Article Bollywood Gossips %e0%b2%9c%e0%b2%bf%e0%b2%af%e0%b2%be %e0%b2%aa%e0%b2%be%e0%b2%a4%e0%b3%8d%e0%b2%b0 %e0%b2%a4%e0%b3%81%e0%b2%82%e0%b2%ac%e0%b2%be %e0%b2%95%e0%b2%a0%e0%b2%bf%e0%b2%a3 %e0%b2%93%e0%b2%82 %e0%b2%aa%e0%b3%81%e0%b2%b0%e0%b2%bf 107120300009_1.htm

Daily Horoscope

Select Your Language

Notifications

webdunia
webdunia
webdunia
webdunia

ಜಿಯಾ ಪಾತ್ರ ತುಂಬಾ ಕಠಿಣ : ಓಂ ಪುರಿ

ಜಿಯಾ
ಜೂಲೀ ರೋಬರ್ಟ್ ಮತ್ತು ಟಾಮ್ ಹಾಂಕ್ಸ್ ತಾರಾಗಣದ ಅಂತರಾಷ್ಟ್ರೀಯ ಚಿತ್ರ 'ಚಾರ್ಲಿ ವಿಲ್ಸನ್ಸ್ ವಾರ್'ನಲ್ಲಿ ಪಾಕಿಸ್ತಾನದ ದಿವಂಗತ ಅಧ್ಯಕ್ಷ ಜಿಯಾ ಉಲ್ ಹಕ್ ಅವರ ಪಾತ್ರ ಮಾಡುವುದು ಬಾಲಿವುಡ್ ಶ್ರೇಷ್ಠ ನಟ ಓಂ ಪುರಿ ಅವರಿಗೆ ತುಂಬಾ ಕಷ್ಟವಾಗಿತ್ತು.

ಮೈಕ್ ನಿಕೋಲ್ ಅವರ 'ಚಾರ್ಲಿ ವಿಲ್ಸನ್ ವಾರ್' ನಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜಿಯಾ ಉಲ್ ಹಕ್ ಅವರ ಪಾತ್ರವನ್ನು ಹೇಗೆ ಮಾಡುವುದು ಎಂದು ನನಗೆ ತಿಳಿದಿಲ್ಲ ಎಂಬುದಾಗಿ ಬಾಲಿವುಡ್‌ನ ಪ್ರತಿಭಾವಂತ ನಟ ಓಂ ಪುರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಾಯೋಗಿಕವಾಗಿ ಚರ್ಚಿಸಬಹುದಾದಂತಹ ಯಾವುದೇ ದೃಶ್ಯ ದಾಖಲೆಗಳು ಅವರ ಮೇಲೆ ಇಲ್ಲ. .ಯಾವುದೇ ಅವರ ದೈಹಿಕ ಲಕ್ಷಣಗಳನ್ನು ಅನುಕರಿಸುವ ಉದ್ದೇಶವನ್ನು ಹೊಂದಿಲ್ಲ. ಅತ್ಯಂತ ಬುದ್ಧಿವಂತರಾದ ಅವರ ಕಾರ್ಯಗಳಲ್ಲಿನ ಅವರ ಕೆಲವು ವಿಶಿಷ್ಟ ಸ್ವಭಾವದ ಗ್ರಹಿಕೆಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಅವರು ಹೇಳಿದರು.

ಜಿಯಾ ಬಗ್ಗೆ ತಿಳಿದಿರುವ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರನ್ನು ಪುರಿ ಅವರು ಭೇಟಿ ಮಾಡಿದ್ದರು. ಶತ್ರುಘ್ನ ಸಿನ್ಹಾ ಜಿಯಾ ಅವರನ್ನು ಅನೇಕ ಬಾರಿ ಭೇಟಿ ಮಾಡಿದ್ದು, ಅವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದಾರೆ. ಅವರು ಅತಿಯಾಗಿ ನಗುತ್ತಿದ್ದರು ಎಂಬುದಾಗಿ ಈ ಪಾಕಿಸ್ತಾನ ನಾಯಕನ ಬಗ್ಗೆ ಶತ್ರುಘ್ನ ಅವರು ನನಗೆ ಕೆಲವು ವಿಶೇಷವಾದ ಸಂಗತಿಗಳನ್ನು ತಿಳಿಸಿದ್ದಾರೆ. ಆ ಲಕ್ಷಣವನ್ನು ನಾನು ಈ ಪಾತ್ರದಲ್ಲಿ ಸೇರಿಸಿಕೊಂಡಿದ್ದೇನೆ. ಎಂದು ಅವರು ಹೇಳಿದರು.

ಅವರ ವ್ಯಂಗಚಿತ್ರವನ್ನು ಮಾಡುವ ಉದ್ದೇಶವನ್ನು ನಾನು ಹೊಂದಿರಲಿಲ್ಲ. ಅತಿರೇಕಕ್ಕೆ ಹೋಗುವುದು ಯಾವತ್ತೂ ಅಪಾಯಕರವಾಗಿದೆ. ಆದರೆ ಜಿಯಾ ಅವರನ್ನು ಚೌಕಾಶಿ ಮನೋಭಾವದವರಾಗಿ ರೂಪಿಸಬೇಕಾಗಿದೆ ಎಂದು ಅವರು ಹೇಳಿದರು.

ಚಿತ್ರದಲ್ಲಿ ಕೆಲಸ ಮಾಡುವ ಮೊದಲು ಚಿತ್ರದ ಸಾಹಿತ್ಯ ಮೇಕಪ್ ಮತ್ತು ಕಾಸ್ಟ್ಯೂಂ ಬಗ್ಗೆ ನಿರ್ದೇಶಕ ನಿಕೋಲಸ್ ಅವರೊಂದಿಗೆ ಮಾತುಕತೆ ನಡೆಸಲು ಪುರಿ ಲಾಸ್ ಏಂಜಲ್ಸ್‌ಗೆ ತೆರಳಿದ್ದರು.

Share this Story:

Follow Webdunia kannada