Article Bollywood Gossips %e0%b2%9c%e0%b3%88%e0%b2%b2%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%b8%e0%b2%82%e0%b2%9c%e0%b2%af%e0%b2%a6%e0%b2%a4%e0%b3%8d%e0%b2%a4%e0%b3%8d %e0%b2%b2%e0%b3%81%e0%b2%82%e0%b2%97%e0%b2%bf %e0%b2%a1%e0%b2%be%e0%b2%a8%e0%b3%8d%e0%b2%b8%e0%b3%8d 113092600004_1.htm

Daily Horoscope

Select Your Language

Notifications

webdunia
webdunia
webdunia
webdunia

ಜೈಲಿನಲ್ಲಿ ಸಂಜಯದತ್ತ್ ಲುಂಗಿ ಡಾನ್ಸ್?

ಸಂಜಯದತ್ತ್
PR
ಸಂಜಯ್ ದತ್ ಅಭಿಮಾನಿಗಳಿಗೊಂದು ಸಿಹಿಸುದ್ದಿ ಇದೆ. ಬಾಲಿವುಡ್ನಲ್ಲಿ ಪ್ರಸಿದ್ಧ ನಟನಾಗಿದ್ದ ಸಂಜಯ್ ಯರವಾಡ ಜೈಲಿನಲ್ಲಿ ಈಗ ಹೇಗೆ ದಿನ ಕಳೆಯುತ್ತಿದ್ದಾರೆ ಎಂದು ಚಿಂತಿಸುವವರಿಗೆ ಸಂತಸದ ಸುದ್ದಿ ಇದೆ. ಅವರು ಅಲ್ಲಿ ಸದಾ ತಲೆ ಮೇಲೆ ಕೈ ಹೊತ್ತು ಕೂತು ದಿನದೂಡುತ್ತಿಲ್ಲ, ಅದರ ಬದಲಾಗಿ ಸಂಜಯ್ ಖುಷಿಯಾಗಿಯೇ ದಿನ ಕಳೆಯುತ್ತಿದ್ದಾರೆ. ಅಲ್ಲಿನ ಖೈದಿಗಳ ಜೊತೆ ಕೈಜೋಡಿಸಿ ಅಲ್ಲೇ ನಾಟಕಗಳನ್ನು ಆಡುತ್ತಾ ಮತ್ತೆ ಬಣ್ಣ ಹಚ್ಚಿದ್ದಾರೆ. ಸಂಜು ಜೊತೆ ಒಟ್ಟು 50 ಖೈದಿಗಳು ಈ ನಾಟಕದಲ್ಲಿ ಪಾತ್ರಧಾರಿಗಳಾಗಿದ್ದು ವಿಶೇಷವಾಗಿತ್ತು.

ಇದೆಲ್ಲಾ ಕೇವಲ ಮನರಂಜನೆಗಾಗಿ ಮಾಡುತ್ತಿಲ್ಲ. ಖೈದಿಗಳೇ ಇದಕ್ಕೆ ಬಂಡವಾಳ ಹೂಡಿದ್ದು ಈ ನಾಟಕ ಸೆ.26ರಂದು ಪ್ರದರ್ಶನಗೊಳ್ಳಲಿದೆ. ನಿಧಿ ಸಂಗ್ರಹಕ್ಕಾಗಿ ಸಂಜಯ್ ಅವರಿಂದ ಇದೊಂದು ಸೇವೆ ಎನ್ನಲಾಗಿದೆ. ಸಂಗ್ರಹವಾಗುವ ಮೊತ್ತದಿಂದ ಜೈಲಿನ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಬಳಸಿಕೊಳ್ಳಲಾಗುತ್ತದೆ. ದೂರದರ್ಶನ ವಾಹಿನಿಯಲ್ಲಿ ಈ ನಾಟಕ ಪ್ರಸಾರವಾಗಲಿದ್ದು ಸಂಜಯ್ದತ್ ಪ್ರಾಕ್ಟೀಸ್ ಮಾಡುತ್ತಿರುವ ಕೆಲ ಚಿತ್ರಗಳು ಈಗಾಗಲೇ ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಈ ನಾಟಕದಲ್ಲಿ ಸಂಜಯ್ ಮುನ್ನಾಭಾಯ್ ಎಂಬಿಬಿಎಸ್ ಚಿತ್ರದ ಡೈಲಾಗ್ಗಳನ್ನು ಹೇಳಲಿದ್ದಾರಂತೆ ಹಾಗೂ ಚೆನ್ನೈ ಎಕ್ಸ್ಪ್ರೆಸ್ ಚಿತ್ರದ ಲುಂಗಿ ಡ್ಯಾನ್ಸ್ ಹಾಡಿಗೂ ಹೆಜ್ಜೆ ಹಾಕಲಿದ್ದಾರಂತೆ. ಆದರೆ ಈ ನಾಟಕದ ಹೆಸರು ಹಾಗೂ ಸಂಜಯ್ ಪಾತ್ರದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

Share this Story:

Follow Webdunia kannada