Article Bollywood Gossips %e0%b2%a4%e0%b2%ac%e0%b3%82%e0%b2%97%e0%b3%86 %e0%b2%af%e0%b2%b6%e0%b2%b8%e0%b3%8d%e0%b2%b8%e0%b3%81 %e0%b2%a8%e0%b3%80%e0%b2%a1%e0%b2%b2%e0%b2%bf%e0%b2%b0%e0%b3%81%e0%b2%b5 %e0%b2%a8%e0%b3%87%e0%b2%ae%e0%b3%8d%e2%80%8c%e0%b2%b8%e0%b3%87%e0%b2%95%e0%b3%8d%e2%80%8c 107050500016_1.htm

Daily Horoscope

Select Your Language

Notifications

webdunia
webdunia
webdunia
webdunia

ತಬೂಗೆ ಯಶಸ್ಸು ನೀಡಲಿರುವ ನೇಮ್‌ಸೇಕ್‌

ನೇಮ್‌ಸೇಕ್‌
ಬಾಲಿವುಡ್‌ನಲ್ಲಿ ನೀಳಕಾಯದ ಸುಂದರಿ ಎಂದೇ ಖ್ಯಾತಳಾಗಿರುವ ತಬೂ ಇದೀಗ ಮತ್ತೆ ಸುದ್ದಿಯಾಗುತ್ತಿದ್ದಾರೆ. ಈಕೆ ನಟಿಸಿದ ಹೊಸ ಚಿತ್ರ ವೀಕ್ಷಕರಿಂದ ಸೈ ಎನಿಸಿದೆ, ಪ್ರಶಂಸೆಗೆ ಪಾತ್ರವಾಗಿದೆ.

ತಬೂ ನಾಯಕಿಯಾಗಿರುವ ಬಾಲಿವುಡ್‌ನ ಹೊಸ ಚಿತ್ರ 'ನೇಮ್‌ ಸೇಕ್' ಥಿಯೆಟರ್‌ಗಳಲ್ಲಿ ಯಶಸ್ಸಿನತ್ತ ದಾಪುಗಾಲಿಡುತ್ತಿದೆ. ಇಂದೊಂದು ಮೀರಾ ನಾಯರ್ ಚಿತ್ರವಾಗಿದ್ದು, ತಬೂ ಅವರೊಂದಿಗೆ ನಾಯಕನಾಗಿ ಇರ್ಫಾನ್‌ ಖಾನ್‌ ಉಜ್ವಲ ಅಭಿನಯ ನೀಡಿದ್ದಾರೆ. ಈ ಕಾರಣಕ್ಕಾಗಿ ಚಿತ್ರರಸಿಕರ ಪ್ರಶಂಸೆಗೆ ಪಾತ್ರವಾಗಿದೆ.

ವಿದೇಶದಲ್ಲಿರುವ ಭಾರತೀಯ ಕುಟುಂಬವೊಂದರ ಕಥೆ ನೇಮ್‌ಸೇಕ್‌. ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಬಂಗಾಳಿ ಕುಟುಂಬದ ಸಿಹಿಕಹಿಗಳ ಚಿತ್ರಣ ಇದರಲ್ಲಿದೆ. ಅನಿವಾಸಿ ಕುಟುಂಬದ ಚಿತ್ರಣವನ್ನು ಇರ್ಫಾನ್‌ ಹಾಗೂ ತಬೂ ಇದರಲ್ಲಿ ಮನೋಜ್ಞವಾಗಿ ಮೂಡಿಸಿದ್ದಾರೆ. ವಿದೇಶಿ ಭಾರತೀಯ ಕುಟುಂಬಗಳಲ್ಲಿರುವ ಯಾಂತ್ರಿಕತೆ ಇತ್ಯಾದಿಗಳು ಅನನ್ಯವಾಗಿ ಪ್ರತಿಫಲನಗೊಂಡಿವೆ.

ಮೀರಾ ನಾಯರ್‌ ಟಚ್‌ ಈ ಚಿತ್ರದಲ್ಲೂ ಬಹಳಷ್ಟು ಕಾಣಿಸಿಕೊಂಡಿದೆ. ಕುಟುಂಬಗಳು, ಸಮಾಜ ಇತ್ಯಾದಿಗಳ ಕಥೆ ಹೇಳಿ ಪ್ರತಿಬಾರಿಯೂ ವಿವಾದಕ್ಕೆ ಸಿಕ್ಕಿದ್ದ ಮೀರಾ ನಾಯರ್‌ ಇಲ್ಲಿ ವಿವಾದಕ್ಕಿಳಿದಿಲ್ಲವಾದರೂ, ಆಧುನಿಕ ಜಗತ್ತಿನಲ್ಲಿ ಕುಟುಂಬಸಂಬಂಧಗಳು ಸಡಿಲಾಗುತ್ತಿರುವುದರ ಕುರಿತು ಸಿನಿಮಾ ಕಥೆ ಹೇಳಿದ್ದಾರೆ.

Share this Story:

Follow Webdunia kannada