ತಮಿಳಿನಲ್ಲಿ ಡಬ್ಬಿಂಗ್ ಒಲ್ಲೆ ಒಲ್ಲೆ ಅಂದ ಸೆಕ್ಸಿ ಶ್ರುತಿ ಹಾಸನ್ ...
, ಮಂಗಳವಾರ, 4 ಫೆಬ್ರವರಿ 2014 (10:47 IST)
ಶ್ರುತಿಹಾಸನ್ ಅತ್ಯುತ್ತಮ ನಟಿ ಎನ್ನುವ ಹೆಸರನ್ನು ಪಡೆದಾಕೆ. ಆಕೆ ನಟನೆ ಮಾತ್ರವಲ್ಲ, ಎಕ್ಸ್ ಪೋಜಿಂಗ್ ವಿಷಯದಲ್ಲೂ ಆಕೆ ಸಾಕಷ್ಟು ಮುಂದೆ ಇದ್ದಾಳೆ ಎನ್ನುವ ಸಂಗತಿಯು ಡಿ-ಡೇ ಚಿತ್ರದಿಂದ ಸಾಬೀತಾಗಿದೆ. ಸ್ಕ್ರಿಪ್ಟ್ ಯಾವ ರೀತಿಯ ಡಿಮ್ಯಾಂಡ್ ಮಾಡುತ್ತದೆಯೋ ಅದಕ್ಕೆ ಪೂರಕವಾಗಿ ತಾನು ಸಿದ್ಧ ಆಗ್ತೀನಿ ಎನ್ನುವ ಮಾತನ್ನು ಆಕೆ ಸ್ಪಷ್ಟ ಪಡಿಸಿದ್ದಾಳೆ. ಈ ಮುಖಾಂತರ ತಾನು ಎಂತಹ ಹಾಟ್ ಸೀನ್ ಗಳಲ್ಲೂ ನಟಿಸಲು ಸಿದ್ಧ ಎನ್ನುವುದನ್ನು ಆಕೆ ಹೇಳಿದ್ದಾಳೆ ಇನ್ ಡೈರೆಕ್ಟ್ ಆಗಿ ಬಾಲಿವುಡ್ ಮಂದಿಗೆ! ಈಕೆಯ ಹಾಟ್ ಪೋಜ್ ಗಳನ್ನೂ ಕಂಡು ಇವರ ತಂದೆ ಕಮಲ್ ಹಾಸನ್ ಸಹ ತಬ್ಬಿಬ್ಬಾಗಿದ್ದಾರೆ ಎಂದರೆ ಅದಿನ್ಯಾವ ಪರಿಯಲ್ಲಿ ಇರಬಹುದು ಹೇಳಿ !
ಆದರೆ ಈಗ ಶ್ರುತಿ ರಂಗಾಚಾರಿ ಅನ್ನುವ ತಮಿಳು ನಿರ್ಮಾಪಕನ ವಿರುದ್ಧ ಸಿಟ್ಟಿಗೆ ಎದ್ದಿದ್ದಾಳೆ. ಆಕೆ ಆತನ ಮೇಲೆ ಲೀಗಲ್ ನೋಟೀಸ್ ಕಳುಹಿಸಿದ್ದಾಳೆ. ಅಷ್ಟೇ ಅಲ್ಲದೆ ಆತನ ಮೇಲೆ ಕೇಸ್ ಹಾಕಲು ಸಹ ಸಿದ್ಧವಾಗಿದ್ದಾಳೆ. ಏಕೆಂದರೆ ಆಕೆ ಬಾಲಿವುಡ್ ನಲ್ಲಿ ನಟಿಸಿದ್ದ ಡಿ -ಡೇ ಸಿನಿಮಾವನ್ನು ತಮಿಳಿನಲ್ಲಿ ಡಬ್ಬಿಂಗ್ ಮಾಡಿ ದಾವೂದ್ ಅನ್ನುವ ಶೀರ್ಷಿಕೆ ಯಿಂದ ಬಿಡುಗಡೆ ಮಾಡುತ್ತಿದ್ದಾರೆ ಆತ. ಆದರೆ ಹಿಂದಿ ಚಿತ್ರದ ಡಬ್ಬಿಂಗ್ ವಿಷಯದಲ್ಲಿ ತಮಿಳು ನಿರ್ಮಾಪಕ ಹೆಚ್ಚಾಗಿಯೇ ಅತಿಕ್ರಮಿಸಿದ್ದಾರೆ ಎನ್ನುವುದು ಆಕೆ ಆರೋಪವಾಗಿದೆ. ನಿಖಿಲ್ ಅದ್ವಾನಿ ಅವರ ನಿರ್ದೇಶನದಲ್ಲಿ ಬಿಡುಗಡೆ ಆಗಿದ್ದ ಡಿ -ಡೇ ಚಿತ್ರದಲ್ಲಿ ಶ್ರುತಿ ವೇಶ್ಯೆಯ ಪಾತ್ರ ನಿರ್ವಹಿಸಿದ್ದಳು. ಅರ್ಜುನ್ ರಾಮ್ ಪಾಲ್ ಮತ್ತು ಶ್ರುತಿ ಹಾಸನ್ ನಡುವೆ ನಡೆದ ಸನ್ನಿವೇಶಗಳು ಬಾಲಿವುಡ್ ನಲ್ಲಿ ಅತ್ಯಂತ ಸ್ಪೈಸಿ ಟಾಪಿಕ್ ಆಗಿ ಎಲ್ಲರ ಗಮನ ಸೆಳೆದಿತ್ತು. ಈಗ ಇದನ್ನೇ ಕ್ಯಾಶ್ ಮಾಡಿಕೊಳ್ಳುವ ಸಲುವಾಗಿ ನಿರ್ಮಾಪಕ ರಾಮಾಚಾರಿ ಡಬ್ಬಿಂಗ್ ಮಾಡುತ್ತಿರುವುದಾಗಿ ಕಾಲಿವುಡ್ ಮಂದಿಯ ಗುಸುಗುಸು !ಆದರೆ ಈ ಚಿತ್ರಕ್ಕೆ ದಾವುದ್ ಅನ್ನುವ ಹೆಸರನ್ನು ಇಟ್ಟಿರುವುದು ಸಹ ಮಿಸ್ ಲೀಡ್ ಆಗುತ್ತದೆ ಇನ್ನು ಅಲ್ಲದೆ ಒಬ್ಬ ಪಾಕಿಸ್ತಾನಿ ವೇಶ್ಯೆಯಾಗಿ ನಟಿಸಿರುವ ತನ್ನ ಹಾಟ್ ದೃಶ್ಯಗಳಿಂದ ಕಾಲಿವುಡ್ನಲ್ಲಿ ತನ್ನ ಇಮೇಜ್ ಮಾತ್ರವಲ್ಲ, ತನ್ನ ತಂದೆ ಕಮಲ ಹಾಸನ್ ಅವರ ಇಮೇಜ್ ಮೇಲು ಕೆಟ್ಟ ಪರಿಣಾಮ ಉಂಟಾಗುತ್ತದೆ ಎನ್ನುವುದು ಆಕೆಯ ವಾದ! ಆದರೆ ಬಾಲಿವುಡ್ ನಲ್ಲಿ ಉಂಟಾಗದ ಡ್ಯಾಮೇಜ್ ಕಾಲಿವುಡ್ ನಲ್ಲಿ ಹೇಗೆ ಆಗುತ್ತೋ ನಾವ್ ಕಾಣೆ ಎನ್ನುತ್ತಿದ್ದಾರೆ ಕಾಲಿವುಡ್ ಮಂದಿ!