Article Bollywood Gossips %e0%b2%9f%e0%b3%88%e0%b2%82 %e0%b2%ae%e0%b3%86%e0%b2%b6%e0%b3%80%e0%b2%a8%e0%b3%8d%e2%80%8c%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%85%e0%b2%ad%e0%b2%bf %e0%b2%90%e0%b2%b6%e0%b3%8d 107072800006_1.htm

Select Your Language

Notifications

webdunia
webdunia
webdunia
webdunia

ಟೈಂ ಮೆಶೀನ್‌ನಲ್ಲಿ ಅಭಿ-ಐಶ್

ಬಾಲಿವುಡ್
ಬಾಲಿವುಡ್ ನಿರ್ದೇಶಕ ರಾಮ್‌ಗೋಪಾಲ್‌ವರ್ಮ ಅವರ ಬಹುಕಾಲದ ಕನಸೊಂದು ನನಸಾಗಲಿದೆ. 'ಟೈಂ ಮೆಶೀನ್' ಕುರಿತ ಸಿನೆಮಾ ನಿರ್ಮಿಸುವುದೇ ಆ ಕನಸು.

ಅದಕ್ಕೀಗ ಕಾಲಪಕ್ವವಾಗಿದೆ. ಟೈಂ ಮೆಶೀನ್ ಶೀಘ್ರವೇ ಚಿತ್ರೀಕರಣ ಆರಂಭವಾಗಲಿದೆ. ತಾರಾಗಣದ ಮುಖ್ಯಭೂಮಿಕೆಯಲ್ಲಿ ಅಭಿಷೇಕ್‌ ಬಚ್ಚನ್ ಹಾಗೂ ಐಶ್ವರ್ಯಾ ರೈ ಆಯ್ಕೆಯಾಗಿದ್ದಾರೆ.

ಇದೇ ವಿಷಯವನ್ನಾಧರಿಸಿ ಶೇಕರ್ ಕಪೂರ್ ಚಿತ್ರ ನಿರ್ಮಿಸಲು ಸಿದ್ಧರಾಗಿದ್ದರು, ಅದರಲ್ಲಿ ಅಮೀರ್‌ ಖಾನ್ ಹಾಗೂ ಡಿಂಪಲ್ ಕಪಾಡಿಯಾ ನಾಯಕ-ನಾಯಕಿಯಾರಾಗುವವರಿದ್ದರು. ಆದರೆ ಯೋಜನೆ ಯಸ್ವಿಯಾಗಲಿಲ್ಲ.

ಇದೀಗ ರಾಂಗೋಪಾಲ್ ವರ್ಮ ಆ ಸಿದ್ಧತೆಯಲ್ಲಿದ್ದಾರೆ. ಈ ಚಿತ್ರ ತಯಾರಿ ವರ್ಮಾ ಅವರ ವರ್ಷಗಳ ಕನಸಂತೆ. ಪ್ರಾರಂಭದಲ್ಲಿ ಶಾರೂಕ್ ಖಾನ್ ಹಾಗೂ ಕರೀನಾ ಕಪೂರ್ ಇವರನ್ನು ಟೈಂ ಮೆಶೀನ್‌ಗಾಗಿ ಆರಿಸಲಾಗಿತ್ತು.

ಆದರೆ ಕಾಲ ಬದಲಾದಂತೆ ವರ್ಮಾ ನಿರ್ಧಾರ ಬದಲಾಯಿತು. ಶಾರೂಕ್ ಜಾಗದಲ್ಲಿ ಅಭಿಷೇಕ್ ಹಾಗೂ ಕರೀನಾ ಜಾಗದಲ್ಲಿ ಐಶ್ವರ್ಯಾರನ್ನು ಬದಲಾಯಿಸಿ ಹೊಸ ಉತ್ಸಾಹದಲ್ಲಿ ಸಿದ್ಧರಾಗಿದ್ದಾರೆ. ಶೀಘ್ರವೇ ನಿರ್ಮಾಣ ಒಪ್ಪಂದಕ್ಕೆ ಸಹಿ ಬೀಳಲಿದೆ.

Share this Story:

Follow Webdunia kannada