Publish Date: Wed, 27 Jun 2007 (15:09 IST)
Updated Date: Wed, 27 Jun 2007 (15:09 IST)
ನ್ಯೂಯಾರ್ಕನ ಪ್ರಸಿದ್ದ ಟೈಮ್ಸ್ ಸ್ಕ್ವೆರ್‌ನಲ್ಲಿ ಮಹೇಶ್ಭಟ್ ನಿರ್ದೇಶನದ ಅವಾರಾಪನ್ ಚಿತ್ರದ ಅಂತಾರಾಷ್ಟ್ರೀಯ ಮಟ್ಟದ ಬಿಡುಗಡೆಯು ಈ ವಾರ ನಡೆಯಲಿದೆ.
ಕಿಸ್ಸಿಂಗ್ ಹೀರೊ ಇಮ್ರಾನ್ ಹಶ್ಮಿ ಅಭಿನಯದ ಚಿತ್ರ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಅವಾರಾಪನ್ ಚಿತ್ರ ವಿತರಕ, ಚಿತ್ರದ ಮಾರುಕಟ್ಟೆಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, ಸಾಧಾರಣವಾಗಿ ಭಾರತೀಯ ಮೂಲದ ಚಿತ್ರಗಳು ಉತ್ತರ ಅಮೆರಿಕ ಮತ್ತು ಕೆನಡಾಗಳಿಗೆ ಬಿಡುಗಡೆಯಾಗುವುದು ರೀಗಲ್ ಇ ವಾಕ್ ಸ್ಟೇಡಿಯಂನಲ್ಲಿ.
ಆದರೆ ಅವಾರಾಪನ್ ಮಾತ್ರ ಜಗತ್ ಪ್ರಸಿದ್ದ ಟೈಮ್ಸ್ ಸ್ಕ್ವೆರ್ ಸ್ಟೆಡಿಯಂನಲ್ಲಿ ಬಿಡುಗಡೆಯಾಗುತ್ತಿದೆ.