ತಮಿಳು ತಂಬಿಗಳನ್ನು ರಂಜಿಸಲು ಬರುತ್ತಿದ್ದಾರೈ ಶ್ರೀದೇವಿ
, ಶನಿವಾರ, 19 ಏಪ್ರಿಲ್ 2014 (09:58 IST)
ಕೇವಲ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಾತ್ರವಲ್ಲ ಬಾಲಿವುಡ್ ನಲ್ಲೂ ಸಹ ತನ್ನ ಪ್ರತಿಭೆ ತೋರಿ ಅನೇಕ ದಶಕಗಳ ಕಾಲ ತನಗೊಂದು ಸ್ಥಾನ ಪಡೆದ ನಟಿ ಶ್ರೀದೇವಿ. ಆ ಬಳಿಕ ನಿರ್ಮಾಪಕ ಬೋನಿ ಕಪೂರ್ ಅವರ ಜೊತೆ ಮದುವೆ ಆಗಿ ಎರಡು ಮಕ್ಕಳ ತಾಯಿ ಆಗಿ ಚಿತ್ರದಲ್ಲಿ ನಟಿಸುವುದಕ್ಕೆ ಬೈ ಹೇಳಿದ್ದರು ಶ್ರೀ. ನಟಿಸಲಿ ಬಿಡಲಿ ಆಕೆ ಬಗ್ಗೆ ಅಭಿಮಾನಿಗಳಿಗೆ ಕ್ರೇಜ್ ಇದ್ದೇ ಇದೆ. ಅದಕ್ಕೆ ತಕ್ಕ ಉದಾಹಾರಣೆ 2012ರಲ್ಲಿ ಬಿಡುಗಡೆ ಆದ ಇಂಗ್ಲೀಷ್ ವಿಂಗ್ಲೀಷ್ ಚಿತ್ರ. ಅದಾದ ಬಳಿಕ ಆಕೆ ಚಿತ್ರಗಳಲ್ಲಿ ನಟಿಸಲು ಹೋಗಲೇ ಇಲ್ಲ, ಆದರೂ ಶ್ರೀದೇವಿ ಮತ್ತೆ ನಟಿಸುತ್ತಿದ್ದಾಳೆ ಎನ್ನುವ ಸುದ್ದಿ ಜಾರಿಯಲ್ಲಿ ಇದ್ದೆ ಇತ್ತು. ಈಗ ಬಂದಿರುವ ಸುದ್ದಿ ಪ್ರಕಾರ ಶ್ರೀ ತಮಿಳು ಚಿತ್ರದಲ್ಲಿ ತನ್ನ ಪ್ರತಿಭೆ ತೋರಲು ಸಿದ್ಧ ಆಗಿದ್ದಾರೆ. ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಶ್ರೀದೇವಿ. ಬಾಲಿವುಡ್ ಕಡೆಗೆ ಹೋರಾಟ ಬಳಿಕ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸುವ ಗೋಜಿಗೆ ಹೋಗಿರಲಿಲ್ಲ .. ಆದರೆ ಸಿನಿಮಾರಂಗಕ್ಕೆ ರೀ ಎಂಟ್ರಿ ಆಗುತ್ತಿರುವ ಈ ಚೆಲುವೆ ತಮಿಳು ಚಿತ್ರದ ಮುಖಾಂತರ ಮತ್ತೆ ದಕ್ಷಿಣ ಭಾರತದ ಪ್ರೇಕ್ಷಕರ ಮನರಂಜಿಸಲು ಸಿದ್ಧ ಆಗುತ್ತಿದ್ದಾರೆ ಎನ್ನುವುದೇ ಸದ್ಯದ ಸುದ್ದಿ. ಆದರೆ ಅಧಿಕೃತವಾಗಿ ಎಲ್ಲ ಕೆಲಸಗಳು ನಡೆದಿಲ್ಲ.. ಹಾಗಂತ ಸುದ್ದಿ ಹರಡಿದೆ.. ಆದರೂ ಇದು ನಿಜ ಅನ್ನುತ್ತಿದೆ ಮತ್ತೊಂದು ಮೂಲಗಳು.. ಏನೇ ಆದರು ಆಕೆ ಸಿನಿಮಾದಲ್ಲಿ ಮಾಡ್ತಾರೆ ಅನ್ನುವ ಸುದ್ದಿಯೇ ಶ್ರೀ ಅಭಿಮಾನಿಗಳಿಗೆ ಖುಷಿ ತಂದಿದೆ.