Article Bollywood Gossips %e0%b2%a4%e0%b3%8d%e0%b2%b0%e0%b2%bf%e0%b2%b6%e0%b2%be %e0%b2%ac%e0%b2%a6%e0%b2%be%e0%b2%a8%e0%b2%bf %e0%b2%b0%e0%b2%82%e0%b2%aa %e0%b2%b0%e0%b2%be%e0%b2%a6%e0%b3%8d%e0%b2%a6%e0%b2%be%e0%b2%82%e0%b2%a4 109072500061_1.htm

Daily Horoscope

Select Your Language

Notifications

webdunia
webdunia
webdunia
webdunia

ತ್ರಿಶಾ, ಬದಾನಿ ರಂಪ ರಾದ್ದಾಂತ!

ತ್ರಿಶಾ
WD
ಮೋಹಕ ಚೆಲುವೆ ತಮಿಳು ನಟಿ ತ್ರಿಶಾ ಹಾಗೂ ಕ್ರಿಕೆಟಿಗ ಹೇಮಾಂಗ್ ಬದಾನಿ ನಡುವೆ ದೊಡ್ಡದೊಂದು ರಂಪ ರಾದ್ದಾಂತವೇ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೂಲಗಳ ಪ್ರಕಾರ, ಬುಧವಾರ ಹೇಮಾಂಗ್ ಬದಾನಿ ಖ್ಯಾತ ನೈಟ್‌ಕ್ಲಬ್ ಒಂದರಲ್ಲಿ ತನ್ನ ಗೆಳೆಯರೊಂದಿಗೆ ಪಾರ್ಟಿ ಮಾಡುತ್ತಿದ್ದಾಗ ಅಲ್ಲಿ ನಟಿ ತ್ರಿಶಾ ಕೂಡಾ ತನ್ನ ಗೆಳತಿಯರೊಂದಿಗೆ ಹಾಜರಿದ್ದಳು. ಆಗ ಹೇಮಾಂಗ್ ಬದಾನಿ ತ್ರಿಶಾಗೆ ಜೋರಾಗಿ ಢಿಕ್ಕಿ ಹೊಡೆದು ಸೀದಾ ಹೋದರಂತೆ. ಇದು ತ್ರಿಶಾರನ್ನು ಕೆರಳುವಂತೆ ಮಾಡಿದೆ.

ತನ್ನ ಗೆಳತಿಯರೊಂದಿಗೆ ಪಾರ್ಟಿ ಮಾಡುತ್ತಿದ್ದರೂ, ತ್ರಿಶಾ ತನ್ನನ್ನು ಡಿಕ್ಕಿ ಹೊಡೆದ ಬದಾನಿಯನ್ನು ಮರೆತಿರಲಿಲ್ಲ. ಕೊನೆಗೆ ಬದಾನಿಯನ್ನು ಕರೆದು ಆತನಿಗೆ ಹಿಗ್ಗಾಮುಗ್ಗವಾಗಿ ಕೆಟ್ಟದಾಗಿ ಜೋರಾಗೇ ಬೈದಿದ್ದಾಳೆ ತ್ರಿಶಾ. ತ್ರಿಶಾಳ ಬೈಗಳಿಂದ ಉತ್ತೇಜಿತರಂತಾದ ಬದಾನಿ ಕೂಡಾ ಜೋರಾಗೇ ಹೀನಾಯವಾಗಿ ಬೈದಿದ್ದಾರೆ.

webdunia
WD
ನೈಟ್‌ಕ್ಲಬ್‌ನ ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ, ಇಬ್ಬರ ಬೈಗಳ ಜಗಳ ಎಷ್ಟು ತಾರಕಕ್ಕೆ ಹೋಯಿತೆಂದರೆ, ಇಬ್ಬರೂ ಕೈಕೈ ಮಿಲಾಯಿಸಿ ಜಗಳ ಮಾಡಲು ಶುರುಮಾಡುವ ತನಕ ಪರಿಸ್ಥಿತಿ ಮುಂದುವರಿದಿತ್ತು. ಆಮೇಲೆ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದ್ನನು ಅರಿತ ಬದಾನಿ ಗೆಳಯರು ಹಾಗೂ ತ್ರಿಶಾ ಗೆಳತಿಯರು ಇಬ್ಬರನ್ನೂ ಬಿಡಿಸಿದರಂತೆ.

ಈ ಬಗ್ಗೆ ತ್ರಿಶಾರ ಅಮ್ಮನಿಗೆ ಫೋನು ಮಾಡಿದರೆ, ಆಕೆ ಮಾತ್ರ ಹೀಗೆಲ್ಲಾ ನಡೆದೇ ಇಲ್ಲ. ಇದೆಲ್ಲ ಸುಳ್ಳು ಎಂದಿದ್ದಾರೆ. ಜತೆಗೆ, ಬದಾನಿ ಬಗ್ಗೆ ತ್ರಿಶಾಗೆ ಗೊತ್ತೇ ಇಲ್ಲ. ಆತನನ್ನು ಆಕೆ ಭೇಟಿಯೇ ಆಗಿಲ್ಲ. ಆಕೆ ನೈಟ್‌ಕ್ಲಬ್‌ಗೆ ಹೋಗೇ ಇಲ್ಲದ ಮೇಲೆ ಇಂತಹ ಸುದ್ದಿಗೆ ಮಹತ್ವ ಕೊಡೋ ಅಗತ್ಯ ಇಲ್ಲ ಎಂದಿದ್ದಾರೆ. ತ್ರಿಶಾ ಮಾತ್ರ ಇದಕ್ಕೆ ಪ್ರತಿಕ್ರಿಯಿಸಲು ಸಿಕ್ಕಿಲ್ಲ. ಅತ್ತ ಬದಾನಿ ಕೂಡಾ ಕರೆಗಳನ್ನು ಸ್ವೀಕರಿಸುತ್ತಿಲ್ಲ.
webdunia
WD

Share this Story:

Follow Webdunia kannada