Article Bollywood Gossips %e0%b2%9f%e0%b2%be%e0%b2%b8%e0%b3%8d %e0%b2%b9%e0%b2%be%e0%b2%95%e0%b2%b2%e0%b3%81 %e0%b2%aa%e0%b3%8d%e0%b2%b0%e0%b2%b6%e0%b2%be%e0%b2%82%e0%b2%a4%e0%b3%8d %e0%b2%b0%e0%b3%86%e0%b2%a1%e0%b2%bf 107090600019_1.htm

Daily Horoscope

Select Your Language

Notifications

webdunia
webdunia
webdunia
webdunia

ಟಾಸ್ ಹಾಕಲು ಪ್ರಶಾಂತ್ ರೆಡಿ

ಪ್ರಶಾಂತ್ ರಾಜ್ ಭರವಸೆಯ ನಟರಲ್ಲೊಬ್ಬ
ಪ್ರಶಾಂತ್ ರಾಜ್ ಈ ವರ್ಷ ಬಾಲಿವುಡ್‌ಗೆ ಪ್ರವೇಶ ಪಡೆದ ಭರವಸೆಯ ನಟರಲ್ಲೊಬ್ಬ. ರಾಮ್ ಗೋಪಾಲ್ ವರ್ಮಾ ಅವರ "ಆಗ್" ಚಿತ್ರದ ಅಭಿನಯಕ್ಕೆ ಪ್ರಶಾಂತ್‌ಗೆ ಬೆನ್ನು ತಟ್ಟಿದವರೂ ಇದ್ದಾರೆ.

ಆದರೆ ಚಿತ್ರ ಬಾಕ್ಸ್ ಆಫೀಸಿನಲ್ಲಿ ತೋಪಾಯಿತು ಎನ್ನುವುದು ಬೇರೇ ವಿಚಾರ. ಪ್ರಶಾಂತ್ ಈಗ "ಟಾಸ್" ಹಾಕಲು ರೆಡಿಯಾಗಿದ್ದಾರೆ. ಪ್ರಶಾಂತ್ ಪಂದ್ಯದ ನಾಯಕನಾಗಿ ಟಾಸ್ ಹಾಕುತ್ತಿಲ್ಲ. "ಟಾಸ್" ಚಿತ್ರದಲ್ಲಿ ಎರಡನೇ ಇನ್ನಿಂಗ್ಸ್‌ ಆಡಲು ಪ್ರಶಾಂತ್ ಸಿದ್ಧರಾಗಿದ್ದಾರೆ.

ಮುಖೇಶ್ ರಮಣಿ ನಿರ್ಮಾಣದ ಚಿತ್ರ ಮಾನವ ಸಂಬಂಧಗಳ ಸುತ್ತ ಗಿರಕಿ ಹೊಡೆಯುತ್ತದೆ. ಚಿತ್ರಕಥೆ ಮತ್ತು ಸಂಭಾಷಣೆ ಕಾಟ್ಕರ್ ಅವರದ್ದು, ಚಿತ್ರದ ಟೈಟಲ್ ಬಗ್ಗೆ ಮಾತನಾಡಿದ ಕಾಟ್ಕರ್, "ಟಾಸ್ ಚಿತ್ರ ಮೂಲತಃ ಅದೃಷ್ಟ ತೆಗೆದುಕೊಳ್ಳುವ ತಿರುವು.

ಅದೊಂದು ಸಾಂಕೇತಿಕ ಟೈಟಲ್. ಚಿತ್ರವನ್ನು ವೀಕ್ಷಿಸಿದಾಗ ಟೈಟಲ್ ಚಿತ್ರಕ್ಕೆ ಸರಿಹೊಂದುತ್ತದೆಂದು ಅನಿಸಬಹುದು" ಎಂದು ಹೇಳುತ್ತಾರೆ.

Share this Story:

Follow Webdunia kannada