Publish Date: Sat, 11 Aug 2007 (14:59 IST)
Updated Date: Sat, 11 Aug 2007 (13:42 IST)
ಬಾಲಿವುಡ್ ತಾರೆ ಐಶ್ವರ್ಯಾ ರೈ ಹಾಲಿವುಡ್ ನಟ ಸ್ಟೀವ್ ಮಾರ್ಟಿನ್ನೊಂದಿಗೆ ನಟಿಸುತ್ತಿರುವ ನಿರೀಕ್ಷೆಯ ಚಿತ್ರ "ದ ಪಿಂಕ್ ಪಾರ್ಟನರ್" ಚಿತ್ರೀಕರಣಕ್ಕೆ ಸಿದ್ದತೆಗಳು ನಡೆಯುತ್ತಿವೆ.
ಮಾಜಿ ವಿಶ್ವ ಸುಂದರಿ ಈ ನೂತನ ಚಿತ್ರದಲ್ಲಿ ಪತ್ತೆದಾರಿ ಪಾತ್ರವನ್ನು ನಿರ್ವಹಿಸಲಿದ್ದು, ಪ್ರೆಂಚ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಾಯಕ ನಟ ಸ್ಪೀವ್ ಮಾರ್ಟಿನ್ ಅಭಿನಯಿಸಲಿದ್ದಾರೆ.
ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಆಂಡಿ ಗ್ರಾಸಿಕ, ಜಾನ್ ಕ್ಲೀಸೆ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
"ದ ಪಿಂಕ್ ಪಾರ್ಟನರ್" ಚಿತ್ರದಲ್ಲಿ ಐಶ್ವರ್ಯಾ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಸತ್ಯವಾದುದ್ದು ಎಂದು ಅವರ ವ್ಯವಹಾರ ವ್ಯವಸ್ಥಾಪಕ ಹರಿ ಸಿಂಗ್ ಸ್ಪಷ್ಟಪಡಿಸಿದ್ದಾರೆ.
33 ವರ್ಷದ ಐಶ್ವರ್ಯಾ ರೈ ಪ್ರಸ್ತುತ ಹಿಂದಿ ಚಿತ್ರಗಳಾದ "ಅಕ್ಬರ್ ಜೋದ" ಹಾಗೂ "ಸರ್ಕಾರ್-2" ಚಿತ್ರಗಳಲ್ಲಿ ಅಭಿನಯ ಪೂರ್ತೀಕರಿಸಿದ್ದು, ಸೆಪ್ಟಂಬರ್ ತಿಂಗಳಿಂದ "ದ ಪಿಂಕ್ ಪಾರ್ಟನರ್" ಚಿತ್ರೀಕರಣ ಪ್ರಾರಂಭಗೊಳ್ಳಲಿದೆ ಎಂದು ಹರಿ ಸಿಂಗ್ ತಿಳಿಸಿದ್ದಾರೆ.