Publish Date: Thu, 18 Oct 2007 (19:11 IST)
Updated Date: Thu, 18 Oct 2007 (19:11 IST)
ರಾಜಾ ಮುರಾದ್ "ಡಿ5" ಶಿರೋನಾಮೆಯ ಚಿತ್ರದಲ್ಲಿ ನಿಥಾರಿ ಹತ್ಯೆಗಳ ಪ್ರಧಾನ ಸೂತ್ರಧಾರಿ, ಹಂತಕ ಮೊಹಿಂದರ್ ಸಿಂಗ್ ಪಾತ್ರಾಭಿನಯ ಮಾಡಲಿದ್ದಾರೆ. ಯೋಗೀಂದರ್ ಗುಪ್ತಾ ಚಿತ್ರನಿರ್ದೇಶನ ಮಾಡಿದ್ದು, ಮಾಜಿ ಕಟ್ಟಡನಿರ್ಮಾಣಗಾರ ಸುಶೀಲ್ ಗುಪ್ತಾ ನಿರ್ಮಾಪಕರಾಗಿ ಚೊಚ್ಚಲ ಪ್ರವೇಶ ಮಾಡಿದ್ದಾರೆ.
ಈ ಐಡಿಯ ನಿರ್ದೇಶಕ ಯೋಗಿಂದರ್ ಸಿಂಗ್ ಅವರ ಕಲ್ಪನೆಯ ಕೂಸು. ಯೋಗಿಂದರ್ ಸಿಂಗ್ ಜತೆ ರಾಜಾ ತಂಬೂ ಕಾ ಬಂಬೂ ಹಾಸ್ಯ ಚಿತ್ರವೊಂದರಲ್ಲಿ ನಟಿಸಿದ್ದರು. ನಿಥಾರಿ ಹತ್ಯಾಕಾಂಡ ಪ್ರತಿ ಭಾರತೀಯನ ಹೃದಯದಲ್ಲಿ ತಲ್ಲಣ ಉಂಟುಮಾಡಿತು.
ಇಂತಹ ಒಂದು ಭಯಾನಕ ಘಟನೆಯ ಮೂಲಕಾರಣವನ್ನು ಯೋಗಿಂದರ್ ಗುಪ್ತಾ ಚಿತ್ರದಲ್ಲಿ ಬಿಚ್ಚಿಟ್ಟಿದ್ದಾರೆ. ಈ ಚಿತ್ರವು ಜಗತ್ತಿನ ಕೆಡುಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮತ್ತು ಎಚ್ಚರಿಕೆ ಮೂಡಿಸಿ ಕಣ್ಣುತೆರೆಸುತ್ತದೆ ಮತ್ತು ಅಪರಿಚಿತರನ್ನು ಭೇಟಿಯಾಗುವಾಗ ಎಚ್ಚರವಹಿಸುವಂತೆ ಮಕ್ಕಳಿಗೆ ಬೋಧನೆ ನೀಡುತ್ತದೆ.
ಮಧುರ್ ಭಂಡಾರ್ಕರ್ ಅವರ ಟ್ರಾಫಿಕ್ ಸಿಗ್ನಲ್ ಚಿತ್ರದಲ್ಲಿ ಭಿಕ್ಷುಕನ ಪಾತ್ರದಲ್ಲಿ ನಟಿಸಿದ್ದ ಗೋಪಾಲ್ ಸಿಂಗ್ ಈ ಬಾರಿ ಮೊಹಿಂದರ್ ಸಿಂಗ್ ಸೇವಕ ಸುರೀಂದರ್ ಪಾತ್ರವಹಿಸಿದ್ದಾರೆ.
ಮೊಹಿಂದರ್ ಸಿಂಗ್‌ನ ನಡವಳಿಕೆ,ಶಾರೀರಿಕ ಲಕ್ಷಣಗಳು ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಅವರನ್ನು ಕರೆದೊಯ್ಯುವಾಗ ಅವರ ಭಾವನೆಗಳು ಎಲ್ಲವನ್ನೂ ರಾಜಾ ಸೂಕ್ಷ್ಮವಾಗಿ ಗಮನಿಸಿದ್ದಾರೆ.
ಆದರೆ ಈ ಪಾತ್ರವನ್ನು ಮಾಡುತ್ತೇನೆಂದು ಅವರು ಕನಸುಮನಸಿನಲ್ಲೂ ಯೋಚಿಸಿರಲಿಲ್ಲವಂತೆ. ಮೃತಮಕ್ಕಳ ಮನೆಗೆ ಹೋಗಿದ್ದಾಗಿ ಮತ್ತು ಮೋಹನ್ ಸಿಂಗ್ ಬಂಗಲೆಯನ್ನು ಸ್ವತಃ ನೋಡಿದ್ದಾಗಿ ಅವರು ಹೇಳಿದ್ದಾರೆ.