Publish Date: Sun, 05 Aug 2007 (13:15 IST)
Updated Date: Sun, 05 Aug 2007 (13:14 IST)
ಧೂಮ್- 2 ಖ್ಯಾತಿಯ ಜೋಡಿ ಐಶ್ವರ್ಯಾ ಮತ್ತು ಹೃತಿಕ್ ರೋಷನ್ ಜೋಡಿಯು,ಅಶುತೋಷ್ ಗೌರಿಕರ್ ಅವರ, ಜೋಧಾ-ಅಕ್ಬರ್ ಚಲನಚಿತ್ರದ ಡಬ್ಬಿಂಗ್ ಕೆಲಸವನ್ನು ಕೈಗೆತ್ತಿಕೊಂಡಿದ್ದು ಶೀಘ್ರದಲ್ಲಿ ಜೋಧಾ ತೆರೆ ಕಾಣುಲ ಲಕ್ಷಣಗಳು ಇವೆ.
ವೇಗದಲ್ಲಿ ಚಿತ್ರದ ಇತರ ಕೆಲಸಗಳು ಸಾಗಿದ್ದು, ಈ ಕುರಿತು ಮುಂಬೈನಲ್ಲಿ ಮಾತನಾಡಿದ ನಿರ್ದೇಶಕ ಗೌರಿಕರ್, ಚಿತ್ರದ ಚಿತ್ರಿಕರಣದ ನಂತರ ಬರುವ ಡಬ್ಬಿಂಗ್ ರಿಕಾರ್ಡಿಂಗ್ ಸುಲಭವಾಗಿ ಮುಗಿಯಲಾರವು.
ಐಶ್ವರ್ಯ ರೈ ಅಭಿನಯದ ಭಾಗಗಳು ಹೈದರಾಬಾದ್‌ನಲ್ಲಿ ಸಾಗಿದ್ದು, ಹೃತಿಕ್ ರೋಷನ್ ಮುಂಬೈನಲ್ಲಿ ಚಿತ್ರಿಕರಣದಲ್ಲಿ ತೋಡಗಿದ್ದಾರೆ.
ಪ್ರಮುಖ ಕಲಾವಿದರ ಡಬ್ಬಿಂಗ್ ಅಲ್ಲದೇ ಇತರ ಡಜನ್ ಲೆಕ್ಕದಲ್ಲಿ ಇರುವ ಸಹ ಕಲಾವಿದರ ಡಬ್ಬಿಂಗ್ ಕಾರ್ಯ ನಡೆಯಬೇಕಾಗಿದ್ದು. ಅದರಲ್ಲೂ ಕಲಾವಿದರ ಉರ್ದು ಉಚ್ಚಾರಣೆ ಶುದ್ದವಾಗಿರಬೇಕಾಗಿದೆ.ಇಲ್ಲದೇ ಹೊದಲ್ಲಿ ಬೃಹತ್ ಬಜೆಟ್ ಚಿತ್ರದಲ್ಲಿ ಒಂದು ಸಣ್ಣ ಸಂಭಾಷಣೆಯಲ್ಲಿ ತಪ್ಪಾದರೂ ಚಿತ್ರದಲ್ಲಿ ಅಭಾಸ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಡಬ್ಬಿಂಗ್ ಕೆಲಸವನ್ನು ಸೂಕ್ಷ್ಮವಾಗಿ ಎಚ್ಚರಿಕೆಯಿಂದ ಮಾಡಬೇಕಾಗಿದೆ.
ವಾಸ್ತವಿಕವಾಗಿ ಹೃತಿಕ್ ಮತ್ತು ಐಶ್ ಇಬ್ಬರೂ ಅಶುತೋಷ್ ಗೌರಿಕರ್ ಅವರ ನಿರಿಕ್ಷೆಯ ಮಟ್ಟದಲ್ಲಿ ಡೈಲಾಗ್ ಡೆಲಿವರಿಗೆ ಪ್ರಯತ್ನ ಪಡುತ್ತಿದ್ದಾರೆ.