ತಮಿಳು ನಟ ಅಜಿತ್ ಬೈಕ್ ಕ್ರೇಜ್
Publish Date: Tue, 22 Oct 2013 (15:22 IST)
Updated Date: Tue, 22 Oct 2013 (15:22 IST)
ತಮಿಳು ಸಿನಿ ನಟ ಅಜಿತ್ ಬೇರೆ ಟೈಪ್. ಕಾರಣ ಇಷ್ಟೇ ಆಟ ಮಾಡುವ ಕೆಲ್ಸವೆನ್ನ ತುಂಬಬ ಭಿನ್ನ. ಇತ್ತಿಚೆಗೆ ಸಿನಿಮಾ ಒಂದು ಸೋತಿದ್ದಕ್ಕೆ ಸಂಭಾವನೆ ನೀಡಿ ತನ್ನ ದೊಡ್ಡತನ ಮೆರೆದಿದ್ದರು ಅಜಿತ್.ಈಗ ಇನ್ನೊಂದು ವಿಷದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಬೇರೆ ನಟರ ರೀತಿ ಕಪ್ಪನೆಯ ಗ್ಲಾಸ್ ಏರಿಸಿ ಕಾರೊಳಗೆ ಹುದುಗಿ ಕೂರುವುದಕ್ಕೆ ಇಷ್ಟ ಆಗಲ್ವಂತೆ . ತನಗೆ ಇಷ್ಟ ಆಗುವ ರೀತಿಯಲ್ಲಿ ಬದುವ ಆಶಯ ಹೊಂದಿದ್ದಾರೆ, ಅದರಂತೆ ನಡೆಯುತ್ತಿದ್ದಾರೆ ಅಜಿತ್. ಅವರರಿಗೆ ಬೈಕ್ ನಲ್ಲಿ ರೈಡ್ ಮಾಡೋಕೆ ತುಂಬಾ ಖುಷಿ ಅಂತೆ . ಅವಕಾಶ ಸಿಕ್ಕಾಗ ತಪ್ಪದೆ ಬೈಕ್ ಓಡಿಸುತ್ತಾರಂತೆ. ಇತ್ತೀಚೆಗೆ ಅವರು ತಮ್ಮ ಹೊಸ ಬೈಕ್ ಏರಿ ಚೆನ್ನೈ ನಿಂದ ಪುಣೆ ವರೆಗೂ ಹೋಗಿ ಬಂದರಂತೆ. ಹತ್ತೊಂಬತ್ತು ಗಂಟೆಗಳ ಕಾಲ ನಿರಂತರವಾಗಿ ಆತ ಬೈಕ್ ಓಡಿ ಸಿ ಎಲ್ಲರು ಆಶ್ಚರ್ಯ ಹೊಂದುವಂತೆ ಮಾಡಿದರಂತೆ . ಬೈಕ್ ಜರ್ನಿ ಒಂದು ಔಷಧ ವಾಯ್ತು ಎನ್ನುವ ಮಾತು ಹೇಳಿದ್ದು ಅಜಿತ್. ಅಲ್ಲದೆ ರೋಡ್ ಸೇಫ್ಟಿ ಅರಿವು ಮೂಡಿಸುವುದಕ್ಕಾಗಿ ತಾನು ಅಲ್ಲಿವರೆಗೂ ಹೋದೆ ಎಂದಿದ್ದಾರೆ ಅಜಿತ್. ಆದರೆ ಅಜಿತ್ ಈ ಗುಣವನ್ನು ತಮಗೆ ಹೊಂದುವಂತೆ ಮಾಡಿಕೊಳ್ಳಲು ಟ್ರಾಫಿಕ್ ಅಧಿಕಾರಿಗಳು ನಿರ್ಧರಿಸಿದ್ದಾರಂತೆ . ಅಂದ್ರೆ ಅವರು ಅಜಿತ್ ಹೆಲ್ಪ್ ತಗೊಂಡು ಎರ್ರಾಬಿರ್ರಿ ಆಗಿ ಓಡಿಸುವವರಿಗೆ ಬುದ್ಧಿ ಕಲಿಸುವ ಪ್ಲಾನ್ ಮಾಡಿದ್ದಾರೆ .