗೀಟಾರ್ ಚಿತ್ರದ ನಿರ್ದೇಶಕ ಸುಭಾಷ್ ಘಾಯಿ ಸಿನಿಮಾ ಇತಿಹಾಸದಲ್ಲಿ ಬಾಲಿವುಡ್‌ ಸೂಪರ್‌ಸ್ಟಾರ್ ನಟರು ಸೇರಿದಂತೆ ಪ್ರಖ್ಯಾತ ನಟರ ಚಿತ್ರಗಳನ್ನು ನಿರ್ಮಿಸಿದ್ದಾರೆ.ಹಿಟ್ ಜೋಡಿಯಾದ ಗೋವಿಂದಾ ಮತ್ತು ಸಂಜಯದತ್‌ ಅವರನ್ನೊಳಗೊಂಡ ದಿಲ್ ಮೇ ಬಾಜಿ ಗೀಟಾರ್ ಚಿತ್ರ ನಿರ್ಮಿಸಲು ಎಲ್ಲ ಸಿದ್ದತೆ ನಡೆಸಿದ್ದಾರೆ.

ದಿಲ್ ಮೇ ಬಾಜಿ ಗೀಟಾರ್ ಚಿತ್ರ ನಿರ್ಮಿಸುವ ಸಿದ್ದತೆಗಳು ನಡೆಯುತ್ತಿವೆ. ಈಗಾಗಲೇ ಗೋವಿಂದಾ ಒಪ್ಪಂದಕ್ಕೆ ಸಹಿ ಹಾಕಿದ್ದು,ಸಂಜಯದತ್ ಇನ್ನೂ ಒಪ್ಪಂದಕ್ಕೆ ಸಹಿ ಹಾಕಬೇಕಾಗಿದೆ.ಚಿತ್ರಕ್ಕೆ ದಿಲ್ ಮೇ ಬಾಜಿ ಗೀಟಾರ್ ಎಂದು ಹೆಸರಿಸಲಾಗಿದ್ದು, ನೂತನ ಪ್ರತಿಬಾವಂತ ನಿರ್ದೇಶಕ ಹದಿ ಅಲಿ ಅಬ್ರಾರ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕಥೆಯಲ್ಲಿ ಕಾಮಿಡಿ ಹಾಗೂ ಬಾವನಾತ್ಮಕ ಸನ್ನಿವೇಶಗಳಿರುವುದರಿಂದ ನನಗೆ ಇಷ್ಟವಾಗಿದೆ ಎಂದು ಸುಭಾಷ ಘಾಯಿ ತಿಳಿಸಿದ್ದಾರೆ.

ಮುಕ್ತಾ ಆರ್ಟ್ಸ್ ಬ್ಯಾನರ್‌ನ ಏಕ್ ಔರ್ ಏಕ್ ಗ್ಯಾರಾ ಡೇವಿಡ್ ಧವನ್ ನಿರ್ದೇಶನದ ಯಶಸ್ವಿ ಚಿತ್ರದಲ್ಲಿ ಸಂಜಯ್ ದತ್ತ್ ಹಾಗೂ ಗೋವಿಂದಾ ನಟಿಸಿದ್ದರು.ದಿಲ್ ಮೇ ಬಾಜಿ ಗೀಟಾರ್ ಚಿತ್ರಕಥೆ ವಿಭಿನ್ನವಾಗಿದ್ದರಿಂದ ಗೋವಿಂದಾ ಮತ್ತು ಸಂಜಯ ದತ್ತ್ ಹಿಂದಿನ ಚಿತ್ರಗಳಲ್ಲಿ ನಟಿಸಿದ್ದಕ್ಕಿಂತ ಭಿನ್ನವಾಗಿರುತ್ತದೆ. ಚಿತ್ರದಲ್ಲಿ ಪರಸ್ಪರರು ಗೆಳೆಯರಾಗಿರುತ್ತಾರೆ ಎಂದು ಸುಭಾಷ್ ಘಾಯಿ ತಿಳಿಸಿದ್ದಾರೆ.

Share this Story:

Follow Webdunia kannada