ಭಾರತೀಯ ಚಿತ್ರರಂಗದ ವಿಭಿನ್ನ ನಟಿ ತಬು. ಆಕೆಯು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಡಿಸ್ಚಾರ್ಜ್ ಆಗಿ ಕ್ಷೇಮವಾಗಿ ಹಿಂತಿರುಗಿದ್ದಾರೆ. ಅತ್ಯಂತ ಅಪರೂಪದ ಅಭಿನೇತ್ರಿಗಳಲ್ಲಿ ಒಬ್ಬರಾಗಿರುವ ತಬು ಅವರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಸೇರಿ ಸುಮಾರು ಮೂರು ಗಂಟೆಗಳ ಕಾಲ ಅಲ್ಲಿಯೇ ನೆಲಸಿ ಆ ಬಳಿಕ ವಾಪಾಸಾಗಿದ್ದಾರೆ.
ನಲವತ್ತೆರಡರ ಹರೆಯದ ಈ ಪ್ರತಿಭಾವಂತೆ ಕಾಶ್ಮೀರದಲ್ಲಿ ವಿಶಾಲ್ ಭಾರದ್ವಾಜ್ ಅವರ ನಿರ್ದೇಶನದ ಹೈದರ್ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಅಲ್ಲಿನ ವಾತಾವರಣದ ತಬು ಅವರನ್ನು ಫೆಬ್ರವರಿ 21 ರಂದು ಆಸ್ಪತ್ರೆಗೆ ಅಡ್ಮಿಟ್ ಮಾಡಲಾಯಿತು.