Select Your Language

Notifications

webdunia
webdunia
webdunia
webdunia

ಜೂನಿಯರ್ ಎಂಟಿ ಆರ್ ಪತ್ನಿ ಮೇಲೆ ಈಗ ಟಾಲಿವುಡ್ ಕಣ್ಣು !

ಲಕ್ಷ್ಮಿ ಪ್ರಣತಿ
, ಮಂಗಳವಾರ, 4 ಫೆಬ್ರವರಿ 2014 (10:36 IST)
PR
PR
ಸಾಮಾನ್ಯವಾಗಿ ಯಾವುದೇ ಚಿತ್ರರಂಗ ಆಗಿರಲಿ ಹೊಸ ಹೊಸ ನ್ಯೂಸ್ ಗಳು ಇದ್ದೆ ಇರುತ್ತದೆ.ದಿನಕ್ಕೊಬ್ಬರು ಟಾಪ್ ಹೀರೋ-ಹೀರೋಯಿನ್ ಮೇಲೆ ಏನಾದರೊಂದು ಸಂಗತಿಯು ಇದ್ದೆ ಇರುತ್ತದೆ. ಅದೇ ರೀತಿ ಟಾಲಿವುಡ್ ಈಗ ಎಲ್ಲರ ಗಮನ ಜೂನಿಯರ್ ಎಂಟಿಆರ್ ಅವರ ಬಗ್ಗೆ ಸುದ್ದಿ. ಆದರೆ ಮುಖ್ಯವಾಗಿ ಅವರ ಬಗ್ಗೆ ಅಲ್ಲ ಅವರ ಹೆಂಡತಿ ಲಕ್ಷ್ಮಿ ಪ್ರಣತಿ ಬಗ್ಗೆ. ಈಕೆ ಏನು ಮಾಡಿದ್ದಾಳೆ ಎನ್ನುವ ಬಗ್ಗೆ ಕುತೂಹಲ ಮೂಡುವುದು ಸಹಜ. ಅಂತಾದ್ದೇನು ಆಗಿಲ್ಲ, ಆದರೆ ಇತ್ತೀಚಿಗೆ ಟಾಲಿವುಡ್ ಸಾಮ್ರಾಜ್ಯದ ಅಧಿಪತಿ ಆಗಿದ್ದ ಎಂಟಿ ಆರ್ ಅವರ ಜನ್ಮದಿನದಂದು ಲಕ್ಷ್ಮಿ ಪ್ರಣತಿ ಅಲ್ಲಿಗೆ ಬರಲೇ ಇಲ್ಲವಂತೆ!

ಅಂದರೆ ಕಳೆದ ವರ್ಷ ಈ ಜೋಡಿ ಒಟ್ಟಾಗಿ ಬಂದಿದ್ದರು, ಆದರೆ ಈ ವರ್ಷ ಮಾತ್ರ ಆತ ಒಬ್ಬರೇ ಬಂದಿದ್ದು ಎಂಟಿ ಆರ್ ಅಭಿಮಾನಿಗಳಿಗೆ ಸಣ್ಣ ಸಿಟ್ಟು ಉಂಟಾಗಲು ಕಾರಣವಾಗಿದೆ. ಸುದ್ದಿ ಅದಲ್ಲ, ಆಕೆ ಗರ್ಭವತಿ ಆಗಿದ್ದಾಳಂತೆ. ಅದಕ್ಕೆ ಬಂದಿಲ್ಲ ಎನ್ನುತ್ತಿದೆ ಮೂಲಗಳು. ಇತ್ತಿಚೆಗೆ ಈ ಜೂನಿಯರ್ ಎಂಟಿ ಆರ್ ಗೆ ಗೆಲುವು ದೂರ ಆಗಿದೆ. ಇದೆ ಸಮಯದಲ್ಲಿ ತಮ್ಮ ಚಿತ್ರಗಳ ಗೆಲುವಿಗಾಗಿ ಆತ ಅನೇಕ ಸಾಹಸಗಳನ್ನು ಮಾಡುತ್ತಿದ್ದಾರೆ, ಅಲ್ಲದೆ, ಅದಕ್ಕೆ ಪೂರಕವಾದ ಪ್ರಯತ್ನಗಳು ಸಹ ನಡೆದಿವೆ.
ಇದರ ಮಧ್ಯೆ ಅವರು ತಮ್ಮದೇ ಆದ ಪ್ರೊಡಕ್ಷನ್ ಹೌಸ್ ತೆಗೆಯುವತ್ತ ಗಮನ ನೆಟ್ಟಿದ್ದಾರೆ, ಒಟ್ಟಾರೆ ಇವೆಲ್ಲ ಸಂಗತಿಗಳಿಂದ ಬ್ಯುಸಿ ಆಗಿರುವ ಜೂನಿಯರ್ ಎಂಟಿ ಆರ್ ಟಾಲಿವುಡ್ ನ ಇಂತಹ ಯಾವುದೇ ಗಾಸಿಪ್ ಗಳ ಬಗ್ಗೆನು ತಲೆ ಕೆಡಿಸಿಕೊಳ್ತಾ ಇಲ್ಲವಂತೆ !

Share this Story:

Follow Webdunia kannada