ಡ್ಯೂಪ್ ಇಲ್ಲದೆ ನಾನೇ ಫೈಟಿಂಗ್ ಮಾಡಿದೆ- ಮಾಧುರಿ ದೀಕ್ಷಿತ್ !
, ಶನಿವಾರ, 8 ಫೆಬ್ರವರಿ 2014 (10:00 IST)
ಕಾಲವು ಎಲ್ಲವನ್ನು ಬದಲಾವಣೆ ಮಾಡುತ್ತದೆ. ಒಂದೊಮ್ಮೆ ಅವರಿಬ್ಬರೂ ತಮ್ಮ ವೃತ್ತಿಯಿಂದ ಬದ್ಧ ವೈರಿಗಳಾಗಿದ್ದರು . ಆದರೆ ಈಗ ಒಟ್ಟಿಗೆ ನಟಿಸುತ್ತಿದ್ದಾರೆ ಗುಲಾಬ್ ಗ್ಯಾಂಗ್ ಚಿತ್ರದಲ್ಲಿ . ಅಂದರೆ ಒಂದೇ ಚಿತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಈಗ ಇವರಿಬ್ಬರು ಅತ್ಯುತ್ತಮ ಗೆಳತಿಯರಾಗಿದ್ದಾರೆ. ಅವರೇ ಮಾಧುರಿ ದೀಕ್ಷಿತ್ ಮತ್ತು ಜೂಹಿ ಚಾವ್ಲ !ಮಧ್ಯವಯಸ್ಸಿನ ಈ ಹೆಣ್ಣುಮಕ್ಕಳು ತನ್ನ ತಾರ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಒಟ್ಟಿಗೆ ಇವರಿಬ್ಬರು ನಟಿಸುತ್ತಿರುವುದು ಸಹ ವಿಶೇಷ ಸಂಗತಿ ಆಗಿದೆ. ಅಷ್ಟೇ ಅಲ್ಲದೆ ಅತ್ಯಂತ ಉತ್ಸಾಹದಿಂದ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದನ್ನು ಖುದ್ದು ಮಾಧುರಿ ದೀಕ್ಷಿತ್ ಹೇಳಿದ್ದಾರೆ. ಹೊಸದಾಗಿ ಸಿದ್ಧ ಆಗುತ್ತಿರುವ ಗುಲಾಬಿ ಗ್ಯಾಂಗ್ ಚಿತ್ರದಲ್ಲಿ ಇವರಿಬ್ಬರು ಒಟ್ಟಾಗಿ ನಟಿಸುತ್ತಿದ್ದಾರೆ. ಅಲ್ಲಿ ನಡೆಯುವ ಅನುಭವವನ್ನು ತಾವಿಬ್ಬರು ಹಂಚಿಕೊಳ್ಳು ತ್ತಿರುವುದಾಗಿ ಮಾಧುರಿ ತಿಳಿಸಿದ್ದಾರೆ.