Article Bollywood Gossips %e0%b2%9f%e0%b3%86%e0%b2%b2%e0%b2%bf%e0%b2%ab%e0%b3%8b%e0%b2%a8%e0%b3%8d %e0%b2%ae%e0%b2%be%e0%b2%a4%e0%b3%8d%e0%b2%b0%e0%b2%b5%e0%b3%87 %e0%b2%a8%e0%b2%82%e0%b2%ac%e0%b2%b0%e0%b3%8d %e0%b2%b9%e0%b3%8a%e0%b2%82%e0%b2%a6%e0%b2%bf%e0%b2%b0%e0%b3%81%e0%b2%a4%e0%b3%8d%e0%b2%a4%e0%b2%a6%e0%b3%86 108033100014_1.htm

Daily Horoscope

Select Your Language

Notifications

webdunia
webdunia
webdunia
webdunia

ಟೆಲಿಫೋನ್ ಮಾತ್ರವೇ ನಂಬರ್ ಹೊಂದಿರುತ್ತದೆ!

ಶಾರೂಖ್ ಖಾನ್
IFM
"ಅಮಿತಾಬ್ ಮತ್ತು ಅಮೀರ್ ಹಾಗೂ ನನ್ನ ಮಧ್ಯೆ ಯಾರು ನಂ.1 ಎಂದು ಜನ ಮಾತಾಡಿಕೊಳ್ಳುತ್ತಿರುತ್ತಾರೆ. ಅದರೆ ನನಗೆ ನಂಬರುಗಳ ಮೇಲೆ ನಂಬಿಕೆ ಇಲ್ಲ. ನಂಬರ್ ಗೇಮ್ ಸೂಕ್ತವಾದುದೂ ಅಲ್ಲ ಎಂಬುದು ನನ್ನ ಅನಿಸಿಕೆ. ಒಂದು ಹಳೆಯ ಮಾತಿದೆ - ಕೇವಲ ಟೆಲಿಫೋನ್ ಮಾತ್ರವೇ ನಂಬರ್ ಹೊಂದಿರುತ್ತದೆ ಎಂದು. ಅದು ಸರಿಯೇ. ಚಿತ್ರರಂಗ ರೇಸ್ ಅಲ್ಲ. ಇದೊಂದು ಕ್ರಿಯಾಶೀಲ, ಕಾರ್ಯಚಟುವಟಿಕೆಯ ರಂಗ" ಎಂದು ಬಾಲಿವುಡ್ ತಾರೆ ಶಾರೂಕ್ ಖಾನ್ ಹೇಳಿದ್ದಾರೆ.

ಕಿಂಗ್ ಖಾನ್ ಎಂದೇ ಹೆಸರು ಪಡೆದುಕೊಂಡಿರುವ ಲವಲವಿಕೆಯ ನಟ ಶಾರೂಖ್, ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಅವರು ಹೀಗೆಂದು ಹೇಳಿದ್ದಾರೆ. ಇದಲ್ಲದೆ ಇತರ ಕೆಲವು ತನ್ನ ಅನಿಸಿಕೆಗಳನ್ನೂ ಅವರು ಹೇಳಿಕೊಂಡಿದ್ದು ಅದರ ಮುಖ್ಯಾಂಶ ಹೀಗಿದೆ.

ಕ್ರೇಜಿ 4 ನಲ್ಲಿ ಹೃತಿಕ್ ನನಗಿಂತಲೂ ಚೆನ್ನಾಗಿ ಕುಣಿದಿದ್ದಾನೆ. ಇದರಲ್ಲಿ ಹೋಲಿಕೆಯ ಅಗತ್ಯವಿಲ್ಲ. ರಬ್ ನೆ ಬನಾ ಧೀ ಜೋಡಿ ಚಿತ್ರದಲ್ಲಿ, ನಾನು 42ರ ಲವರ್ ಬಾಯ್ ಆಗಿ ನಟಿಸಿಲ್ಲ. ಅದು ಭಿನ್ನವಾದ ಚಿತ್ರವಾಗಿದ್ದು, ಇದು ಜನರಿಗೆ ಹೆಚ್ಚಿನ ಮನರಂಜನೆ ನೀಡುತ್ತದೆ ಎನ್ನುವ ಆಶಯ ನನ್ನದು.

ಕೌನ್ ಬನೇಗಾ ಕರೋಡ್‌ಪತಿಯನ್ನು ವೀಕ್ಷಿಸುವ ಮಂದಿಗೆ ಆ ಸರಣಿಯಲ್ಲಿ ನಾನು ಎರಡು ವಾಚ್ ಧರಿಸುತ್ತಿದ್ದೆ ಎನ್ನುವ ಜಿಜ್ಞಾಸೆ ಏನೂ ಬೇಕಾಗಿಲ್ಲ. ಇದರಲ್ಲಿ ಒಂದು ನನ್ನ ಸ್ವಂತದ್ದು, ಮತ್ತೊಂದು ಸ್ಪರ್ಧಾಳುಗಳಿಗೆ ನೀಡುವುದ್ದಕ್ಕಾಗಿ ಧರಿಸುತ್ತಿದ್ದುದ್ದು. ಇದರಲ್ಲಿ ತಲೆಕೆಡಿಸಿಕೊಳ್ಳ ಬೇಕಾದ ಅವಶ್ಯಕತೆ ಇಲ್ಲ.

Share this Story:

Follow Webdunia kannada