ತನುಶ್ರೀ ದತ್ತಾ: ಏನಮ್ಮಾ ಇದು ಹೊಸ ಅವತಾರ?
Publish Date: Mon, 08 Jul 2013 (16:02 IST)
Updated Date: Mon, 08 Jul 2013 (16:01 IST)
ವಿಭಿನ್ನವಾದದ್ದೇನಾದರೂ ಮಾಡಬೇಕು ಎಂಬ ಬಯಕೆ ಈ ಪರಿ ಇರಲು ಸಾಧ್ಯವೇ? ಬಾಲಿವುಡ್ನ ನಟಿ ತನುಶ್ರೀ ದತ್ತಾ ಕಥೆ ಕೇಳಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ. ಅಂತದ್ದೇನಿದೆ ಎಂಬ ಕುತೂಹಲವೇ? ಹಾಗಿದ್ದರೆ ಇಲ್ಲಿ ಓದಿ.ಆಶಿಕ್ ಬನಾಯಾ ಆಪ್ನೇ ಚಿತ್ರದ ಮೂಲಕ ಪಡ್ಡೆ ಹುಡುಗರಿಗೂ ಪರಿಚಿತರಾದ ತನುಶ್ರೀಗೆ ಅದೇಕೋ ಏನೋ ತಲೆಕೂದಲೆಲ್ಲಾ ತೆಗೆಸಿ ಬಾಲ್ಡ್ ಆಗಬೇಕೆಂಬ ಬಯಕೆ ಕಾಡಿದೆ. ಅದರಂತೆ ಹೇರ್ ಸ್ಟೈಲಿಶ್ ಬಳಿ ಹೋಗಿ ಶೇವ್ ಮೈ ಹೆಡ್ ಎಂದಿದ್ದಾರೆ. ಆಕೆಗೆ ಏನನಿಸಿತೋ, ಸೊಂಪಾಗಿ ಬೆಳೆದ ತಲೆಕೂದಲನ್ನು ಸಂಪೂರ್ಣ ತೆಗೆಯಲು ಆಕೆಗೂ ಮನಸ್ಸಾಗಲಿಲ್ಲವೇನೋ. ಆಗಲ್ಲ ಎಂದುಬಿಟ್ಟಿದ್ದಾಳೆ. ಅದಕ್ಕಾಗಿ ತನು ಸ್ವಲ್ಪ ಸ್ವಲ್ಪವೇ ಕೂದಲನ್ನು ತುಂಡರಿಸಿ ಬಾಯ್ ಕಟ್ ಮಾಡಿಸಿದ್ದಾಳೆ. ಒಂದಿಂಚು ಉದ್ದವಿದ್ದ ಕೂದಲನ್ನು ಪೂರ್ತಿ ತೆಗೆಸಿ ಒಂದೆರಡು ತಿಂಗಳು ದೇಶಸುತ್ತಲು ಹೊರಟಿದ್ದಾಳೆ. ಒಂದೆರಡು ಬೌದ್ಧ ಕೇಂದ್ರಗಳಲ್ಲಿ, ಆಶ್ರಮದಲ್ಲಿ ದಿನ ಕಳೆದಿದ್ದಾಳೆ.ಸನ್ಯಾಸಿಯಾಗಬೇಕೆಂದು ಯಾವತ್ತೂ ಅಂದುಕೊಂಡಿರಲಿಲ್ಲ. ಆದರೆ ಅದು ನನಗೆ ನೀಡಿದ ಅನುಭವ ವಿಭಿನ್ನವಾಗಿತ್ತು. ಕೂದಲು ತೆಗೆಸಿದ ಒಂದು ವಾರದ ನಂತರ ಲಡಾಕ್ನತ್ತ ಬಸ್ನಲ್ಲಿ ಪ್ರಯಾಣ ಬೆಳೆಸಿದಾಗ ಯಾರೊಬ್ಬರೂ ನನ್ನ ಗುರುತು ಹಿಡಿಯಲಿಲ್ಲ. ಒಂದಿಬ್ಬರು ಈಕೆ ತನುಶ್ರೀ ರೀತಿಯಲ್ಲೇ ಇದ್ದಾಳಲ್ಲ ಎಂದು ಸುಮ್ಮನಾದರು ಅಷ್ಟೇ ಎನ್ನುತ್ತಾರೆ ತನುಶ್ರೀ.ಈಗ ಮತ್ತೆ ಹೊಸ ಸ್ಕ್ರಿಪ್ಟ್ ನೋಡುತ್ತಿದ್ದೇನೆ. ಸ್ಟೇಜ್ ಶೋ ಮಾಡುತ್ತಿದ್ದೇನೆ. ಕೂದಲು ಮತ್ತೆ ಬೆಳೆಯುತ್ತಿದೆ. ನನ್ನನ್ನು ನಾನು ಈಗ ತುಂಬಾ ಚೆನ್ನಾಗಿ ಅರ್ಥೈಸಿಕೊಂಡಿದ್ದೇನೆ ಎನ್ನುತ್ತಾರೆ ತನುಶ್ರೀ ದತ್ತಾ.