Article Bollywood Gossips %e0%b2%a4%e0%b2%82%e0%b2%a1%e0%b2%a6%e0%b3%8a%e0%b2%82%e0%b2%a6%e0%b2%bf%e0%b2%97%e0%b3%86 %e0%b2%b8%e0%b2%82%e0%b2%ad%e0%b3%8d%e0%b2%b0%e0%b2%ae%e0%b2%be%e0%b2%9a%e0%b2%b0%e0%b2%bf%e0%b2%b8%e0%b2%bf%e0%b2%95%e0%b3%8a%e0%b2%82%e0%b2%a1 %e0%b2%85%e0%b2%ae%e0%b3%80%e0%b2%b0%e0%b3%8d 109010300010_1.htm

Daily Horoscope

Select Your Language

Notifications

webdunia
webdunia
webdunia
webdunia

ತಂಡದೊಂದಿಗೆ ಸಂಭ್ರಮಾಚರಿಸಿಕೊಂಡ ಅಮೀರ್

ಅಮೀರ್ ಖಾನ್
IFM
ಅಮೀರ್ ಖಾನ್ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಗಜನಿಯನ್ನು ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ ಆಗಿಸಲು ಅಮೀರ್ ಬಹಳಷ್ಟು ಪರಿಶ್ರಮ ಪಟ್ಟಿದ್ದರು ಮತ್ತು ಅವರು ಬಯಸಿದ್ದನ್ನು ಅವರು ಕೊನೆಗೂ ಪಡೆದಿದ್ದಾರೆ. ಡಿಸೆಂಬರ್ 25ರಂದು ಚಿತ್ರ ಸಿನಿಮಾಮಂದಿರಗಳನ್ನು ತಲುಪುತ್ತಿದ್ದಂತಯೇ ಅಮೀರ್‌ಗೆ ಯಶಸ್ಸಿನ ರುಚಿ ಸಿಕ್ಕಿದೆ. ಬಿಡುಗಡೆಯಾದ ಒಂದು ವಾರದಲ್ಲೇ ಚಿತ್ರದ ಗಳಿಕೆ 100ಕೋಟಿ ಮುಟ್ಟಿದೆ. ಈ ಯಶಸ್ಸಿನ ಸಂಭ್ರಮವನ್ನು ಆಚರಿಸಿಕೊಳ್ಳಲು ಗಜನಿ ಪೂರ್ಣ ಚಿತ್ರತಂಡ ಪಾರ್ಟಿಯೊಂದನ್ನು ಅಚರಿಸಿತು. ಈ ಸಂದರ್ಭ ನಿರ್ದೇಶಕ ಎಆರ್ ಮುರುಗದಾಸ್, ಆಸಿನ್ ಮತ್ತು ಜಿಹಾ ಖಾನ್ ಇತರರೊಂದಿಗೆ ಉಪಸ್ಥಿತರಿದ್ದರು.

ಬಾಲಿವುಡ್‌ನಲ್ಲಿ ನೂರು ಕೋಟಿ ಗಳಿಕೆಯ ಗುರಿ ಮುಟ್ಟಿದ ಪ್ರಥಮ ಚಿತ್ರ ಗಜನಿ. ಅಮೀರ್ ಕೇಕ್ ಕತ್ತರಿಸಿ ನಟಿಯರಿಗೆ ಮತ್ತು ಇತರರಿಗೆ ನೀಡಿದರು. ಅವರು ಯಶಸ್ಸಿನ ಶ್ರೇಯವನ್ನು ನಿರ್ದೇಶಕ ಎಅರ್ ಮುರುಗದಾಸ್ ಅವರಿಗೆ ನೀಡಿದರು ಮತ್ತು ತಂಡದ ಪರಿಶ್ರಮವನ್ನು ಶ್ಲಾಘಿಸಿದರು. ಆಸಿನ್ ಮತ್ತು ಜಿಹಾ ಇಬ್ಬರೂ ಉತ್ತಮ ಮೂಡ್‌ನಲ್ಲಿ ಕಂಡುಬಂದರು. ಅವರಿಬ್ಬರ ನಡುವೆ ಅಸಮಾಧಾನಗಳಿವೆ ಎಂದು ವರದಿಯಾಗಿತ್ತು ಆದರೆ ಅವರಿಬ್ಬರು ಪರಸ್ಪರರೊಡನೆ ಚೆನ್ನಾಗಿ ಹೊಂದಿಕೊಂಡಿದ್ದರು ಮತ್ತು ಆನಂದಿಸಿದರು.

ಚಿತ್ರದಲ್ಲಿ ಅಮೀರ್ ನಟನೆ, ಎಂಟು ಪ್ಯಾಕ್ ದೇಹಧಾರ್ಡ್ಯ, ಸ್ಟಂಟ್‌ಗಳು, ರೊಮಾನ್ಸ್, ದ್ವೇಷ, ಪ್ರತಿಕಾರದ ಕಾನ್ಸೆಪ್ಟ್, ನಿರ್ದೇಶನ, ಸ್ಕ್ರೀನ್ ಪ್ಲೆ ಇತ್ಯಾದಿಗಳು ಬಹಳ ಪ್ರಶಂಸಿಲ್ಪಟ್ಟಿವೆ.



Share this Story:

Follow Webdunia kannada