Article Bollywood Gossips %e0%b2%a4%e0%b2%a8%e0%b3%81%e0%b2%9c%e0%b2%be %e0%b2%b9%e0%b3%81%e0%b2%9f%e0%b3%8d%e0%b2%9f%e0%b2%be %e0%b2%95%e0%b2%b2%e0%b2%be%e0%b2%b5%e0%b2%bf%e0%b2%a6%e0%b3%86 %e0%b2%85%e0%b2%a8%e0%b3%81%e0%b2%aa%e0%b2%ae%e0%b3%8d %e0%b2%96%e0%b3%87%e0%b2%b0%e0%b3%8d 108010300007_1.htm

Daily Horoscope

Select Your Language

Notifications

webdunia
webdunia
webdunia
webdunia

ತನುಜಾ ಹುಟ್ಟಾ ಕಲಾವಿದೆ:ಅನುಪಮ್ ಖೇರ್

ತನುಜಾ ಹುಟ್ಟಾ ಕಲಾವಿದೆ:ಅನುಪಮ್ ಖೇರ್
ಅಜ್ಜ ಮತ್ತು ಮೊಮ್ಮಗಳ ನಡುವಿನ ಮಮತೆಯ ಸಂಬಂಧದ ಕುರಿತಾದ ಹೊಸ ಆಕರ್ಷಕ ಚಿತ್ರ'ಹವಾಯ್ ದಾದಾ' ಚಿತ್ರೀಕರಣವನ್ನು ಅನುಪಮ್ ಖೇರ್ ನಡೆಸುತ್ತಿದ್ದು,ಪ್ರಸಿದ್ಧ ನಟಿ ತನುಜಾ ಅನುಪಮ್ ಅವರ ಪತ್ನಿಯಾಗಿ ನಟಿಸುತ್ತಿರುವುದು ಈ ಚಿತ್ರದಲ್ಲಿ ವಿಶೇಷತೆಯನ್ನು ಮೂಡಿಸಿದೆ.

ತನುಜಾ ಎಂದಿಗೂ ಎಲ್ಲರ ಪ್ರೀತಿಪಾತ್ರರು. ಅವರು ಹುಟ್ಟಾ ಕಲಾವಿದೆಯಾಗಿದ್ದಾರೆ. 'ಹವಾಯ್ ದಾದಾ' ಚಿತ್ರದಲ್ಲಿ ತನುಜಾ ಅವರೊಂದಿಗೆ ನಟಿಸುತ್ತಿರುವುದು ಅತ್ಯಂತ ಹರ್ಷವನ್ನು ಉಂಟುಮಾಡಿದೆ ಎಂದು ಅನುಪಮ್ ಅವರು ಸುದ್ದಿಗಾರರೊಂದಿಗೆ ಹೇಳಿದ್ದಾರೆ.

ದಸ್ ಕಹಾನಿಯಾ, ಲಾಗಾ ಚುನಾರಿ ಮೈನ್ ದಾಗ್ , ಅಪ್ನಾ ಅಸ್ಮಾನ್ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಅನುಪಮ್ , ತನುಜಾ ಸಮಸ್ಯಾರಹಿತ ನಟಿಯಾಗಿದ್ದು, ತಂಡದಲ್ಲಿ ಎಲ್ಲರನ್ನೂ ಮನರಂಜಿಸುತ್ತಾರೆ ಎಂದು ಹೇಳುತ್ತಾರೆ.

ಹವಾಯ್ ದಾದಾ ಚಿತ್ರವನ್ನು ಅಜಯ್ ಕಾರ್ತಿಕ್ ನಿರ್ದೇಶಿಸುತ್ತಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ.

ಎಲ್ಲಾ ಸಮಯದಲ್ಲೂ ನಾನು ಹೊಸ ಮತ್ತು ಪ್ರತಿಭಾವಂತ ನಿರ್ದೇಶಕರೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇನೆ. ವಾಸ್ತವವಾಗಿ ಈ ವರ್ಷದ ನನ್ನ ಉತ್ತಮ ಚಿತ್ರ 'ವೆಡ್ನಸ್‌ಡೇ' ಕೂಡಾ ನೀರಜ್ ಪ್ಯಾಂಡಿ ಅವರ ಮೊದಲ ನಿರ್ದೇಶನದ ಚಿತ್ರವಾಗಿದ್ದು, ಹವಾಯ್ ದಾದಾ ಇನ್ನೊಂದು ಅನುಭವವಾಗಿದೆ ಎಂದು ಅನುಪಮ್ ಹೇಳಿದರು.

Share this Story:

Follow Webdunia kannada