Publish Date: Fri, 12 Oct 2007 (18:33 IST)
Updated Date: Fri, 12 Oct 2007 (18:32 IST)
ಲಗಾ ಚುನಾರಿ ಮೇನ್ ದಾಗ್ ಚಿತ್ರದಲ್ಲಿ ರಾಣಿಯ ಜತೆ ನಟಿಸಿದ್ದ ಅಭಿಷೇಕ್, ತಮ್ಮ ಫೇವರಿಟ್ ಸಹನಟಿಯ ಜತೆ, ಅಲ್ಲಲ್ಲ, ತಮ್ಮ ಪತ್ನಿ ಐಶ್ವರ್ಯ ಬಳಿಕದ ಎರಡನೆ ಫೇವರಿಟ್ ನಟಿ ಜತೆಗೆ ಅಭಿನಯಿಸುವ ಖುಷಿಯಷ್ಟೇ ಅಭಿಷೇಕ್‌ಗೆ ನೀಡುತ್ತಿಲ್ಲ.
ನಮೀಬಿಯಾದಲ್ಲಿ ಗೋಲ್ಡಿ ಬೆಹಲ್ ಅವರ ದ್ರೋಣ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಅಭಿಷೇಕ್ ತಮ್ಮ ತಾಯಿ ಜಯಾ ಜತೆ ಬೆಳ್ಳಿತೆರೆಯನ್ನು ಹಂಚಿಕೊಂಡಿರುವುದು ಅವರಿಗೆ ಅತ್ಯಂತ ಖುಷಿ ನೀಡಿದೆಯಂತೆ. ಮಾಮ್ ಮತ್ತು ಪಾಪಾ ಇಬ್ಬರೂ ವಿಶಿಷ್ಠ ನಟರು.ಮಾಮ್ ಜತೆ ಬೆಳ್ಳಿತೆರೆಯಲ್ಲಿ ನಟಿಸುವುದು ಅತ್ಯಂತ ಖುಷಿ ನೀಡುತ್ತದೆ ಎಂದು ಅಭಿಷೇಕ್ ಹೇಳಿದ್ದಾರೆ.
ತಂದೆ, ತಾಯಿಗಳ ಜತೆ ಅಭಿನಯದಲ್ಲಿ ವ್ಯತ್ಯಾಸವೇನು ಎಂದು ಕೇಳಿದಾಗ "ಚಿತ್ರೀಕರಣದ ಮಧ್ಯೆ ತಂದೆಯ ಜತೆ ನಾನು ಮೋಜಿನಿಂದ ಕಾಲಕಳೆಯುತ್ತೇನೆ. ಆದರೆ ಕ್ಯಾಮೆರಾ ಸ್ವಿಚ್ ಆಫ್ ಮಾಡಿದಾಗ ತಾಯಿ ನನ್ನ ಆರೈಕೆ ಮಾಡುತ್ತಾ ಚಡಪಡಿಕೆ ತೋರಿಸುತ್ತಾರೆ. ಅದು ನನಗೆ ಇಷ್ಟವಿಲ್ಲದಂತೆ ನಟನೆ ಮಾಡಿದರೂ ಮನಸ್ಸಿನೊಳಗೆ ಖುಷಿ ಅನುಭವಿಸುತ್ತೇನೆ ಎಂದು ಅಭಿಷೇಕ್ ಹೇಳುತ್ತಾರೆ.