Article Bollywood Gossips %e0%b2%a4%e0%b2%be%e0%b2%82%e0%b2%a4%e0%b3%8d%e0%b2%af%e0%b2%be %e0%b2%9f%e0%b3%8b%e0%b2%aa%e0%b3%86 %e0%b2%86%e0%b2%97%e0%b2%bf %e0%b2%85%e0%b2%95%e0%b3%8d%e0%b2%b7%e0%b2%af%e0%b3%8d 108040100007_1.htm

Select Your Language

Notifications

webdunia
webdunia
webdunia
webdunia

ತಾಂತ್ಯಾ ಟೋಪೆ ಆಗಿ ಅಕ್ಷಯ್...?

ತಾಂತ್ಯಾ ಟೋಪೆ
IFM
ಎಲ್ಲವೂ ಸರಿಹೋದರೆ ಅಕ್ಷಯ್ ಕುಮಾರ್ ತಾಂತ್ಯಾ ಟೋಪೆಯಾಗಲಿದ್ದಾರೆ.

ಮಾಹಿತಿ ಮತ್ತು ಸಂಪರ್ಕ ಸಚಿವಾಲಯ ಹಾಗೂ ಫಿರೋಝ್ ನಾಡಿಯಾವಾಲಾ ಜಂಟಿಯಾಗಿ ತಾಂತ್ಯಾ ಟೋಪೆಯ ಚಿತ್ರವನ್ನು ನಿರ್ಮಿಸಲಿವೆ. ಗಾಡ್ ಮದರ್ ಖ್ಯಾತಿಯ ವಿನಯ್ ಶುಕ್ಲಾ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಭಾರತದ ಪ್ರಥಮಾ ಸ್ವಾತಂತ್ರಯ ಹೊರಾಟವೆಂದು ಭಾರತೀಯರು ಕರೆದುಕೊಳ್ಳುವ, ಸಿಪಾಯಿ ದಂಗೆ ಎಂದು ಬ್ರಿಟಿಷರು ಹೇಳುವ 1857ರ ದಂಗೆಯನ್ನು ಒಳಗೊಂಡ ಚಿತ್ರವಿದು.

ಚಿತ್ರದಲ್ಲಿ ತಾಂತ್ಯಾ ಟೋಪೆಯ ಹೊರತಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಡಿದ ಝಾನ್ಸಿಯ ರಾಣಿ ಲಕ್ಷ್ಮಿಬಾಯಿ, ಟೋಪೆಯ ಅತ್ಯುತ್ತಮ ಗೆಳೆಯ ನಾನಾ ಸಾಹೇಬ್ ಪೇಶ್ವಾ ಮೊದಲಾದವರ ಕತೆಯೂ ಸಹ ಒಳಗೊಂಡಿದೆ.

ಫಿರೋಝ್ ನಾಡಿಯಾವಾಲಾ ನಿರ್ಮಾಪಕತ್ವದ ಈ ಚಿತ್ರದ ಮುಖ್ಯಪಾತ್ರಕ್ಕೆ ಅಕ್ಷಯ್ ಕುಮಾರ್‌ನನ್ನು ಸಂಪರ್ಕಿಸಲಾಗಿದೆ. ಈ ಬಗ್ಗೆ ಅಕ್ಷಯ್ ಕೂಡ ಆಸಕ್ತಿ ವಹಿಸಿದ್ದಾರೆ. ಆದರೆ ಚಿತ್ರದ ಒಪ್ಪಂದಕ್ಕೆ ಕರಾರು, ಸಹಿ ಪ್ರಕ್ರಿಯೆ ಮುಗಿದಿಲ್ಲ.

ಲಕ್ಷ್ಮೀ ಬಾಯಿಯ ಪಾತ್ರಕ್ಕೆ ದೀಪಿಕಾ ಪಡುಕೋಣೆಯನ್ನು ಸಂಪರ್ಕಿಸಿದ್ದು, ಎಲ್ಲವೂ ಯೋಜನೆಯಂತೆ ನಡೆದರೆ, ಇದು ಅಕ್ಷಯ್ ಕುಮಾರ್ ಜೊತೆಗಿನ ಎರಡನೇ ಚಿತ್ರವಾಗುತ್ತದೆ. ಈ ಮೊದಲಿನದು ಚಾಂದಿನಿ ಚೌಕ್ ಟು ಚೈನಾ ಚಿತ್ರವಾಗಿತ್ತು.

Share this Story:

Follow Webdunia kannada