Article Bollywood Gossips %e0%b2%a4%e0%b3%86%e0%b2%b2%e0%b3%81%e0%b2%97%e0%b3%81 %e0%b2%a4%e0%b2%ae%e0%b2%bf%e0%b2%b3%e0%b2%bf%e0%b2%97%e0%b3%86 %e0%b2%b6%e0%b2%bf%e0%b2%b6%e0%b2%bf%e0%b2%b0 109060100074_1.htm

Select Your Language

Notifications

webdunia
webdunia
webdunia
webdunia

ತೆಲುಗು, ತಮಿಳಿಗೆ ಶಿಶಿರ

ಕನ್ನಡ ಸಿನೆಮಾ
ಶಿಶಿರ ಚಿತ್ರತಂಡದಿಂದ ಮತ್ತೊಂದು ಸುದ್ದಿ ಬಂದಿದೆ. ತೆಲುಗಿನ ಸೂಪರ್ ಹಿಟ್ ಅರುಂಧತಿ ಚಿತ್ರಕ್ಕೆ ಸ್ಟೆಷಲ್ ಎಫೆಕ್ಟ್ ನೀಡಿದವರೇ ಶಿಶಿರ ಚಿತ್ರಕ್ಕೂ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ವಿಶೇಷತೆಗಳ ಬಗ್ಗೆ ತಿಳಿದ ತೆಲುಗು ನಟ ಸಿದ್ದಾರ್ಥ ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡಲು ಮತ್ತು ಅದರಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆ.

ಈ ನಡುವೆ ಚಿತ್ರವನ್ನು ತಮಿಳಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲೂ ಕೆಲವರು ಮುಂದೆ ಬಂದಿದ್ದಾರೆ ಎಂದು ನಿರ್ದೇಶಕ ಮಂಜು ಸ್ವರಾಜ್ ಹೇಳುತ್ತಾರೆ. ಈ ಚಿತ್ರದಲ್ಲಿ ಏಳು ಜನ ಗಣ್ಯರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇಸ್ರೋ ವಿಜ್ಞಾನಿ ಯು.ಆರ್.ರಾವ್. ಆಧ್ಯಾತ್ಮ ಗುರು ಡಾ. ರಾಮಚಂದ್ರ ಗುರೂಜಿ, ನಿಮ್ಹಾನ್ಸ್ ಮುಖ್ಯಸ್ಥ ಡಾ.ಸಿ.ಆರ್.ಚಂದ್ರಶೇಖರ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಇನ್ನೂ ಮೂವರು ಗಣ್ಯರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದ ಮೂಲಕ ನಟಿ ಪ್ರೇಮಾ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ 7.8 ಅಡಿ ಎತ್ತರದ ಸಂತೋಷ್ ಎಂಬ ವ್ಯಕ್ತಿ ಇಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿನ ಮೂರು ನಿಮಿಷ ನಲವತ್ತೈದು ಸೆಕೆಂಡುಗಳ ಹಾಡನ್ನು ಸ್ಟೆಡಿ ಕ್ಯಾಮ್ ಬಳಸಿ ಸಿಂಗಲ್ ಶಾಟ್‌ನಲ್ಲಿ ಸುರೇಶ್ ಬಾಬು ಚಿತ್ರಿಸಿಕೊಟ್ಟಿದ್ದಾರಂತೆ. ಅಂತೂ ನಿರ್ದೇಶಕರು ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ ಇಟ್ಟು ಕೊಂಡಿದ್ದಾರೆ.

Share this Story:

Follow Webdunia kannada