ತೆರೆಯ ಮೇಲೆ ಬರಲಿದ್ದಾರೆ ನರೇಂದ್ರ ಮೋದಿ.
Publish Date: Wed, 14 Aug 2013 (18:34 IST)
Updated Date: Wed, 14 Aug 2013 (18:33 IST)
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಇನ್ನೇನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಮಿಂಚಲಿದ್ದಾರೆ. ಮೋದಿ ಜೀವನ ಆಧಾರಿತ ಸಿನೆಮಾಗೆ ಹಾಲೀವುಡ್ ನಲ್ಲಿ ಎಲ್ಲಾ ತಯಾರಿ ಕೂಡ ನಡೆದಿದೆ. ಹಾಲಿವುಡ್ ನಿರ್ಮಾಪಕ ಮಿತೇಶ್ ಪಟೇಲ್ ನರೇಂದ್ರ ಮೋದಿಯವರ ಜೀವನ ಆಧಾರಿತ ಸಿನೆಮಾವನ್ನು ಕೈಗೆತ್ತಿಕೊಳ್ಳಲಿದ್ದು ಈ ಸಂಬಂಧ ಮುಖ್ಯಮಂತ್ರಿ ನರೇಂದ್ರ ಮೋದಿಯವರೊಂದಿಗೂ ಮಾತುಕತೆ ನಡೆಸಿದ್ದಾರಂತೆ. ಮೋದಿ ಸಿನೆಮಾದಲ್ಲಿ ಕೇವಲ ರಾಜಕೀಯ ಮಾತ್ರ ಅಲ್ಲ, ಅದರ ಜೊತೆಗೆ ಸ್ವಲ್ಪ ಮಸಾಲಾ ಸೇರಿಸಿ ಪಕ್ಕಾ ಕಮರ್ಷಿಯಲ್ಲಾಗಿ ಸಿನೆಮಾ ಮಾಡುವುದಾಗಿ ಹೇಳಿದ್ದಾರೆ ನಿರ್ಮಪಕರು. ಸಿನೆಮಾಗೆ ಎಲ್ಲಾ ತಯಾರಿಗಳು ನಡೆಯುತ್ತಿವೆ ಅಂತಿರುವ ಸಿನೆಮಾ ತಂಡ ಮೋದಿ ಪಾತ್ರವನ್ನು ಯಾರು ಮಾಡ್ತಿದ್ದಾರೆ ಅನ್ನೋದನ್ನು ಮಾತ್ರ ಗುಟ್ಟು ಬಿಟ್ಟುಕೊಟ್ಟಿಲ್ಲ. ಎಲ್ಲವೂ ಅಂದುಕೊಂಡಂತೆ ಆದ್ರೆ ಮೋದಿ ಬದುಕನ್ನು ಆಧರಿಸಿದ ಸಿನೆಮಾ ಇದೇ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ತೆರೆಯ ಮೇಲೆ ಅಪ್ಪಳಿಸಲಿದೆ.