Article Bollywood Gossips %e0%b2%a1%e0%b3%86%e0%b2%b2%e0%b3%8d%e0%b2%b2%e0%b2%bf 6%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%b8%e0%b3%8b%e0%b2%a8%e0%b2%82 %e0%b2%95%e0%b2%aa%e0%b3%82%e0%b2%b0%e0%b3%8d 107111400011_1.htm

Select Your Language

Notifications

webdunia
webdunia
webdunia
webdunia

ಡೆಲ್ಲಿ 6ನಲ್ಲಿ ಸೋನಂ ಕಪೂರ್

ಡೆಲ್ಲಿ
ಸಂಜಯ್ ಲೀಲಾ ಬನ್ಸಾಲಿ ಅವರ ಸಾವರಿಯ ಚಿತ್ರದ ಮೂಲಕ ಬಾಲಿವುಡ್ ಗ್ಲಾಮರಸ್ ವೃತ್ತಿಗೆ ಪ್ರೇವೇಶ ಮಾಡಿದ್ದ ಸೋನಂ ಕಪೂರ್, ರಂಗದೇ ಬಸಂತಿ ಖ್ಯಾತಿಯ ರಾಕೇಶ್ ಮೆಹ್ರಾ ಅವರ ಡೆಲ್ಲಿ 6 ನಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ತನ್ನ ಮೊದಲ ಚಿತ್ರ ಸಾವರಿಯಾ ಬಿಡುಗಡೆಗೊಳ್ಳುವ ಮೊದಲೇ ಸೋನಂ ಡೆಲ್ಲಿ 6 ಚಿತ್ರದಲ್ಲಿ ಅವಕಾಶವನ್ನು ಪಡೆದಿದ್ದಾರೆ. ಅನಿಲ್ ಕಪೂರ್ ಮತ್ತು ಸೋನಂ ಜೊತೆಯಾಗಿ ಚಿತ್ರದ ಕಥೆಯನ್ನು ಕೇಳಿ ನಂತರ ಒಪ್ಪಿಗೆ ಸೂಚಿಸಿದ್ದರು. ಈ ಚಿತ್ರದಲ್ಲಿ ಸೋನಂ ಅವರು ಅಭಿಷೇಕ್ ಬಚ್ಚನ್‌ನ ಅಭಿಮುಖ ಜೋಡಿಯಾಗಿ ಅಭಿನಯಿಸಲಿದ್ದಾರೆ. ಇಷ್ಟರವರೆಗೆ ಡೆಲ್ಲಿ 6 ಚಿತ್ರವು ಸುಮಾರು ಏಳು ನಾಯಕರನ್ನು ಬದಲಿಸುತ್ತಾ ಬಂದಿದೆ. ಅಲ್ಲದೆ ಈ ವಾರ ಎರಡು ಕಲಾವಿದರು ಅಧಿಕೃತವಾಗಿ ಸಹಿ ಹಾಕಿದ್ದಾರೆ.

ಯುಟಿವಿ ಮತ್ತು ರಾಕೇಶ್ ಓಪ್ರಕಾಶ್ ಮೆಹ್ರಾ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಚಿತ್ರದ ಮೊದಲನೇ ಹಂತವು ಮುಂದಿನ ತಿಂಗಳು ಪ್ರಾರಂಭವಾಗಲಿದೆ.

Share this Story:

Follow Webdunia kannada