Article Bollywood Gossips %e0%b2%a4%e0%b2%aa%e0%b3%8d%e0%b2%aa%e0%b2%bf%e0%b2%a6 %e0%b2%b6%e0%b2%be%e0%b2%b9%e0%b3%80%e0%b2%a6%e0%b3%8d %e0%b2%b8%e0%b3%88%e0%b2%ab%e0%b3%8d %e0%b2%b2%e0%b2%bf%e0%b2%96%e0%b2%be%e0%b2%a8%e0%b3%8d %e0%b2%9c%e0%b2%9f%e0%b2%be%e0%b2%aa%e0%b2%9f%e0%b2%bf 113070500016_1.htm

Daily Horoscope

Select Your Language

Notifications

webdunia
webdunia
webdunia
webdunia

ತಪ್ಪಿದ ಶಾಹೀದ್ ಸೈಫ್ ಲಿಖಾನ್ ಜಟಾಪಟಿ

ಶಾಹೀದ್
PR
ಶಾಹೀದ್ ಕಪೂರ್ ಮತ್ತು ಸೈಫ್ ಆಲಿಖಾನ್ ನಡುವಿನ ಜಟಾಪಟಿಗೆ ಕೊನೆಗೂ ತೆರೆ ಬಿದ್ದಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಶಾಹೀದ್ ಅಭಿನಯದ ರಾಂಬೋ ರಾಜಕುಮಾರ ಮತ್ತು ಸೈಫ್ ಅಭಿನಯದ ಬುಲೆಟ್ ರಾಜಾ ಚಿತ್ರಗಳು ಒಂದೇ ದಿನ ತೆರೆ ಕಾಣಬೇಕಾಗಿತ್ತು. ಆದರೆ ಬುಲೆಟ್ ರಾಜಾ ಚಿತ್ರದ ಪ್ರಚಾರವನ್ನು ಇನ್ನಷ್ಟು ಚೆನ್ನಾಗಿ ಮಾಡಬೇಕೆಂದು ನಿರ್ಮಾಪಕರು ಚಿತ್ರ ಬಿಡುಗಡೆಗೆ ಇನ್ನೆರಡು ತಿಂಗಳು ಮುಂದೆ ಹೋಗಲು ನಿರ್ಧರಿಸಿದ್ದಾರೆ.

ಹೀಗಾಗಿ ಇವರಿಬ್ಬರ ಚಿತ್ರಗಳು ಎರಡು ತಿಂಗಳ ಅಂತರದಲ್ಲಿ ತೆರೆ ಕಾಣಲಿವೆ. ಇದು ಅವರಿಬ್ಬರ ಮಧ್ಯದ ಜಟಾಪಟಿಯನ್ನು ಕಡಿಮೆ ಮಾಡಿದೆ. ರ್ಯಾಂಬೋ ರಾಜಕುಮಾರ ಚಿತ್ರವನ್ನು ಪ್ರಭುದೇವಾ ನಿದರ್ೇಶನ ಮಾಡಿದ್ದಾರೆ. ಇದರಲ್ಲಿ ಮೊದಲ ಬಾರಿಗೆ ಶಾಹೀದ್ ಮತ್ತು ಸೋನಾಕ್ಷಿ ಸಿನ್ಹ ಜೊತೆಯಾಗಿ ನಟಿಸಿದ್ದಾರೆ. ಬುಲೆಟ್ ರಾಜಾದಲ್ಲೂ ಸೋನಾಕ್ಷಿ ನಾಯಕಿ. ಇಲ್ಲಿವರೆಗೆ ರಿಮೇಕ್ ಚಿತ್ರಗಳನ್ನೇ ಮಾಡುತ್ತಿದ್ದ ಪ್ರಭುದೇವಾ ಅವರಿಗೆ ಇದು ಮೊದಲ ಸ್ವಂತ ಕಥೆಯ ಚಿತ್ರ. ಈವೆರೆಗೆ ಅವರು ಬಾಲಿವುಡ್ನಲ್ಲಿ ತಯಾರಿಸಿದ ಎಲ್ಲಾ ಚಿತ್ರಗಳೂ ರಿಮೇಕ್. ಸಹಜವಾಗಿಯೇ ಇದು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಇದರಲ್ಲಿ ಗೆದ್ದರೆ ಅವರ ನಿದರ್ೇಶನದಲ್ಲಿ ಗಟ್ಟಿತನ ಇದೆ ಎಂಬುದು ಸಾಬೀತಾಗಲಿದೆ. ಇಲ್ಲವಾದಲ್ಲಿ ಅವರನ್ನು ಕೇವಲ ರಿಮೇಕ್ ರಾಜಾ ಎಂದೇ ಕರೆಯಬೇಕಾದೀತು.

Share this Story:

Follow Webdunia kannada