Article Bollywood Gossips %e0%b2%a1%e0%b2%be%e0%b2%b0%e0%b3%8d%e0%b2%b2%e0%b2%bf%e0%b2%82%e0%b2%97%e0%b3%8d %e0%b2%b9%e0%b3%80%e0%b2%b0%e0%b3%8a %e0%b2%b9%e0%b3%83%e0%b2%a4%e0%b2%bf%e0%b2%95%e0%b3%8d 107091200032_1.htm

Select Your Language

Notifications

webdunia
webdunia
webdunia
webdunia

ಡಾರ್ಲಿಂಗ್ ಹೀರೊ ಹೃತಿಕ್

ಮಂಡಿಗೆ ಗಾಯ
IFMIFM
ಹೃತಿಕ್ ರೋಷನ್‌ ಜೋಧಾ ಅಕ್ಬರ್‌ ಚಿತ್ರದಲ್ಲಿ ಯುದ್ಧದ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾಗ ಮಂಡಿಗೆ ಗಾಯವಾಗಿತ್ತು. ಹೃತಿಕ್ ‌ಮೂರು ತಿಂಗಳ ಬೆಡ್‌ರೆಸ್ಟ್‌ನಲ್ಲಿದ್ದಾರೆ ಎಂದು ಮಾಧ್ಯಮದ ಕೆಲವು ವರ್ಗಗಳು ಪುಕಾರು ಹುಟ್ಟಿಸಿವೆ.

ಹೃತಿಕ್ ಚೆನ್ನಾಗಿಯೇ ಇದ್ದು, ದಿನನಿತ್ಯದ ಕೆಲಸಗಳಲ್ಲಿ ತಲ್ಲೀನರಾಗಿದ್ದಾನೆ ಎನ್ನುವುದು ಹೃತಿಕ್ ತಂದೆ ರಾಕೇಶ್ ರೋಷನ್ ಅಂಬೋಣ. ಅವರ ಅಂತಾರಾಷ್ಟ್ರೀಯ ವಕ್ತಾರೆ ಅಸಲ್ ಮಾಸೊಮಿ ಹೃತಿಕ್‌ರ ಇಚ್ಛಾಶಕ್ತಿಯ ಬಗ್ಗೆ, ಕಲೆ, ಕೌಶಲ್ಯದ ಬದ್ಧತೆ ಬಗ್ಗೆ ಶ್ಲಾಘಿಸಿದ್ದಾರೆ.

ಹೃತಿಕ್ ಎಚ್ಚರವಾದ ಕ್ಷಣದಿಂದ ಯಾವುದೇ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸುವಲ್ಲಿ ತನ್ಮಯತೆ ತೋರಿಸುತ್ತಾರೆ. ಅಂತಹ ಶಿಸ್ತನ್ನು ನೋಡಿಯೇ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

"ದಿ ಗಾಡ್ ಡ್ಯಾನ್ಸ್" ಮತ್ತು "ದಿ ಮ್ಯೂವಿಂಗ್ ವರ್ಕ್ ಆಫ್ ಆರ್ಟ್ ಆಫ್ ಬಾಲಿವುಡ್" ಮುಂತಾದ ವಿಶೇಷಣಗಳಿಂದ ವರ್ಣಿತವಾಗಿ ಪಾಶ್ಚಿಮಾತ್ಯ ರಾಷ್ಟ್ರದಲ್ಲೀಗ ಹೃತಿಕ್ ಉಪಸ್ಥಿತಿಯನ್ನು ಪ್ರಕಟಿಸಿದ್ದಾನೆ. ಹೃತಿಕ್ ನೃತ್ಯ ಕೌಶಲ್ಯ ಮತ್ತು ದೇಹ ಚಲನೆಗಳು ವಿಶೇಷ ಮೆಚ್ಚುಗೆ ಗಳಿಸಿವೆ.

ಧೂಮ್ 2 ಚಿತ್ರದಲ್ಲಿ ನಯವಾಗಿ ಮಾತನಾಡುವ ಕಳ್ಳನ ಪಾತ್ರ ಮತ್ತು ಕೃಷ್‌ನಲ್ಲಿ ನೀರಿನ ಮೇಲೆ ತೇಲುವ ಸೂಪರ್ ಹೀರೊ ಪಾತ್ರ ಎರಡೂ 2006ರ ಬ್ಲಾಕ್‌ಬಸ್ಟರ್‌ಗಳಾಗಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳ ಡಾರ್ಲಿಂಗ್ ಎನಿಸಿದ್ದಾನೆ.

Share this Story:

Follow Webdunia kannada