ತಮ್ಮನ್ನಾ ಟಾಪ್ ಹೀರೋ ಮೇಲೆ ಸಿಟ್ಟಾದ ಕಥೆ...ಆ ಹೀರೋ...?
, ಸೋಮವಾರ, 10 ಮಾರ್ಚ್ 2014 (10:00 IST)
ಸಾಮಾನ್ಯವಾಗಿ ಈಗ ನಿರ್ಮಾಪಕರು ಮತ್ತು ಹೀರೋಗಳದ್ದೆ ಸಾಮ್ರಾಜ್ಯ ಸಿನಿಮಾ ರಂಗದಲ್ಲಿ. ಆಕೆ ಎಷ್ಟೇ ಪ್ರಸಿದ್ಧ ನಟಿಯಾಗಿದ್ದರು ಸಹ ನಿರ್ಮಾಪಕರು ಮತ್ತು ಹೀರೋ ಮುಂದೆ ವಿನಮ್ರವಾಗಿ ಇರಲೇ ಬೇಕು ಅಂತಹ ಪರಿಸ್ಥಿತಿ ಉಂಟಾಗಿದೆ ಈಗ. ಅದರಲ್ಲೂ ಟಾಲಿವುಡ್ ನಲ್ಲಿ ಹೀರೋಗಳದ್ದೆ ಕಾರುಬಾರು. ಆದರೆ ಈಗ ಒಂದು ಹೊಸ ಸಂಗತಿ ನಡೆದಿದೆ. ಓರ್ವ ಟಾಪ್ ಹೀರೋ ಮೇಲೆ ಮತ್ತೋರ್ವ ಟಾಪ್ ಹೀರೋಯಿನ್ ಜೋರು ಮಾಡಿದ್ದಾಳೆ. ಅದರಲ್ಲೂ ಟಾಲಿವುಡ್ ಟಾಪ್ ಹೀರೋಯಿನ್ ಶೂಟಿಂಗ್ ಲೋಕೇಶನ್ ನಲ್ಲೆ ಆ ಹೀರೋ ಮೇಲೆ ಜೋರು ಮಾಡಿದ್ದಾಳೆ. ಪ್ರಿನ್ಸ್ ಮಹೇಶ್ ಬಾಬು ಅವರು ನಟಿಸುತ್ತಿರುವ ಅಪ್ ಕಮಿಂಗ್ ಚಿತ್ರ ಆಗಡು ಆ ಸಿನಿಮಾದ ಶೂಟಿಂಗ್ ಸಮಯದಲ್ಲಿ ಈ ಪ್ರಸಂಗ ನಡೆದಿದೆ ಎನ್ನುವ ಸುದ್ದಿ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಜೋರಾಗಿ ಕೇಳಿ ಬರುತ್ತಿದೆ.
ಶೂಟಿಂಗ್ ವಿರಾಮದದ ಸಮಯದಲ್ಲಿ ಮಾತುಕತೆ ನಡೆಯುವಾಗ ತಮನ್ನ ಸಿನಿಮಾ ಕೆರಿಯರ್ ಬಗ್ಗೆ ಮಾತನಾಡುತ್ತಿದ್ದಾಗ, ಇಲ್ಲಿ ಹೀರೋ ಡಾಮಿನೇಶನ್ . ಆರಂಭದಲ್ಲಿ ನಾನೇ ಅಗಡು ಚಿತ್ರದಲ್ಲಿ ಆರಂಭದಲ್ಲಿ ನಾನು ಬೇಡ ಅಂತ ಹೇಳಿದ್ದ್ದರು ಮಹೇಶ್ ಬಾಬು. ಹಾಗೆ ನೋಡಿದದ್ರೆ ಎಲ್ಲ ಸರಿಯಾಗಿ ಇದ್ದಿದ್ದರೆ ನಾನು ಈಗಾಗಲೇ ಮಹೇಶ್ ಜೊತೆ ಮೂರು ಚಿತ್ರಗಳಲಿ ನಟಿಸ ಬೇಕಿತ್ತು ಎಂದು ಹೇಳಿದಳಂತೆ. ಅದು ಸ್ವಲ್ಪ ಬಿಸಿಯಾಗಿಯೇ ಇತ್ತು ಅಂತಾರೆ ಹತ್ತಿರದವರು. ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗ ಬಾರದು ಎಂದು ಚಿತ್ರತಂಡದವರು ಅದನ್ನು ಕೂಲ್ ಮಾಡಿ ಇಬ್ಬರಲ್ಲೂ ಕೋಪ ಬೆಳೆಯದಂತೆ ಮಾಡಿದರಂತೆ.. ಏನೇ ಆದರು ಈ ತಮನ್ನಾಗೆ ಜಾಸ್ತಿ ಜಂಬ ಬಿಡಿ ಅಂತ ಸಹ ಅಂದು ಕೊಳ್ತಿದ್ದಾರೆ ಬಹಳಷ್ಟು ಮಂದಿ !