ತಬು - ಶಾಹಿದ್ ಕಪೂರ್ ಪ್ರೇಮ ಪರಿಣಯ ?
Publish Date: Wed, 12 Mar 2014 (10:08 IST)
Updated Date: Tue, 15 Apr 2014 (10:52 IST)
ಎಲ್ಲ ವುಡ್ ನಲ್ಲಿ ಸ್ಟಾರ್ ಹೀರೋಗಳ ಜೋಡಿಯಾಗಿ ಅನೇಕ ವರ್ಷಗಳ ಮಿಂಚಿ ಮಿನುಗಿದ ತಾರೆ ತಬು. ಆಕೆಯುಈಗ ನಲವತ್ತರ ಹರೆಯದ ಸುಂದರಿ. ಕ್ರಮೇಣ ಯುವ ಅಂದಗಾರ್ತಿಯರು ಚಿತ್ರರಂಗಕ್ಕೆ ಪ್ರವೇಶಿಸಿದ ಬಳಿಕ ಅವಕಾಶಗಳು ಕಡಿಮೆ ಆಯಿತು. ಮಧ್ಯವಯಸ್ಕ ಹೀರೋಗಳ ಜೊತೆಯಲ್ಲಿ ನಟಿಸುತ್ತ ಆಕೆ ತನ್ನ ತಾರ ಬದುಕನ್ನು ಮುಂದುವರೆಸಿಕೊಂಡು ಬಂದದ್ದು ಸುಳ್ಳಲ್ಲ. ಆದರೆ ಆಕೆಗೆ ಅರಿಯದಂತೆ ಒಂದು ವಿಸ್ಮಯ ನಡೆದಿದೆ. ಬಾಲಿವುಡ್ ನಲ್ಲಿ ಹೀರೋಯಿನ್ ಗಳಿಗೂ ಸದಾ ಒಂದು ಒಳ್ಳೆ ಟೈಮ್ ಇದ್ದೆ ಇರುತ್ತದೆ ಎನ್ನುವುದು ಸುಳ್ಳಲ್ಲ. ಅದೀಗ ಮತ್ತೆ ಸಾಬೀತಾಗಿದೆ ಎಂದೇ ಹೇಳ ಬಹುದು. ತನಗಿಂತಹತ್ತು ವರ್ಷಗಳಷ್ಟು ಕಿರಿಯ ಯುವ ಚಾರ್ಮಿಂಗ್ ಹೀರೋ ಶಾಹಿದ್ ಕಪೂರ್ ಜೊತೆಗೆ ನಟಿಸುವ ಅವಕಾಶ ದೊರಕಿದೆ ತಬುಗೆ. ಆ ಜೋಡಿಯನ್ನು ತೆರೆಯ ಮೇಲೆ ತರಬೇಕು ಎನ್ನುವ ನಿರ್ದೇಶಕರ ಉದ್ದೇಶದ ಬಗ್ಗೆ ಸಾಕಷ್ಟು ಆಶ್ಚರ್ಯ ಉಂಟಾಗಿದೆ ಬಾಲಿವುಡ್ ಮಂದಿಗೆ.
ಕಂಗನಾ ರನೌಟ್ ಕ್ವೀನ್ ಚಿತ್ರ ನಿರ್ದೇಶಿಸಿದ್ದ ವಿಕಾಸ್ ಭಾಲ್ ಗೆ ಇಂತಹದ್ದೊಂದು ಯೋಚನೆ ಬಂದಿದೆ.ಈ ಸಿನಿಮಾವನ್ನು ಅವರೇ ನಿರ್ಮಿಸುತ್ತಿದ್ದಾರೆ ರಿಟರ್ನ್ ಗಿಫ್ಟ್ ಅನ್ನುವ ಟೈಟಲ್ ಹೊಂದಿರುವ ಈ ಚಿತ್ರ ಕಥೆಯ ಬಗ್ಗೆ ಸದ್ಯಕ್ಕೆ ಯಾರಿಗೂ ಹೇಳಿಲ್ಲ ವಿಕಾಸ್. ಆ ಸರ್ಪ್ರೈಸ್ ಏನೆಂಬುದನ್ನು ತೆರೆಯ ಮೇಲೆ ನೋಡಿ ಅನ್ನುವ ಮಾತು ವಿಕಾಸ್ ಅವರಿಂದ. ಇದರ ಮಧ್ಯೆ ಇತ್ತೀಚೆಗೆ ತಬು ಗೆ ಪ್ರಿಯಾಂಕ ಚೋಪ್ರ ಅವರ ತಾಯಿಯಾಗಿ ನಟಿಸಿ ಎನ್ನುವ ಆಫರ್ ಬಂದಿತ್ತು. ಅದನ್ನು ಆಕೆ ತಿರಸ್ಕರಿಸಿದ್ದಲ್ಲದೆ ಸಾಕಷ್ಟು ಕೋಪ ಮಾಡಿಕೊಂಡು ಕೂಗಾಡಿದ್ದರು. ಆದರೆ ಈಗ ತನಗಿಂತ ಅತಿ ಕಿರಿಯ ಹೀರೋ ಚಿತ್ರದಲ್ಲಿ ನಟಿಸುವ ಅವಕಾಶ ದೊರೆತ ಕಾರಣ ಓಕೆ ಅಂದು ತಾನಿನ್ನು ಚಿಕ್ಕವಳು ಎನ್ನುವುದನ್ನು ಜಗತ್ತಿಗೆ ತೋರಲು ಹೊರಟಿದ್ದಾರೆ ತಬು.