ತಮಿಳು ಚಿತ್ರದಲ್ಲಿ ಬಾಲಿವುಡ್ ನೀಲ್ ನಿತಿನ್
, ಮಂಗಳವಾರ, 18 ಮಾರ್ಚ್ 2014 (10:07 IST)
ತಮಿಳಿನ ಸೂಪರ್ ಸ್ಟಾರ್ ವಿಜಯ್ ಅವರ ಹೊಚ್ಚ ಹೊಸ ಚಿತ್ರವನ್ನು ಪ್ರಸಿದ್ಧ ನಿರ್ದೇಶಕ ಮುರುಗದಾಸ್ ಅವರು ನಿರ್ದೇಶಿಸುತ್ತಿದ್ದಾರೆ. ಅವರ ಈ ಚಿತ್ರದಲ್ಲಿ ಬಾಲಿವುಡ್ ನ ನೀಲ್ ನಿತಿನ್ ಮುಖೇಶ್ ಸಹ ನಟಿಸುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ಇನ್ನು ಹೆಸರು ಇಟ್ಟಿಲ್ಲ .ಇದಕ್ಕೆ ಸಂಬಂಧಪಟ್ಟಂತೆ ನಿರ್ದೇಶಕ ಮುರುಗದಾಸ್ ಹೌದು ನೀಲ್ ನಿತಿನ್ ನನ್ನ ಚಿತ್ರದಲ್ಲಿ ಖಳನಟನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ತುಪ್ಪಾಕ್ಕಿ ಯಶಸ್ಸಿನ ನಂತರ ಮತ್ತೊಮ್ಮೆ ಮುರುಗದಾಸ್ ಮತ್ತು ವಿಜಯ್ ಈ ಚಿತ್ರದ ಮುಖಾಂತರ ಮತ್ತೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರವನ್ನು ತಮಿಲಿನಲ್ಲಿಯು ಸಹ ರೀಮೇಕ್ ಮಾಡಲಾಗಿದೆ. ಸಮಂತ ಋತು ಪ್ರಭು ಈ ಚಿತ್ರದಲಿ ವಿಜಯ್ ಗೆ ಸಾಥ್ ಆಗಲಿದ್ದಾರೆ. ಈ ಚಿತ್ರವೂ ದೀಪಾವಳಿಯಲ್ಲಿ ಬಿಡುಗಡೆ ಆಗಲಿದೆಯಂತೆ .