Publish Date: Sat, 28 Jul 2007 (13:07 IST)
Updated Date: Sat, 28 Jul 2007 (13:07 IST)
ರಾಮ್ ಗೋಪಾಲ್ ವರ್ಮ ಅವರ ಡಾರ್ಲಿಂಗ್ ಸಿನೆಮಾದಲ್ಲಿ ಬಾಲಿವುಡ್‌ನ ಕೆಣಕುಸೌಂದರ್ಯದ ಬೆಡಗಿ ನಿಶಾ ಕೋಟಾರಿ ಕಾಣಿಸಿಕೊಳ್ಳಲಿದ್ದಾರೆ.
ನಿಶಾ ಅವರು ಮುಖ್ಯಪಾತ್ರದಲ್ಲಿಲ್ಲ. ಚಿತ್ರದ ಪ್ರಚಾರಹಾಡುಗಳಲ್ಲಿ ಆಕರ್ಷಕ ದೃಶ್ಯಸಂಯೋಜನೆಯೊಂದಿಗೆ ಕಾಣಿಸಿಕೊಳ್ಳಲು ನಿಶಾಗೆ ವರ್ಮ ಅವಕಾಶ ನೀಡಿದ್ದಾರೆ. ಅವರಿಗೆ ನಿಶಾ ಮೇಲಿನ ವಿಶೇಷ ಕಾಳಜಿ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಡಾರ್ಲಿಂಗ್ ಚಿತ್ರದ ತಾರಾಗಣದಲ್ಲಿ ಫರ್ದೀನ್ ಖಾನ್, ಇಷಾಡಿಯೋಲ್, ಇಷಾ ಕೊಪ್ಪಿಕರ್ ಮುಂತಾದವರಿದ್ದಾರೆ. ನಿಶಾ ಅವರು ಇವರೆಲ್ಲರಂತೆ ಅಚಾನಕ್ ಹೊಸ ಸೇರ್ಪಡೆಯಾಗಿದ್ದಾರೆ.
ಪ್ರಸ್ತುತ ಸಿನಿಮಾ ಚಿತ್ರೀಕರಣ ಮೂರು ದಿನಗಳ ಕಾಲ ಜರುಗಲಿದೆ. ವರ್ಮಾ ಅವರು ನನ್ನಲಿ ಕೇಳಿದರು ನಾನು ಒಪ್ಪಿಗೆ ನೀಡಿದೆ ಅನ್ನುತ್ತಾರೆ ನಿಶಾ. ನಾನು ನನ್ನ ಮನವೊಪ್ಪದ ಯಾವುದೇ ದೃಶ್ಯಗಳಲ್ಲಿ ಪಾಲ್ಗೊಳ್ಳಲಾರೆ ಎಂಬುದು ಕೂಡ ನಿಶಾ ಮಾತು. ಆದರೆ ಒಪ್ಪಿಗೆಯಾಗದ ದೃಶ್ಯ ಹೇಗಿರಬೇಕೆಂದು ಹೇಳಿಲ್ಲ.