Article Bollywood Gossips %e0%b2%a4%e0%b2%bf%e0%b2%b0%e0%b3%81%e0%b2%aa%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf %e0%b2%88%e0%b2%b6%e0%b2%be %e0%b2%b9%e0%b3%81%e0%b2%9f%e0%b3%8d%e0%b2%9f%e0%b3%81%e0%b2%b9%e0%b2%ac%e0%b3%8d%e0%b2%ac 107110500029_1.htm

Daily Horoscope

Select Your Language

Notifications

webdunia
webdunia
webdunia
webdunia

ತಿರುಪತಿಯಲ್ಲಿ ಈಶಾ ಹುಟ್ಟುಹಬ್ಬ

ಈಶಾ ಡಿಯೋಲ್
ತನ್ನ ವಯಸ್ಸಿನ ಇತರೆ ಯುವತಿಯರ ರೀತಿಯಲ್ಲಿ ಈಶಾ ಡಿಯೋಲ್ ಕ್ಲಬ್‌ನಲ್ಲಿ ತನ್ನ ಹುಟ್ಟುಹಬ್ಬ ಆಚರಿಸಲಿಲ್ಲ. ನಾನು ಮಾಮ್ ಜತೆ ತಿರುಪತಿ ದೇವರ ಜತೆ ಸಂಭಾಷಣೆಯಲ್ಲಿ ನಿರತವಾಗಿದ್ದೆ ಎಂದು ನ.2ರಂದು ತಮ್ಮ 26ನೆ ವರ್ಷದ ಹುಟ್ಟುಹಬ್ಬವನ್ನು ತಿಮ್ಮಪ್ಪನ ಸನ್ನಿಧಿಯಲ್ಲಿ ಆಚರಿಸಿದ ಈಶಾ ಡಿಯೋಲ್ ಹೇಳಿದರು.

ಯಾವುದೇ ಲಂಗುಲಗಾಮಿಲ್ಲದ ಬಿಂದಾಸ್ ಹುಡುಗಿ ಎಂಬ ರೀತಿಯಲ್ಲಿ ನನ್ನನ್ನು ಜನರು ನೋಡುತ್ತಾರೆ. ಆದರೆ ಇದು ನನ್ನ ಧಾರ್ಮಿಕ ಮನೋಭಾವದ ಮತ್ತೊಂದು ಮುಖ ಎಂದು ಈಶಾ ಹೇಳಿದರು. ಪ್ರಸ್ತುತ ಈಶಾ ತನ್ನ ವೃತ್ತಿಯ ಮಾರ್ಗ ಬದಲಾವಣೆಗೆ ನಿರ್ಧರಿಸಿದ್ದಾರೆ.

ದೊಡ್ಡ ಬ್ಯಾನರ್ ಚಿತ್ರಗಳಲ್ಲಿ ಏನನ್ನೂ ಮಾಡದೆಯೇ ಸುಮ್ಮನೇ ಕುಳಿತು ಬೇಜಾರಾಗಿದೆ. ನಾನೀಗ ಸ್ವಾರ್ಥಿಯಾಗಿದ್ದೇನೆ. ಇತ್ತೀಚೆಗೆ "ಬೇಡ" ಎಂದು ಹೇಳುವುದನ್ನೂ ಕಲಿತಿದ್ದೇನೆ. ಪ್ರಜಾತಂತ್ರ ರೀತಿಯಲ್ಲಿ ಪುರುಷರನ್ನು ಮತ್ತು ಚಿತ್ರಗಳನ್ನು ನಿರಾಕರಿಸುವ ಹಕ್ಕು ಚಲಾಯಿಸುತ್ತಿದ್ದೇನೆ.

ಬಿಗ್ ಬ್ಯಾನರ್ ಚಿತ್ರಗಳನ್ನು ನಿರಾಕರಿಸುವುದು ಏಕೆಂದರೆ ಅವುಗಳಲ್ಲಿ ಏನು ಕೆಲಸ ಇರುವುದಿಲ್ಲ ಎಂದು ಅವರು ನುಡಿಯುತ್ತಾರೆ. ಈಶಾ ಈಗ ತನ್ನ ಬಾಲ್ಯದ ಆಕಾಂಕ್ಷೆಯತ್ತ ಹಿಂತಿರುಗುತ್ತಿದ್ದಾರೆ. ನಾನು ರಷ್ಯಾ ಬ್ಯಾಲೆಟ್ ನೃತ್ಯ ಕಲಿತಿದ್ದನ್ನು ಮುಂದುವರಿಸಿ ಒಡಿಸ್ಸಿ ನೃತ್ಯ ಅಭ್ಯಾಸ ಮಾಡಲು ನಿಶ್ಚಯಿಸಿದ್ದೇನೆ. ನಾನು ವೃತ್ತಿಗೆ ಕಾಲಿಟ್ಟ ಐದೂವರೆ ವರ್ಷಗಳ ಬಳಿಕ ಸುಲಭವಾಗಿ ಒಡೆಯಲು ಸಾಧ್ಯವಾಗದ ಚಿಪ್ಪಾಗಿದ್ದೇನೆ ಎಂದು ಈಶಾ ಹೇಳುತ್ತಾರೆ.

Share this Story:

Follow Webdunia kannada