Article Bollywood Gossips %e0%b2%a1%e0%b2%bf%e0%b2%b8%e0%b3%86%e0%b2%82%e0%b2%ac%e0%b2%b0%e0%b3%8d 24%e0%b2%95%e0%b3%8d%e0%b2%95%e0%b3%86 %e0%b2%97%e0%b2%9c%e0%b2%a8%e0%b2%bf %e0%b2%ac%e0%b2%bf%e0%b2%a1%e0%b3%81%e0%b2%97%e0%b2%a1%e0%b3%86 108121100023_1.htm

Daily Horoscope

Select Your Language

Notifications

webdunia
webdunia
webdunia
webdunia

ಡಿಸೆಂಬರ್ 24ಕ್ಕೆ 'ಗಜನಿ' ಬಿಡುಗಡೆ

ಅಮೀರ್ ಖಾನ್
IFM
ಈ ಹಿಂದಿನ ದಿನಗಳಲ್ಲಿ, ಮುಂಬಯಿ ಮೇಲೆ ಉಗ್ರರ ದಾಳಿ ಕಾರಣದಿಂದ ಫರ್‌ಫೆಕ್ಷನಿಸ್ಟ್ ಅಮೀರ್ ಖಾನ್ ನಟಿಸಿರುವ 'ಗಜನಿ' 2009ರಲ್ಲಿ ತೆರೆಕಾಣಲಿದೆ ಎಂಬ ವದಂತಿಗಳಿದ್ದವು, ಆದರೆ ಇವುಗಳು ಕೇವಲ ವದಂತಿಗಳಷ್ಟೇ ಹೊರತು ನಿಜವಲ್ಲ ಎಂಬುದು ದೃಢವಾಗಿದೆ.

ಈ ವದಂತಿಗಳಿಗೆ ವಿರುದ್ಧವಾಗಿ ನಿರ್ಮಾಪಕರು 'ಗಜನಿ' ಚಿತ್ರವನ್ನು ಡಿಸೆಂಬರ್ 25ರ ಹೊರತು ಒಂದು ದಿನ ಮುಂಚಿತವಾಗಿ ಡಿಸೆಂಬರ್ 24ರ ರಾತ್ರಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

'ಗಜನಿ' ಚಿತ್ರದ ಬಗೆಗಿರುವ ಕ್ರೇಜ್‌ನ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. "ಗಜನಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ ಆದರೆ ನಾವು ಡಿಸೆಂಬರ್ 24ರಂದೇ ಜನರಿಗೆ ಗಜನಿ ವೀಕ್ಷಿಸುವ ಅವಕಾಶ ಕಲ್ಪಿಸಿ ಕೊಡುತ್ತಿದ್ದೇವೆ" ಎನ್ನುತ್ತಾರೆ 'ಗಜನಿ' ನಿರ್ಮಾಪಕ ಮಧು.

ಡಿಸೆಂಬರ್ 25ರಂದು ಬಾಲಿವುಡ್ ಇನ್ನೊರ್ವ ಸ್ಟಾರ್ ನಟ ಅಕ್ಷಯ್ ಕುಮಾರ್‌ರ 'ಜಂಬೊ' ಎಂಬ ಅನಿಮೇಶನ್ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಅಕ್ಷಯ್ ಕುಮಾರ್, ಡಿಂಪಲ್ ಕಪಾಡಿಯಾ ಮತ್ತು ಲಾರ ದತ್ತಾ ತಮ್ಮ ಧ್ವನಿ ನೀಡಿದ್ದಾರೆ. ಒಂದು ರೀತಿಯಲ್ಲಿ, ಅಕ್ಷಯ್ ಮತ್ತು ಅಮೀರ್ ನಡುವೆ ಸಮರ ನಡೆಯಲಿದೆ.

ಕಾಕತಾಳೀಯವಾಗಿ ಕಳೆದ ಕ್ರಿಸ್‌ಮಸ್ ವೇಳೆಗೂ ಅಮೀರ್‌ರ 'ತಾರೆ ಜಮೀನ್ ಪರ್' ಮತ್ತು ಅಕ್ಷಯ್‌ರ 'ವೆಲ್‌ಕಂ' ಚಿತ್ರಗಳು ಒಟ್ಟಿಗೆ ತೆರೆಕಂಡು ಪ್ರತಿಸ್ಪರ್ಧೆಗಿಳಿದಿದ್ದವು ಆದರೆ ಎರಡೂ ಚಿತ್ರಗಳು ಗೆದ್ದಿದ್ದವು. ಈ ಬಾರಿ ಮತ್ತೆ ಇತಿಹಾಸ ಪುನಾರಾವರ್ತನೆ ಆಗಲಿ ಎಂಬುದು ಬಾಲಿವುಡ್ ಆಶಯವಾಗಿದೆ.

Share this Story:

Follow Webdunia kannada