ಟಾಲಿವುಡ್ ಮಂದಿಯ ನಿದ್ರೆ ಕೆಡಿಸುತ್ತಿರುವ ಫೆಬ್ರವರಿ 5 !
, ಮಂಗಳವಾರ, 7 ಜನವರಿ 2014 (12:24 IST)
ಕಳೆದ ಕೆಲವು ತಿಂಗಳುಗಳಿಂದ ಟಾಲಿವುಡ್ ವಾತಾವರಣ ಹೆಚ್ಚು ಆರಾಮದಾಯಕವಾಗಿಲ್ಲ. ಆ ಚಿತ್ರರಂಗದಲ್ಲಿ ಅನಿರೀಕ್ಷಿತ ಸಾವುಗಳು ಚಿತ್ರಮಂದಿಯನ್ನು ತಲ್ಲಣ ಗೊಳಿಸಿದೆ. ನಿನ್ನೆ ಸತ್ತ ನಟ ಉದಯ್ ಕಿರಣ್ ಅವರ ಸಾವು ಟಾಲಿವುಡ್ ಮಂದಿಯನ್ನು ಹೆಚ್ಚು ಭಯಭೀತರನ್ನಾಗಿ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಆಸಕ್ತಿಕರ ಸಂಗತಿಗಳು ಟಿ ಟೌನ್ ನಲ್ಲಿ ಓಡಾಡುತ್ತಿದೆ. ರಿಯಲ್ ಸ್ಟಾರ್ ಶ್ರೀ ಹರಿ ಕಳೆದ ವರ್ಷ ಅಕ್ಟೋಬರ್ 9 ರಂದು ಮುಂಬೈ ನಲ್ಲಿ ಮರಣಿಸಿದರು .ಆ ಬಳಿಕ ನವೆಂಬರ್ 8 ರಂದು ಹಾಸ್ಯ ನಟ ಎ ವಿ ಎಸ್ ಮರಣಿಸಿದರು. ಈ ಸಾಲು ಅಲ್ಲಿಗೆ ಅಂತ್ಯ ಹಾಡಲಿಲ್ಲ , ಬದಲಿಗೆ ಇದರ ಪಟ್ಟಿ ಮುಂದು ವರೆಯಿತು. ಕಳೆದ ವರ್ಷ 7 ರಂದು ಮತ್ತೊಬ್ಬ ಪ್ರಸಿದ್ಧ ಹಾಸ್ಯ ನಟ ಧರ್ಮವರಪು ಸುಬ್ರಮಣ್ಯ ಮರಣಿಸಿದರು. ಈ ವರ್ಷ ನಟ ಉದಯ್ ಕಿರಣ್ ಸತ್ತಿದ್ದು ಜನವರಿ 6 . ಇವೆಲ್ಲ ಕಂಡ ಸಿನಿಮಂದಿ ಹೆಚ್ಚು ಭಯಭೀತಿ ಎದುರಿಸುತ್ತಿದ್ದಾರೆ. ಇದೆ ಪಟ್ಟಿ ಮುಂದುವರೆದರೆ ನಿಶ್ಚಯವಾಗಿ ಮುಂದಿನ ತಿಂಗಳು 5 ಕ್ಕೆ ಒಂದು ಸಾವು ಖಂಡಿತ.. ಹಾಗೆ ಆದೀತಾ ಎನ್ನುವ ಆತಂಕ ಟಿ ಟೌನ್ ನಲ್ಲಿ ಹರಡಿದೆ. ಆದರೆ ಆ ರೀತಿಯ ಯಾವುದೇ ಅವಘಡ ಆಗದೆ ಇರಲೆಂಬ ಹಾರೈಕೆ ವೆಬ್ ದುನಿಯಾ ಪತ್ರಿಕೆಯದ್ದಾಗಿದೆ.. ಅಂತಹ ಯಾವುದೇ ಅನಾಹುತಗಳು ನಡೆಯದೆ ಇರಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುವ !